
ಅವನಿಗಾಗಿ ಮಗಳನ್ನು ಕಳೆದುಕೊಂಡ್ಳು, ಮಗನ ಮೇಲೆ ತಂದೆಯಿಂದ ಗುಂಡು: ಕರುಳು ಹಿಂಡುವ 2 ಕಥೆಗಳು
ಇನ್ಸ್ಟಾಗ್ರಾಂನಲ್ಲಿ ಪರಿಚಯವಾದವನಿಗಾಗಿ ಗಂಡನನ್ನು ಬಿಟ್ಟು ಬಂದ ಮಹಿಳೆಗೆ ತನ್ನ ಮಗಳನ್ನು ಕಳೆದುಕೊಳ್ಳುವ ದುರಂತ ಎದುರಾಗುತ್ತದೆ. ಮತ್ತೊಂದು ಘಟನೆಯಲ್ಲಿ, ಸೌಂಡ್ ಸ್ಪೀಕರ್ ವಿಚಾರಕ್ಕೆ ಶುರುವಾದ ಜಗಳದಲ್ಲಿ ತಂದೆಯೇ ತನ್ನ ಮಗನಿಗೆ ಗುಂಡು ಹಾರಿಸುತ್ತಾನೆ. ಈ ಎರಡೂ ಕರುಳು ಹಿಂಡುವ ಕಥೆಗಳ ವರದಿ ಇಲ್ಲಿದೆ.
ಅದು ಹೆಣ್ಣು ದಿಕ್ಕಿಲ್ಲದ ಮನೆ.. ಮನೆಯ ಯಜಮಾನಿ ವರ್ಷಗಳ ಹಿಂದೆ ತೀರಿಹೋಗ್ತಾರೆ.. ಅಂದಿನಿಂದ ಅಪ್ಪ ಮಗ ಇಬ್ಬರೇ ಆ ಮನೆಯಲ್ಲಿ ವಾಸ ಮಾಡುತ್ತಿರುತ್ತಾರೆ.. ಏನೇ ಕೆಲಸವಿದ್ರೂ ಇಬ್ಬರೂ ಸೇರಿಯೇ ಮಾಡುತ್ತಿದ್ರು.. ಆದ್ರೆ ಆವತ್ತೊಂದು ದಿನ ತಂದೆಯೇ ತನ್ನ ಮಗನಿಗೆ ಗುಂಡು ಹಾರಿಸಿದ್ದ.. ಯಾಕೆ ಅಂತ ಪರಿಶೀಲಿಸಿದ್ರೆ ಸೌಂಡ್ ಸ್ಪೀಕರ್ ವೀಚಾರಕ್ಕೆ ಶುರುವಾದ ಜಗಳ ಫೈರಿಂಗ್ ಮಾಡುವ ಹಂತಕ್ಕೆ ಹೋಗಿದೆ ಅನ್ನೋದು ಗೊತ್ತಾಗಿತ್ತು.. ಒಂದು ಸಣ್ಣ ಜಗಳ ಅಲ್ಲಿ ತಂದೆಯೇ ಮಗನ ಮೇಲೆ ಫೈರಿಂಗ್ ಮಾಡುವಂತಾಗಿತ್ತು..