ರಾಜ್ಯದಲ್ಲಿ 'ಸ್ಯಾಂಟ್ರೋ ರವಿ' ರಾಜಕೀಯ ಫೈಟ್: ಇದು ಡಿವೈಎಸ್‌ಪಿ ಪುತ್ರ ಪಿಂಪ್‌ ಆದ ಕತೆ

ಸ್ಯಾಂಟ್ರೋ ರವಿ ವಿರುದ್ಧ ಪ್ರಕರಣ ದಾಖಲಾಗುತ್ತಿದ್ದಂತೆ ಆತನ ಒಂದೊಂದೆ ಕರಾಳ ಮುಖಗಳು ಬಯಲಾಗತೊಡಗಿವೆ. ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್.
 

Share this Video
  • FB
  • Linkdin
  • Whatsapp

ಅವನೊಬ್ಬ ಹಾರ್ಡ್ ಕೋರ್ ಕ್ರಿಮಿನಲ್. ತನ್ನ ಹೆಂಡತಿಯೇ ಆತನನ್ನ ಪಿಂಪ್ ಅಂತ ಕರೆದಿದ್ಲು. ಅಂಥಹ ನೀಚ ವ್ಯಕ್ತಿಯ ಬಗ್ಗೆ ಇವತ್ತು ರಾಜಕೀಯ ನಾಯಕರು, ಅಷ್ಟೇ ಯಾಕೆ ನಮ್ಮ ರಾಜ್ಯದ ಮುಖ್ಯಮಂತ್ರಿಗಳೇ ಅವನ ಬಗ್ಗೆ ಹೇಳಿಕೆ ನೀಡುವ ಮಟ್ಟಕ್ಕೆ ಆತ ಬೆಳೆದು ಬಿಟ್ಟಿದ್ದಾನೆ. ರಾಜ್ಯ ರಾಜಕೀಯದಲ್ಲಿರುವ ಧರ್ಮ ದಂಗಲ್ ಜೊತೆಗೆ ರಾಜಕೀಯ ಪಕ್ಷಗಳ ನಡುವೆ ಈಗ ಈ ಕ್ರಿಮಿನಲ್ ದಂಗಲ್ ಶುರುವಾಗಿಬಿಟ್ಟಿದೆ. ಅವನೇ ಮೈಸೂರಿನ ರೌಡಿ ಶೀಟರ್ ಸ್ಯಾಂಟ್ರೋ ರವಿ. ಪೊಲೀಸರಿಂದ ತಲೆ ತಪ್ಪಿಸಿಕೊಂಡಿರುವ ಈ ಸ್ಯಾಂಟ್ರೋ ರವಿ ಮೇಲೆ ಅದೆಷ್ಟು ಕೇಸುಗಳಿವೆ ಗೊತ್ತಾ..? ಇವನ ಹಿಸ್ಟರಿ ಕೇಳಿಬಿಟ್ರೆ ಇಂತವನ ಬಗ್ಗೆ ನಮ್ಮ ಜನ ಪ್ರತಿನಿಧಿಗಳು ಮಾತನ್ನಾಡುತ್ತಿದ್ದಾರಾ ಅಂತ ನಾಚಿಕೆಯಾಗದೇ ಇರದು. ಇದರ ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ‌.

Related Video