ನನ್ನ ವಿರುದ್ಧ ಯಾರೋ ಆಗದೇ ಇರೋರು ರಾಜಕೀಯವಾಗಿ ಷಡ್ಯಂತ್ರ ಮಾಡಿದ್ದಾರೆ: ಪ್ರಜ್ವಲ್‌ ರೇವಣ್ಣ

ಪ್ರಜ್ವಲ್‌​ಗೆ ಚೇರ್ ವ್ಯವಸ್ಥೆ ಮಾಡಿದ ಎಸ್ಐಟಿ ಅಧಿಕಾರಿಗಳು
ಯಾರನ್ನು ಮಾತನಾಡಿಸದೇ ಮೌನವಾಗೇ ಇರುವ ಪ್ರಜ್ವಲ್
ತನಿಖೆಗೆ ಸಂಬಂಧಪಟ್ಟವರು ಮಾತ್ರ ಮಾತನಾಡಿಸಬೇಕು

Share this Video
  • FB
  • Linkdin
  • Whatsapp

ಪ್ರಜ್ವಲ್ ರೇವಣ್ಣ(Prajwal Revanna) ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ(Sexual assault case) ದಾಖಲಾಗಿದ್ದು, ಎಸ್ಐಟಿ(SIT) ಅಧಿಕಾರಿಗಳಿಂದ ವಿಚಾರಣೆ ನಡೆಸಲಾಗುತ್ತಿದೆ. ಪ್ರಕರಣದ ತನಿಖಾಧಿಕಾರಿಗಳಿಂದ ಪ್ರಶ್ನೆಗಳ ಸುರಿಮಳೆಯನ್ನೇಗೈಯ್ಯಲಾಗುತ್ತಿದೆ. ಆದ್ರೆ ಎಸ್ಐಟಿ ಪ್ರಶ್ನೆಗೆ ಪ್ರಜ್ವಲ್‌ ರೇವಣ್ಣ ಸೂಕ್ತ ಉತ್ತರ ನೀಡಿಲ್ಲ. ಪ್ರತಿ ಪ್ರಶ್ನೆಗೆ ತನ್ನದೇ ಶೈಲಿಯಲ್ಲಿ ಉತ್ತರವನ್ನು ಪ್ರಜ್ವಲ್ ನೀಡುತ್ತಿದ್ದಾರೆ. ನನ್ನ ವಿರುದ್ಧ ಯಾರೋ ಆಗದೇ ಇರೋರು ಷಡ್ಯಂತ್ರ ಮಾಡಿದ್ದಾರೆ. ಇದರಲ್ಲಿ ನನ್ನದು ಏನೂ ತಪ್ಪಿಲ್ಲ. ನಾನು ರಾಜಕೀಯವಾಗಿ ಬೆಳೆಯಬಾರದು ಅಂತಾ ಸಂಚು ರೂಪಿಸಿದ್ದಾರೆ. ರಾಜಕೀಯವಾಗಿ ನನ್ನನ್ನು ಮುಗಿಸಲು ಪ್ಲ್ಯಾನ್ ಮಾಡಿದ್ದಾರೆ ಎಂದು ಪ್ರಜ್ವಲ್‌ ರೇವಣ್ಣ ಹೇಳಿದ್ದಾರೆ. ಇದೊಂದು ರಾಜಕೀಯ ಷಡ್ಯಂತ್ರ. ಪ್ರಜ್ವಲ್ ಉತ್ತರಕ್ಕೆ ಬೇರೆ ಆಯಾಮಗಳಲ್ಲಿ SIT ವಿಚಾರಣೆ ನಡೆಸುತ್ತಿದೆ. ಸಂತ್ರಸ್ತೆ ಹೇಳಿಕೆ ಮುಂದಿಟ್ಟು ಎಸ್​ಐಟಿ ವಿಚಾರಣೆ ನಡೆಸುತ್ತಿದೆ. ಕೊಠಡಿಯಲ್ಲಿ ನೆಲೆದ ಮೇಲೆ ಕೂರಲು ಪರದಾಟ ಪಡುತ್ತಿದ್ದಾರಂತೆ.

ಇದನ್ನೂ ವೀಕ್ಷಿಸಿ:  ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಬಿಗ್ ಶಾಕ್: ಬಿಜೆಪಿ-ಜೆಡಿಎಸ್​ ದೋಸ್ತಿಗೆ ಅತಿಹೆಚ್ಚು ಸ್ಥಾನವೆಂದ ಎಲ್ಲ ಸಮೀಕ್ಷೆ!

Related Video