Asianet Suvarna News Asianet Suvarna News

ಜೈಲಲ್ಲಿ ದೌಲತ್ತು ಮಾಡಿ ದಿಕ್ಕಾಪಾಲಾದ ಡಿ ಗ್ಯಾಂಗ್​​..! ದರ್ಶನ್ ವಿರುದ್ಧ ದಾಖಲಾಯ್ತು ಮತ್ತೆರಡು FIR..!

ರೇಣುಕಾಸ್ವಾಮಿ ಕೊಲೆ ಆರೋಪದಡಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದ ಡಿ ಗ್ಯಾಂಗ್ ದೌಲತ್ತು ಮಾಡಲು ಹೋಗಿ ದಿಕ್ಕಾಪಾಲಾಗಿದೆ. ದರ್ಶನ್ ಕುರಿತಾದ ಲೇಟೆಸ್ಟ್‌ ಅಪ್‌ಡೇಟ್ ಇಲ್ಲಿದೆ ನೋಡಿ

First Published Aug 28, 2024, 3:02 PM IST | Last Updated Aug 28, 2024, 3:02 PM IST

ಬೆಂಗಳೂರು: ಜೈಲಿಗೆ ಹೋದ ಮೇಲೆ ಮನಪರಿವರ್ತನೆ ಆಗುತ್ತೆ ಅಂದುಕೊಂಡ್ರೆ ದರ್ಶನ್​​​ ಅಲ್ಲಿ ರೌಡಿ ಶೀಟರ್​​ಗಳ ಜೊತೆ ಬಿಂದಾಸ್​​ ಆಗಿ ಟೈಂ ಪಾಸ್​​ ಮಾಡ್ತಿದ್ರು. ಸಿಗರೇಟ್​​ ಇಂದ ಹಿಡಿದು ಗುಂಡು ತುಂಡು ಎಲ್ಲವೂ ಜೈಲಿನಲ್ಲಿ ಈಸಿಯಾಗಿ ಸಿಗ್ತಿದೆ ಅನ್ನೋದು ಅವರ ಒಂದು ಫೋಟೋ ಇಂದಲೇ ಗೊತ್ತಾಗಿತ್ತು. ಆದ್ರೆ ಫೋಟೋ ಮತ್ತು ವಿಡಿಯೋಗಳು ಹೊರ ಬರ್ತಿದಂತೆ 2 ತಿಂಗಳು ಆರಾಮಾಗಿದ್ದ ದರ್ಶನ್​ಗೆ ಸಂಕಷ್ಟ ಶುರುವಾಗಿದೆ..

ಅವರನ್ನ ಪರಪ್ಪನ ಅಗ್ರಹಾರದಿಂದ ಬಳ್ಳಾರಿ ಶಿಫ್ಟ್​ ಮಾಡೋದಕ್ಕೆ ತಯಾರಿ ನಡೆಯುತ್ತಿದೆ. ಅದಕ್ಕೆ ಕೋರ್ಟ್​ ಕೂಡ ಓಕೆ ಅಂದಿದೆ.  ಇನ್ನೂ ಇವನ ಸಹವಾಸ ಮಾಡಿದವರೂ ಸಹ ದಿಕ್ಕಾಪಾಲಾಗ್ತಿದ್ದಾರೆ.. ಅಷ್ಟಕ್ಕೂ ಫೋಟೋ. ವಿಡಿಯೋಗಳು ವೈರಲ್​ ಆದಮೇಲೆ ಏನೇನಾಯ್ತು..?  ಡಿ ಗ್ಯಾಂಗ್​​ ದಿಕ್ಕಾಪಾಲಾಗ್ತಿದ್ದಾರೆ..? ದರ್ಶನ್​​​ ಆ್ಯಂಡ್​ ಗ್ಯಾಂಗ್​​​ನ ಲೇಟೆಸ್ಟ್​​ ಅಪ್ಡಟ್ ಇಲ್ಲಿದೆ ನೋಡಿ.

ರೌಡಿ ವಿಲ್ಸನ್‌ ಗಾರ್ಡನ್ ನಾಗನ ಜತೆ ಜೈಲಲ್ಲಿ ದರ್ಶನ್‌ ಸಿಗರೇಟ್‌ ಸೇದುವ ಫೋಟೋ ವೈರಲ್!

ಜೈಲಿನಲ್ಲೂ ತನ್ನ ಹವಾ ತೋರಿಸಲು ಹೋದ ದರ್ಶನ್​ ಮತ್ತು ಆತನ ಪಟಾಲಂ ಈಗ ದಿಕ್ಕಪಾಲಾಗ್ತಿದೆ.. ಒಬ್ಬೊಬ್ಬರು ಒಂದೊಂದು ಜೈಲಿಗೆ ಶಿಫ್ಟ್​​ ಆಗಿದ್ದಾರೆ. ಆದ್ರೆ ಪರಪ್ಪನ ಅಗ್ರಹಾರದಲ್ಲಿ ಇನ್ನಿಲ್ಲದಂತೆ ಮೆರದಿದ್ದ ದರ್ಶನ್​ ಮೇಲೆ ಇನ್ನೆರಡು ಕೇಸ್​ಗಳು ಬಿದ್ದಿವೆ. ಅಷ್ಟೇ ಅಲ್ಲ ಕೆಲ ಅಧಿಕಾರಿಗಳ ಮೇಲೂ ಕೇಸ್​​ ಆಗಿದೆ. ಆದ್ರೆ ಇಷ್ಟೆಲ್ಲಾ ಮಾಡಿದ ದರ್ಶನ್​ಗೆ ಈಗ ಕೋರ್ಟ್​ ಮನೆಯೂಟ ಸಿಗೋದೂ ಕೂಡ ಡೌಟ್​​ ಆಗಿದೆ. ಈ ಮೂಲಕ ತನ್ನ ತಲೆಯ ಮೇಲೆ ದರ್ಶನ್​​ ತಾನೇ ಕಲ್ಲು ಚಪ್ಪಡಿ ಎಳೆದುಕೊಂಡಿದ್ದಾರೆ
 

Video Top Stories