ಜಮೀರ್ ಆಪ್ತನ ಐಷಾರಾಮಿ ಜೀವನಕ್ಕೆ ಸಿಸಿಬಿಯೆ 'ಶೇಖ್'; ಜಮೀರ್‌ಗೂ ನಡುಕ ಶುರು!
ಜಮೀರ್ ಅಹ್ಮದ್ ಖಾನ್ ಆಪ್ತ, ಕ್ಯಾಸಿನೋ ಮಾಲಿಕ ಶೇಖ್ ಬೆನ್ನತ್ತಿದೆ ಸಿಸಿಬಿ. ಈತನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದರೆ ಇನ್ನಷ್ಟು ಮಾಹಿತಿ ಸಿಗುತ್ತದೆ. ಈತನ ಬಗ್ಗೆ ಡಿಟೇಲ್ಸ್ ಕಲೆ ಹಾಕುವಾಗ, ಮಹತ್ವದ ವಿಚಾರಗಳು ಸಿಸಿಬಿಗೆ ಲಭ್ಯವಾಗಿದೆ.
ಬೆಂಗಳೂರು (ಸೆ. 12): ಜಮೀರ್ ಅಹ್ಮದ್ ಖಾನ್ ಆಪ್ತ, ಕ್ಯಾಸಿನೋ ಮಾಲಿಕ ಶೇಖ್ ಬೆನ್ನತ್ತಿದೆ ಸಿಸಿಬಿ. ಈತನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದರೆ ಇನ್ನಷ್ಟು ಮಾಹಿತಿ ಸಿಗುತ್ತದೆ. ಈತನ ಬಗ್ಗೆ ಡಿಟೇಲ್ಸ್ ಕಲೆ ಹಾಕುವಾಗ, ಮಹತ್ವದ ವಿಚಾರಗಳು ಸಿಸಿಬಿಗೆ ಲಭ್ಯವಾಗಿದೆ.
ಡ್ರಗ್ ರಾಣಿ ಸಂಜನಾ, ಕ್ಯಾಸಿನೋ ಕಿಲಾಡಿ ಶೇಖ್, ಜಮೀರ್ ಬುಡಕ್ಕೆ ಬೆಂಕಿ..!
ಈತನಿಗೆ ದೊಡ್ಡ ದೊಡ್ಡ ಉದ್ಯಮಿಗಳ ಜೊತೆ ಸಂಪರ್ಕ ಹೊಂದಿದ್ದಾನೆ. ಉದ್ಯಮಗಳಲ್ಲಿ ಶೇರ್ ಹೋಲ್ಡರ್ ಆಗಿದ್ದಾನೆ. ಕ್ಯಾಸಿನೋ ಮಾಲಿಕತ್ವವನ್ನು ಹೊಂದಿದ್ದಾನೆ ಎನ್ನಲಾಗುತ್ತದೆ. ಹಾಗಾದರೆ ಈತನ ಮಾಲಿಕತ್ವದ ಕ್ಯಾಸಿನೋದಲ್ಲಿ ಜಮೀರ್ ಅಹ್ಮದ್ ಖಾನ್ ಹಣವೂ ಇದೆಯಾ ಎಂಬ ಪ್ರಶ್ನೆಯೂ ಇದೆ.