ಸೆಂಟ್ರಲ್ ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ, ಮುಖ್ಯ ಅಧಿಕಾರಿ ವರ್ಗಾವಣೆ: ಆರಗ ಆದೇಶ

ಹರ್ಷ ಹಂತಕರಿಗೆ ಸೆಂಟ್ರಲ್ ಜೈಲ್‌ನಲ್ಲಿ ರಾಜಾತಿಥ್ಯ ವರದಿ ಬಳಿಕ ಎಚ್ಚೆತ್ತ ಗೃಹ ಸಚಿವ ಆರಗ ಜ್ಞಾನೇಂದ್ರ, ಪರಪ್ಪನ ಅಗ್ರಹಾರ ಜೈಲಿನ ಮುಖ್ಯ ಅಧಿಕಾರಿಯನ್ನು ವರ್ಗಾವಣೆ ಮಾಡುವಂತೆ ಆದೇಶಿಸಿದ್ದಾರೆ. ಮೊಬೈಲ್ ಬಳಕೆ ಬಗ್ಗೆ ಪ್ರಕರಣ ದಾಖಲಾಗುತ್ತದೆ ಎಂದಿದ್ಧಾರೆ.  
 

First Published Jul 4, 2022, 3:22 PM IST | Last Updated Jul 4, 2022, 3:22 PM IST

ಶಿವಮೊಗ್ಗ (ಜು. 04):  ಹಿಂದೂ ಕಾರ್ಯಕರ್ತ ಹರ್ಷ ಹತ್ಯೆಗೆ ಸಂಬಂಧಿಸಿದಂತೆ ಸ್ಫೋಟಕ ಸುದ್ದಿ ಇದು. ಜೈಲಿನಲ್ಲಿ ಕುಳಿತು ಮೋಜು ಮಸ್ತಿ ಮಾಡಿದ್ದಾರೆ ಹರ್ಷ ಕೊಲೆಗಾರರು. ವಾಟ್ಸಾಪ್, ವಿಡಿಯೋ ಕಾಲ್ ಮಾಡಿ ಕುಟುಂಬಸ್ಥರ ಜೊತೆ ಮಾತನಾಡಿದ್ದಾರೆ. ಜೈಲಿನಲ್ಲೇ ಕುಳಿತು ಹಣಕ್ಕಾಗಿ ಡಿಮ್ಯಾಂಡ್ ಕೂಡಾ ಮಾಡುತ್ತಿದ್ದಾರೆ.  ಹಂತಕರಿಗೆ ರಾಜಾತಿಥ್ಯ ಸಿಗುತ್ತಿದೆ. ಎಲ್ಲಾ ಆರೋಪಿಗಳ ಬಳಿ ಮೊಬೈಲ್ ಇದೆ. ವರದಿ ಬಳಿಕ ಎಚ್ಚೆತ್ತ ಗೃಹ ಸಚಿವ ಆರಗ ಜ್ಞಾನೇಂದ್ರ, ಪರಪ್ಪನ ಅಗ್ರಹಾರ ಜೈಲಿನ ಮುಖ್ಯ ಅಧಿಕಾರಿಯನ್ನು ವರ್ಗಾವಣೆ ಮಾಡುವಂತೆ ಆದೇಶಿಸಿದ್ದಾರೆ. ಮೊಬೈಲ್ ಬಳಕೆ ಬಗ್ಗೆ ಪ್ರಕರಣ ದಾಖಲಾಗುತ್ತದೆ ಎಂದಿದ್ಧಾರೆ.

ಹರ್ಷ ಹಂತಕರಿಗೆ ಪರಪ್ಪನ ಅಗ್ರಹಾರದಲ್ಲಿ ರಾಜಾತಿಥ್ಯ, ಜೋರಾಗಿದೆ ಮೋಜು-ಮಸ್ತಿ  

Video Top Stories