Asianet Suvarna News Asianet Suvarna News

ಬಡವರಿಗೆ ಕೇರಳದ ಕಂಪನಿಯಿಂದ ಪಂಗನಾಮ.. ಬಡ್ಡಿ ಆಸೆಯಲ್ಲಿದ್ದ ಕಾರ್ಮಿಕರಿಗೆ ಅಸಲೂ ಹೋಯ್ತು..!

ದೇಶದಲ್ಲಿ ಸುಮಾರು 85 ಶಾಖೆ ಹೊಂದಿರೋ ಕೇರಳ ಮೂಲದ ಫೈನಾನ್ಸ್ ಕಂಪೆನಿ. ಸದ್ಯ ಕೆಲ ದಿನಗಳಿಂದ ಫೈನಾನ್ಸ್ ಬಾಗಿಲು ಹಾಕಿದ್ದು, ಬಡವರು ಫೈನಾನ್ಸ್ ಬಾಗಿಲು ಓಪನ್ ಆಗುತ್ತಾ ಅಂತ ಕಾಯುತ್ತಿದ್ದಾರೆ. ಕೂಲಿ ಮಾಡಿ ಹೊಟ್ಟೆ ಬಟ್ಟೆ ಕಟ್ಟಿ ಹೆಚ್ಚಿನ ಬಡ್ಡಿ ಸಿಗುತ್ತೆ ಅಂತ  ಫೈನಾನ್ಸ್ನಲ್ಲಿ ಹಣ ಹೂಡಿಕೆ ಮಾಡಿದ್ದವರು ಇದೀಗ ಬೀದಿಗೆ ಇಳಿದ್ದಿದ್ದಾರೆ.

ನಮಗೆ ನ್ಯಾಯ ಕೊಡಿ ಅಂತ ಅಂಗಲಾಚುತ್ತಿರೋ ಇವರೆಲ್ಲಾ ಬಡ ಕೂಲಿ ಕಾರ್ಮಿಕರು. ಹಳ್ಳಿಗಳಿಂದ ಮಂಗಳೂರಿಗೆ(Mangalore) ಬಂದು ಕೂಲಿ ನಾಲಿ ಮಾಡಿ ಬದುಕು ಕಟ್ಟಿಕೊಂಡವರು. ಸಂಪಾದನೆ ಮಾಡಿದ್ರಲ್ಲಿ ಒಂದಿಷ್ಟು ಉಳಿಸಬೇಕೆಂದು ರಾಷ್ಟ್ರೀಕೃತ್ ಬ್ಯಾಂಕ್ ಬಿಟ್ಟು ಫೈನಾನ್ಸ್ ಕಂಪೆನಿಯಲ್ಲಿ(Finance Company) ಹೂಡಿಕೆ ಮಾಡಿದ್ರು. ಆದ್ರೆ ಸದ್ಯ ಇವರಿಗೆ ಬಡ್ಡಿ ಸಿಗೋದಿರಲಿ ಹಾಕಿರೋ ಅಸಲು ಹಣ ಸಿಗೋದೇ ಡೌಟ್ ಆಗಿದೆ. ಯಾಕಂದ್ರೆ ಇವರು ಹೂಡಿಕೆ ಮಾಡಿರೋ ರಾಯಲ್ ಟ್ರಾವಂಕೂರ್ ಅನ್ನೋ ಫೈನಾನ್ಸ್ ಕಂಪೆನಿ ಸದ್ದಿಲ್ಲದೆ ಬಾಗಿಲು ಹಾಕಿದ್ದಾರೆ. ರಾಯಲ್ ಟ್ರಾವಂಕೂರ್ ಫಾರ್ಮರ್ಸ್ ಪ್ರೊಡ್ಯೂಸರ್ ಕಂಪೆನಿ(Royal Travancore Farmers Producer Company) ಅನ್ನೋ ಫೈನಾನ್ಸ್ ಕಂಪೆನಿ ಸದ್ಯ ಮಂಗಳೂರಿನ ಒಂದು ಬ್ರಾಂಚ್ನಲ್ಲೇ ಸರಿ ಸುಮಾರು 65 ಲಕ್ಷ ವಂಚನೆ ಮಾಡಿದೆ . ಕೇರಳ ಮೂಲದ ಈ ಫೈನಾನ್ಸ್ ಕಂಪೆನಿ ಬಡವರನ್ನೇ ಟಾರ್ಗೆಟ್ ಮಾಡಿ ಹೆಚ್ಚಿನ ಬಡ್ಡಿಯ ಆಮಿಷ ನೀಡಿತ್ತು. ಹೀಗಾಗಿ ಕೂಲಿ ಕಾರ್ಮಿಕರೇ ಹೆಚ್ಚಾಗಿ ಇಲ್ಲಿ ಹಣ ಹೂಡಿಕೆ ಮಾಡಿ ಈಗ ಕೈ ಸುಟ್ಟುಕೊಂಡಿದ್ದಾರೆ. ರಾಯಲ್ ಟ್ರವಾಂಕೂರ್ ಫೈನಾನ್ಸ್ ಕಂಪೆನಿ ದೇಶದ ಎಲ್ಲೆಡೆ ಸುಮಾರು 85 ಬ್ರಾಂಚ್ ಹೊಂದಿದೆ. ಕರ್ನಾಟಕದ ಹಲವೆಡೆ ಈ ಫೈನಾನ್ಸ್ ಕಂಪೆನಿ  ಕೋಟ್ಯಾಂತರ ರೂಪಾಯಿ ವಹಿವಾಟು ನಡೆಸ್ತಿದೆ. ಸದ್ಯ ರಾಜ್ಯದಲ್ಲಿ ಎಲ್ಲಾ ಕಡೆಯಲ್ಲೂ ಈ ಫೈನಾನ್ಸ್ ಕಂಪೆನಿ ತನ್ನ ಕಚೇರಿಯನ್ನು ಬಂದ್ ಮಾಡಿದ್ದು, ಸಿಬ್ಬಂದಿ ಸದ್ದಿಲ್ಲದ್ದೇ ಪರಾರಿಯಾಗಿದ್ದಾರೆ. ಕಾರ್ಮಿಕರು ಹಾಗೂ ದಿನಗೂಲಿ ನೌಕರರು ಹಾಗೂ ಒಂದಿಷ್ಟು ಅಂಗಡಿಯವರು ಈ ಫೈನಾನ್ಸ್ನಲ್ಲಿ ಹಣ ಹೂಡಿಕೆ ಮಾಡಿದ್ದಾರೆ. ಸರ್ಕಾರ ನಮ್ಮ ಹಣ ವಾಪಾಸ್ ಹಿಂದಿರುಗಿಸುವಂತೆ ಮಾಡಬೇಕೆಂದು ಗೋಳಾಡ್ತಿದ್ದಾರೆ. ಫೈನಾನ್ಸ್ ಬಂದ್ ಆಗಲಿದೆ ಅನ್ನೋ ಸೂಚನೆ ಸಿಕ್ಕಾಗಲೇ ಜಿಲ್ಲಾಧಿಕಾರಿಗಳಿಗೂ ದೂರು ನೀಡಿ ನ್ಯಾಯ ಒದಗಿಸುವಂತೆ ಮನವಿ ಮಾಡಿದ್ದಾರೆ. 

ಇದನ್ನೂ ವೀಕ್ಷಿಸಿ:  Weekly Horoscope: ಕರ್ಕಟಕ ರಾಶಿಯವರಿಗೆ ಈ ವಾರ ಮಾನಸಿಕ ಖಿನ್ನತೆ ಕಾಡಲಿದ್ದು, ಪರಿಹಾರಕ್ಕೆ ಏನು ಮಾಡಬೇಕು ?

Video Top Stories