Asianet Suvarna News Asianet Suvarna News

ಅವಳಿಗಾಗಿ ಅವನು ಕಳೆದುಕೊಂಡಿದ್ದು ಲಕ್ಷ ಲಕ್ಷ..! ಸಾಯೋದಕ್ಕೂ ಮೊದಲು ಹನಿಟ್ರ್ಯಾಪ್ ಕಥೆ ಹೇಳಿದ..!

ಅವಳಿಗಾಗಿ ಮನೆಯವರನ್ನೂ ಆತ ಕಡೆಗಣಿಸಿದ್ದ..!
ವಾಕಿಂಗ್‌ಗೆ ಹೋದವನು ವಾಪಸ್ ಬರಲೇ ಇಲ್ಲ..!
ಅಕ್ಕನಿಗೆ ಮೇಸೆಜ್ ಮಾಡಿ ಕೆರೆಗೆ ಹಾರಿದ ಸಂದೇಶ್‌.!
 

ಅವನು ಮಾಜಿ ಯೋಧ.. 17 ವರ್ಷ ಭಾರತೀಯ ಸೇನೆಯಲ್ಲಿ ಕೆಲಸ ಮಾಡಿ ಇತ್ತಿಚೆಗಷ್ಟೇ ನಿವೃತ್ತಿ ಹೊಂದಿದ್ದ. ರಿಟೈರ್ಮೆಂಟ್ ಲೈಫ್ ಅನ್ನ ಹಾಯಾಗಿ ಕಳೆಯೋ ಪ್ಲಾನ್ ಮಾಡಿಕೊಂಡಿದ್ದ. ಆದ್ರೆ ಮೊನ್ನೆ ವಾಕಿಂಗ್ ಹೋಗಿ ಬರ್ತಿನಿ ಅಂತ ಹೋದವನು ವಾಪಸ್ ಮನೆಗೆ ಬರಲೇ ಇಲ್ಲ. ಎಲ್ಲಿ ಹುಡುಕಿದ್ರೂ ಆತ ಸಿಗಲಿಲ್ಲ. ಆದ್ರೆ ನಾಪತ್ತೆಯಾಗಿ 2 ದಿನದ ನಂತರ ಆತ ಹೆಣವಾಗಿ ಸಿಕ್ಕಿದ್ದ. ಸಾಯೋದಕ್ಕೂ ಮೊದಲು ಆತನ ಸಹೋದರಿಗೆ ಒಂದು ಮೆಸೆಜ್ ಕಳುಹಿಸಿದ್ದ. ಅಷ್ಟೇ ಅಲ್ಲ ಡೆತ್ ನೋಟ್(death note) ಕೂಡ ಬಿಟ್ಟು ಹೋಗಿದ್ದ. ಇನ್ನೂ ಇದೇ ಸೂಸೈಡ್ ಕೇಸ್ನ ತನಿಖೆಗಿಳಿದ ಪೊಲೀಸರಿಗೆ ಒಂದು ಹನಿಟ್ರ್ಯಾಪ್ ಕಹನಿ ಸಿಕ್ಕಿತ್ತು.. ಮಾಜಿ ಯೋಧ ಹನಿಯ ಬಲೆಗೆ ಬಿದ್ದು ಮೋಸ ಹೋಗಿದ್ದ. ಈ ಆಂಟಿ ಸಂದೇಶ್‌ನನ್ನ ಅದೇಗೆ ಕೈವಶ ಮಾಡಿಕೊಂಡಿದ್ದಳು ಅಂತ. ಅವಳು ಕೇಳಿದಳು ಅಂತ ಲಕ್ಷ ಲಕ್ಷ ಹಣ ಕೊಟ್ಟಿದ್ದ ಮಾಜಿ ಯೋಧನಿಗೆ(Retired Soldier) ಆವತ್ತೊಂದು ದಿನ ಇದೇ ಸುಂದರಿಯ ಬಗ್ಗೆ ಒಂದು ಶಾಕಿಂಗ್ ಮಾಹಿತಿ ಸಿಕ್ಕಿಬಿಟ್ಟಿತ್ತು. ಅವಳ ನಿಜ ಬಣ್ಣ ಬಯಲಾಗಿತ್ತು. ಆದ್ರೆ ಅದನ್ನ ತಿಳಿದು ಆಕೆಯಿಂದ ದೂರ ಹೋಗಲು ಸಂದೇಶ್ ನಿರ್ಧರಿಸಿದನ್ನಾದ್ರೂ ಅಷ್ಟೊತ್ತಿಗೆ ಟೈಂ ಮೀರಿ ಹೋಗಿತ್ತು. ಅವಳ ಸೌಂದರ್ಯಕ್ಕೆ ಮರುಳಾಗಿ ಲಕ್ಷ ಲಕ್ಷ ಹಣ ಕೊಟ್ಟಿದ್ದ ಸಂದೇಶ್ ಮನೆ, ಹೆಂಡತಿ ಎಲ್ಲವನ್ನೂ ಮರೆತೇ ಬಿಟ್ಟಿದ್ದ. ಆದ್ರೆ ಎಲ್ಲದಕ್ಕೂ ಒಂದು ಫುಲ್ ಸ್ಟಾಪ್ ಅಂತ ಇರಬೇಕಲ್ವಾ.. ಒಂದು ದಿನ ಈ ಮಾಯಾಂಗಿನಿಯ ನಿಜ ಬಣ್ಣ ಬಯಲಾಗಿದೆ. ಜೀವಿತಾಳಿಗೆ ಸಂದೇಶ್ ಒಬ್ಬನೇ ಪ್ರೇಮಿಯಾಗಿರಲಿಲ್ಲ ಅನ್ನೋ ಸತ್ಯ ಗೊತ್ತಾಗುತ್ತೆ. ಆದ್ರೆ ಯಾವಾಗ ಸಂದೇಶ್‌ಗೆ ತನ್ನ ಕಥೆಯಲ್ಲಾ ಗೊತ್ತಾಗಿದೆ ಅಂತ ಗೊತ್ತಾಯ್ತೋ ಆಕೆ ಸಂದೇಶನನ್ನ ಬ್ಲ್ಯಾಕ್ಮೇಲ್ ಮಾಡೋದಕ್ಕೆ ಶುರು ಮಾಡ್ತಾಳೆ. ಅವನೊಂದಿಗಿನ ಖಾಸಗಿ ವಿಡಿಯೋ ಮತ್ತು ಫೋಟೋಗಳನ್ನ ಇಟ್ಟುಕೊಂಡು ಆತನನ್ನ ಹನಿಟ್ರ್ಯಾಪ್(Honeytrap) ಮಾಡೋದಕ್ಕೆ ಮುಂದಾಗ್ತಾಳೆ. ಆದ್ರೆ ಕೊಡೋವರೆಗೂ ಕೊಟ್ಟ ಮಾಜಿ ಯೋಧ ಕೊನೆಗೆ ಹೆಂಡತಿಗೂ ತನ್ನ ಲವ್ವಿಡವ್ವಿ ವಿಷ್ಯ ಹೆಳಿ ಸೀದಾ ಕೆರೆಗೆ ಹಾರಿಬಿಡ್ತಾನೆ.

ಇದನ್ನೂ ವೀಕ್ಷಿಸಿ:  ಸಂಘರ್ಷದ ಬಳಿಕ ಗಾಜಾ ಪಟ್ಟಿ ಕತೆ ಏನು..? ಗಾಜಾ ಆಧಿಪತ್ಯ ನಿರ್ಧರಿಸಲು ಸಿದ್ಧವಾಗಿವೆ 3 ಪ್ಲಾನ್‌ಗಳು!

Video Top Stories