ಸ್ಯಾಂಡಲ್‌ವುಡ್ ಡ್ರಗ್ಸ್ ಘಾಟು; ರಾಕಿಂಗ್ ಸ್ಟಾರ್ ಯಶ್ ಹೇಳೋದಿಷ್ಟು!

ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ಘಾಟು/ ನಾಯಕ ನಟ ಯಶ್ ಪ್ರತಿಕ್ರಿಯೆ/ ಸ್ಯಾಂಡಲ್ ವುಡ್ ಮಾತ್ರ ಇದರಲ್ಲಿ ಇಲ್ಲ/ ಯಾರೂ ಇಂಥ ಮಾರಕ ಚಟಕ್ಕೆ ಬಲಿಯಾಬೇಡಿ

First Published Sep 9, 2020, 9:13 PM IST | Last Updated Sep 9, 2020, 9:13 PM IST

ಬೆಂಗಳೂರು(ಸೆ. 09) ಸ್ಯಾಂಡಲ್ ವುಡ್ ನ ಪ್ರಮುಖ ನಟ, ನಿರ್ದೇಶಕ ಮತ್ತು ನಿರ್ಮಾಪಕರು ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಕೊರೋನಾ ಆತಂಕದಿಂದ ಚಿತ್ರರಂಗದ ಮೇಲಾಗಿರುವ ಸಂಕಷ್ಟದ ಬಗ್ಗೆ ಚರ್ಚೆ ಮಾಡಿದರು.

ಮತ್ತೊಂದು ನಟಿಗೂ ಡ್ರಗ್ಸ್ ಕಂಟಕ

ಸ್ಯಾಂಡಲ್ ವುಡ್ ಡ್ರಗ್ಸ್ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ರಾಕಿಂಗ್ ಸ್ಟಾರ್ ಯಶ್, ಈ ಡ್ರಗ್ಸ್ ಎನ್ನುವುದು ಎಲ್ಲಾ ರಂಗಕ್ಕೂ ಮಾರಕ, ಕನ್ನಡ ಚಿತ್ರರಂಗ ಎಂದು ಹೇಳಬೇಡಿ... ಎಲ್ಲರಿಗೂ ಇದು ಸಮಸ್ಯೆಯೇ.. ನಿಮ್ಮ ದೇಹ ನಿಮ್ಮ ತಂದೆ ಯತಾಯಿ ಕೊಟ್ಟ ಭಿಕ್ಷೆ .. ಈ ದರಿದ್ರ ಡ್ರಗ್ಸ್ ನಿಂದ ಹಾಳಾಗಬೇಡಿ ಎಂದು ಹೇಳಿದರು.