
ಬಿಕ್ಲ ಮರ್ಡರ್ ಸೀಕ್ರೆಟ್, ರೌಡಿ ಬಿಕ್ಲನ ಕೊಲೆ ಹಿಂದೆ ಪೊಲೀಸ್ ನೆರಳು?
ಬಿಕ್ಲ ಶಿವ ಹತ್ಯೆ ಪ್ರಕರಣದಲ್ಲಿ ಬಿಜೆಪಿ ಶಾಸಕರ ಹೆಸರು ತಳಕು ಹಾಕಿಕೊಂಡಿದ್ದು, ಪೊಲೀಸ್ ಅಧಿಕಾರಿಯೊಬ್ಬರು ಹಂತಕರಿಗೆ ಬಿಕ್ಲ ಶಿವನ ಲೊಕೇಷನ್ ಶೇರ್ ಮಾಡಿದ್ದಾರೆ ಎಂಬ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ.
ಬೆಂಗಳೂರು (ಜು.19): ಅದು ಇತ್ತಿಚೆಗೆ ನಡೆದ ಡೆಡ್ಲಿ ಮರ್ಡರ್ ಕೇಸ್.. ಆ ಕೇಸ್‌ನಲ್ಲಿ ಬಿಜೆಪಿಯ ಪ್ರಭಾವಿ ಶಾಸಕರ ಹೆಸರೂ ಕೂಡ ತಳಕು ಹಾಕಿಕೊಂಡಿದೆ.ಯೆಸ್.. ನಾವು ಮಾತನ್ನಾಡುತ್ತಿರೋದು ಬಿಕ್ಲ ಶಿವನ ಮರ್ಡರ್ ಪ್ರಕರಣದ ಬಗ್ಗೆ.
ಆವತ್ತು ತನ್ನ ಮನೆ ಎದುರಲ್ಲೇ ಬಿಕ್ಲ ಬರ್ಬರವಾಗಿ ಕೊಲೆಯಾಗಿ ಹೋಗಿದ್ದ. ತನಿಖೆ ಆರಂಭಿಸಿದ್ದ ಪೊಲೀಸರು FIRನಲ್ಲಿ ಬಿಜೆಪಿ ಶಾಸಕ ಭೈರತಿ ಬಸವರಾಜು ಹೆಸರನ್ನೂ ಸೇರಿಸಿಬಿಟ್ಟಿದ್ದರು. ಪ್ರಕರಣ ಸೆನ್ಸೇಶನ್ ಕ್ರಿಯೇಟ್ ಮಾಡುತ್ತಿರುವಾಗಲೇ ಈಗ ಇದೇ ಕೇಸ್ ಬಗ್ಗೆ ಸ್ಫೋಟಕ ಮಾಹಿತಿಯೊಂದು ಬಹಿರಂಗವಾಗಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಪೊಲೀಸ್ ಅಧಿಕಾರಿಯೊಬ್ಬ ಹಂತಕರಿಗೆ ಬಿಕ್ಲ ಶಿವನ ಲೊಕೇಷನ್ ಶೇರ್ ಮಾಡಿದ್ದರ ಬಗ್ಗೆ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಹಾಗಾದ್ರೆ ಬಿಕ್ಲನ ಮರ್ಡರ್ನಲ್ಲಿ ಪೊಲೀಸರೂ ಇನ್ವಾಲ್ವ್ ಆಗಿದ್ರಾ..?