Asianet Suvarna News Asianet Suvarna News

Vijayanagar Crime: ಕೊಲೆಗೆ ಕಾರಣವಾಗಿದ್ದು 5 ಸಾವಿರ ರೂ..! ಅಣ್ಣ ತಮ್ಮಂದಿರಿಂದಲೇ ರೌಡಿಶೀಟರ್ ಮರ್ಡರ್..!

ಬಡ್ಡಿ ವ್ಯವಹಾರವೇ ಅವನ ಕೊಲೆಗೆ ಕಾರಣ..!
ಚಾಕುವಿನಿಂದ ಚುಚ್ಚಿ ಚುಚ್ಚಿ ಕೊಂದುಬಿಟ್ಟರು..!
ನ್ಯಾಯ ಕೇಳಲು ಹೋಗಿದ್ದೇ ತಪ್ಪಾಗಿಹೊಯ್ತು..!

First Published Feb 22, 2024, 5:12 PM IST | Last Updated Feb 22, 2024, 5:12 PM IST

ಅವನೊಬ್ಬ ರೌಡಿಶೀಟರ್, ಸಣ್ಣಪುಟ್ಟ ಸೆಟ್ಲಮೆಂಟ್, ಪಂಚಾಯಿತಿ ಮಾಡೋದು ಬಡ್ಡಿ ವ್ಯವಹಾರ(Baddi money lenders) ಮಾಡೋದೆ ಅವನ ಕಾಯಕ. ಇದು ಅವನೊಬ್ಬನೇ ಮಾಡುತ್ತಿದ್ದ ಕೆಲಸವಲ್ಲ ಕುಟುಂಬದ ಏಳೆಂಟು ದಾಯಾದಿ ಸಹೋದರರು ಕೂಡ ಇದೇ ರೀತಿಯ ವ್ಯವಹಾರವನ್ನು ಮಾಡುತ್ತಿದ್ರು. ಆದರೆ ಆವತ್ತೊಂದು ದಿನ ತನ್ನವರಿಂದಲೇ ಆ ರೌಡಿಶೀಟರ್(Rowdy-Sheeter) ಹೆಣವಾಗಿದ್ದ. ಮಾತನ್ನಾಡಿಸಲು ಬಂದವನ ಎದೆಗೆ ಚಾಕು ನುಗ್ಗಿಸಿದ್ರು ಹಂತಕರು. ರೌಡಿ ಶೀಟರ್ ಅನ್ನೋ ಕ್ವಾಲಿಫಿಕೇಷನ್ ಇಟ್ಟುಕೊಂಡು, ಬಡ್ಡಿ ವ್ಯವಹಾರ , ಸೆಟಲ್‌ಮೆಂಟ್‌ ಅಂತೆಲ್ಲಾ ಬೇಜಾನ್ ದುಡ್ಡು ಮಾಡಿದ್ದ ಬಂಗಾರಿ ಮಂಜನನ್ನ ತನ್ನವರೇ ಕೊಂದು(Murder) ಮುಗಿಸಿದ್ರು. ಅವನ ಸಾವಿನ ಸುದ್ದಿ ಇಡೀ ತಾಲೂಕನ್ನೇ ಬೆಚ್ಚಿ ಬೀಳಿಸಿತ್ತು. ಬಂಗಾರಿ ಮಂಜ ಮತ್ತು ಆತನ ದೊಡ್ಡಪ್ಪ-ಚಿಕ್ಕಪ್ಪನ ಮಕ್ಕಳೆಲ್ಲಾ ಸೇರಿಯೇ ಬಡ್ಡಿ ವ್ಯವಹಾರ ಮಾಡ್ತಿದ್ರು. ಆದ್ರೆ ಮಂಜ ಮಾತ್ರ ಸೈಡ್ ಬ್ಯಸಿನೆಸ್ಗಳನ್ನ ಮಾಡಿಕೊಂಡು ತನ್ನ ದಾಯಾದಿಗಳಿಗಿಂತ ವೇಗವಾಗಿ ಬೆಳೆದುಬಿಟ್ಟಿದ್ದ. ಇದು ಅವರ ಕಣ್ಣುಕುಕ್ಕಿತ್ತು. ಇನ್ನೂ ವ್ಯವಹಾರದಲ್ಲೂ ಒಂದೆರಡು ಬಾರಿ ಮಂಜನ ಜೊತೆ ಜಗಳ ಮಾಡಿಕೊಂಡಿದ್ರು. ಅವನ ವಿರುದ್ಧ ಕತ್ತಿ ಮಸೆಯೋಕೆ ಶುರು ಮಾಡಿದ್ರು. ಒಳ್ಳೆ ಸಮಯಕ್ಕಾಗಿ ಕಾಯುತ್ತಿದ್ರು. ಇದೇ ವೇಳೆ 5 ಸಾವಿರ ಹಣದ(Money) ವಿಷಯವಾಗಿ ಇಬ್ಬರ ನಡುವೆ ಜಗಳ ಶುರುವಾಗುತ್ತೆ. ಈ ಜಗಳ ಮಂಜನ ಹೆಂಡತಿಗೆ ಆವಾಜ್ ಹಾಕುವವರೆಗೂ ಹೋಗುತ್ತೆ. ಯಾವಾಗ ತನ್ನ ಹೆಂಡತಿ ಮೇಲೆ ಅಣ್ಣ ತಮ್ಮಂದಿರು ಆವಾಜ್ ಹಾಕಿದ್ದಾರೆ ಅಂತ ಗೊತ್ತಾಯ್ತೋ ಮಂಜ ನ್ಯಾಯ ಕೇಳೋಕೆ ಅಂತ ಹಂತಕರ ಮನೆಗೆ ಹೋಗ್ತಾನೆ. ಆದ್ರೆ ಅವನ ಬರುವಿಕೆಗಾಗಿ ಕಾಯುತ್ತಿದ್ದವರು ಮಂಜ ಎಂಟ್ರಿ ಕೊಡ್ತಿದ್ದಂತೆ ಹೆಣ ಹಾಕೇಬಿಡ್ತಾರೆ.

ಇದನ್ನೂ ವೀಕ್ಷಿಸಿ: 

Video Top Stories