
ಬಿಂದಾಸ್ ಲೈಫ್ ನಡೆಸುತ್ತಿದ್ದ ಸ್ಯಾಂಟ್ರೋ ರವಿ: ಐಷಾರಾಮಿ ವಿಲ್ಲಾಗಳಲ್ಲಿ ನಡೆಯುತಿತ್ತು 'ನೀಚ' ದಂಧೆ
ಸ್ಯಾಂಟ್ರೋ ರವಿಯ ಕ್ರೈಂ ಕಹಾನಿಗಳು ಬಗೆದಷ್ಟು ಬಯಲಾಗುತ್ತಿದ್ದು, ಮೈಸೂರು ಮಾತ್ರವಲ್ಲ ಬೆಂಗಳೂರಿನಲ್ಲೂ ರವಿಯ ಬಿಗ್ ನೆಟ್‌ವರ್ಕ್ ಇರುವ ಮಾಹಿತಿ ಲಭ್ಯವಾಗಿದೆ.
ರಾಜ್ಯ ರಾಜಧಾನಿಯ ಬೆಂಗಳೂರಿನಲ್ಲಿ ಸ್ಯಾಂಟ್ರೋ ರವಿ ಬಿಂದಾಸ್ ಲೈಫ್ ನಡೆಸುತ್ತಿದ್ದ ಎಂಬ ಮಾಹಿತಿ ಸಿಕ್ಕಿದೆ. ಐಷಾರಾಮಿ ವಿಲ್ಲಾಗಳಲ್ಲಿ ಹೈ-ಫೈ ಜೀವನ ನಡೆಸ್ತಿರೋ ಸ್ಯಾಂಟ್ರೋ ರವಿ, ಬೆಂಗಳೂರು ಹೊರವಲಯವೇ ಸ್ಯಾಂಟ್ರೋ ರವಿಗೆ ಹಾಟ್ ಸ್ಪಾಟ್ ಆಗಿತ್ತು. ಸ್ಯಾಂಟ್ರೋ ರವಿ ಬಳಿ 11 ಐಶಾರಾಮಿ ವಿಲ್ಲಾಗಳು ಇವೆ. ಬೆಂಗಳೂರು ಕೇಂದ್ರ ಭಾಗದಲ್ಲಿ 5 ಹಾಗೂ ಹೊರವಲಯದಲ್ಲಿ 6 ವಿಲ್ಲಾಗಳು ಇವೆ. ವಿಲ್ಲಾಗಳಲ್ಲಿ ಗಣ್ಯರಿಗೆ ಹೆಣ್ಮಕ್ಕಳನ್ನು ಸಪ್ಲೈ ಮಾಡ್ತಿದ್ದನಂತೆ ರವಿ. ರಾಜಕಾರಣಿಗಳ ಜತೆ IAS, IPS ಅಧಿಕಾರಿಗಳಿಗೂ ಆತಿಥ್ಯ ನೀಡ್ತಿದ್ದನಂತೆ ಎಂಬ ಸತ್ಯ ಬಯಲಾಗಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ