Asianet Suvarna News Asianet Suvarna News

ವಿಧಾನಸೌಧ ಸಮೀಪದಲ್ಲೇ ಶ್ರೀಗಂಧ ಕಳ್ಳರ ಕೈಚಳಕ: ರಾತ್ರೋ ರಾತ್ರಿ ಮರ ಹೊತ್ತೊಯ್ದ ಖದೀಮರು !

ವಿಧಾನಸೌಧ ಸಮೀಪದಲ್ಲೇ ಶ್ರೀಗಂಧ ಮರ ಕಳ್ಳತನವಾಗಿರೋ ಪ್ರಕರಣ ಬೆಳಕಿಗೆ ಬಂದಿದೆ. ದುಷ್ಕರ್ಮಿಗಳು ಕಾದು ಕುಳಿತು ಎಸ್.ಜೆ.ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜ್ ಆವರಣದಲ್ಲಿ ಶ್ರೀಗಂಧ ಮರ ಕಳವು ಮಾಡಿ ಕದ್ದು ಪರಾರಿಯಾಗಿದ್ದಾರೆ.ಪೊಲೀಸರು ಶ್ರೀಗಂಧ ಕಳ್ಳರಿಗಾಗಿ ಹುಡುಕಾಟ ನಡೆಸಿದ್ದಾರೆ.
 

ರಾತ್ರೋ ರಾತ್ರಿ ಶ್ರೀಗಂಧ ಮರಕ್ಕೆ ಕೊಡಲಿ. ಮೂರರಲ್ಲಿ ಒಂದು ಇಡೀ ಮರ ಕತ್ತರಿಸಿ ಹೊತ್ತೊಯ್ದ ಖದೀಮರು. ಇದು ಶಕ್ತಿ ಕೇಂದ್ರ ವಿಧಾನಸೌಧದಿಂದ(Vidhana Soudha) ಕೂಗಳತೆ ದೂರದಲ್ಲಿ ನಡೆದ ಗಂಧದ ಮರ(Sandalwood Tree) ಕಳ್ಳತನ. ಬೆಂಗಳೂರಿನ ಕೆ.ಆರ್.ಸರ್ಕಲ್ನಲ್ಲಿ ಹಗಲೊತ್ತಲ್ಲಿ ವಾಹನ ದಟ್ಟಣೆ ನಿಮಗೆಲ್ಲ ಗೊತ್ತೇಯಿದೆ. ರಾತ್ರಿ ಹೊತ್ತಲ್ಲೂ ಇಲ್ಲಿ ವಾಹನ ಓಡಾಟ ಇದ್ದೇ ಇರುತ್ತೆ. ಆದ್ರೆ, ಇದೇ ಕೆಆರ್ ಸರ್ಕಲ್ನಲ್ಲಿರುವ ಎಸ್.ಜೆ.ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜ್ ಆವರಣದಲ್ಲಿನ ಶ್ರೀಗಂಧ ಮರವನ್ನು ಖದೀಮರು ಹೊತ್ತೊಯ್ದಿದ್ದಾರೆ. ರಾತ್ರೋ ರಾತ್ರಿ ಮರವನ್ನು ತುಂಡು ತುಂಡಾಗಿ ಕತ್ತರಿಸಿಕೊಂಡು ಹೊತ್ತೊಯ್ದಿದ್ದಾರೆ. ಕಳೆದ 10 ರಿಂದ 15 ವರ್ಷಗಳಿಂದ ಕಾಲೇಜ್ ಆವರಣದಲ್ಲಿ ಮೂರು ಶ್ರೀಗಂಧ ಮರ ಬೆಳೆದಿದ್ದವು. ಖದೀಮರು ಹಲವು ದಿನದಿಂದ ಕಾದು ಕುಳಿತು ಸಮಯ ಸಾಧಿಸಿ ರಾತ್ರಿ ಹೊತ್ತಲ್ಲಿ ಒಂದು ಶ್ರೀಗಂಧ ಮರ ಕಳ್ಳತನ(Theft) ಮಾಡಿದ್ದಾರೆ.  ಶ್ರೀಗಂಧ ಕಳ್ಳತನ ಬಗ್ಗೆ ಕಾಲೇಜು ಪ್ರಿನಸಿಪಾಲ್ ಸದಾಶಿವಮೂರ್ತಿ ವಿಧಾನಸೌಧ ಠಾಣೆಗೆ ದೂರು ನೀಡಿದ್ದಾರೆ. ಶ್ರೀಗಂಧ ಕಳ್ಳತನ ಜಾಗದಿಂದ ಕೂಗಳತೆ ದೂರದಲ್ಲಿ ವಿಧಾನಸೌಧ ಇದೆ.. ಮತ್ತೊಂದ್ಕಡೆ ಡಿಜಿಐಜಿ ಕಚೇರಿಯೂ ಇದೆ.. ರಾತ್ರಿ ಹೊತ್ತಲ್ಲೂ ಈ ಭಾಗದಲ್ಲಿ ಕೆಲ ವಾಹನಗಳ ಓಡಾಟವೂ ಇದ್ದೇ ಇರುತ್ತೆ.. ಆದ್ರೆ, ಖದೀಮರು ಯಾವ ಭಯವಿಲ್ಲದೇ ಬೆಲೆ ಬಾಳೋ ಗಂಧದ ಮರ ಕದ್ದು ಪರಾರಿಯಾಗಿದ್ದಾರೆ. ಇದೀಗ ಪ್ರಕರಣ ದಾಖಲಿಸಿಕೊಂಡಿರೋ ವಿಧಾನಸೌಧ ಠಾಣೆ ಪೊಲೀಸರು ಗಂಧದ ಚೋರರಿಗೆ ಬಲೆ ಬೀಸಿದ್ದಾರೆ.

ಇದನ್ನೂ ವೀಕ್ಷಿಸಿ:  ಬ್ಯಾಂಕ್ ಮ್ಯಾನೇಜರ್ ದೋಖಾ..ರೈತನಿಗೆ ಸಂಕಷ್ಟ: ಏಷ್ಯಾನೆಟ್‌ ಸುವರ್ಣನ್ಯೂಸ್ ವರದಿಯಿಂದ ಸಮಸ್ಯೆ ಇತ್ಯರ್ಥ

Video Top Stories