10 ಸೆಕೆಂಡ್‌ನಲ್ಲಿ 196 ಗ್ರಾಂ ಚಿನ್ನದ ಸರ ಎಗರಿಸಿದ 'ಮಿಣ ಮಿಣ' ಕಳ್ಳರು!

ಬೆಂಗಳೂರಿನಲ್ಲಿ ಖತರ್ನಾಕ್ ಕಳ್ಳರ ಗ್ಯಾಂಗ್| ಕಣ್ಣೆದುರೇ 10 ಸೆಕೆಂಡ್‌ನಲ್ಲಿ 196 ಗ್ರಾಂ ಚಿನ್ನದ ಸರ ಕದ್ದ ಖದೀಮರು| ಡೀಸೆಂಟ್‌ ಲುಕ್‌ನಲ್ಲಿ ಬಂದು ಕಳ್ಳತನ 

Share this Video
  • FB
  • Linkdin
  • Whatsapp

ಬೆಂಗಳೂರು[ಜ.30]: ಡೀಸೆಂಟ್‌ ಲುಕ್‌ನಲ್ಲಿ ಬಂದ ಕಳ್ಳರು ಕೇವಲ 10 ಸೆಕೆಂಡ್‌ನಲ್ಲಿ, ಕಣ್ಣೆದುರೇ ಬರೋಬ್ಬರಿ 196 ಗ್ರಾಂ ಚಿನ್ನದ ಸರ ಎಗರಿಸಿ ಪರಾರಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಶೆರಟಾನ್‌ ಹೋಟೆಲ್‌ನಲ್ಲಿ ನಡೆದ ಜ್ಯವೆಲ್ಲರಿ ವಸ್ತು ಪ್ರದರ್ಶನದಲ್ಲಿ ಕಳ್ಳರು ಕೈಚಳಕ ತೋರಿಸಿದ್ದು, ಈ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಓರ್ವ ಯುವಕ ಹಾಗೂ ಇಬ್ಬರು ಯುವತಿಯರ ಈ ಗ್ಯಾಂಗ್‌ ಕಳ್ಳತನ ನಡೆಸಿ ಪರಾರಿಯಾಗಿದೆ.

ಉದ್ಯಮಿ ಪುತ್ರನ ಅಪಹರಣ: ಸಿನಿಮೀಯ ಶೈಲಿಯಲ್ಲಿ ಅಟ್ಟಾಡಿಸಿದ ಪೊಲೀಸರು!

ಬೆಂಗಳೂರಿಗೆ ಎಂಟ್ರಿ ಕೊಟ್ಟಿರುವ ಈ ಖತರ್ನಾಕ್ ಕಳ್ಳರ ಗ್ಯಾಂಗ್‌ನಿಂದ ಚಿನ್ನದ ಅಂಗಡಿ ಮಾಲೀಕರು ಎಚ್ಚರದಿಂದಿರಬೇಕಾದ ಅನಿವಾರ್ಯತೆ ಬಂದೊದಗಿದೆ.

Related Video