ಇಂಟಲಿಜೆನ್ಸ್ ಮಾಜಿ ಅಧಿಕಾರಿಯನ್ನೇ ಇಂಟಲಿಜೆಂಟ್ ಆಗಿ ಮುಗಿಸಿದ್ವಿ ಅಂದುಕೊಂಡ್ರು, ಆದರೆ, ಆಗಿದ್ದೇ ಬೇರೆ..!
ಮೈಸೂರಿನಲ್ಲಿ ಗುಪ್ತಚರ ಇಲಾಖೆಯ ಮಾಜಿ ಅಧಿಕಾರಿಯನ್ನು ಆಕ್ಸಿಡೆಂಟ್ ಮಾಡಿ ಸಾಯಿಸಿದ ಪ್ರಕರಣದ ವಿವರಗಳು ಬೆಚ್ಚಿ ಬೀಳಿಸುವಂತಿದೆ. ಇಂಟಲಿಜೆನ್ಸ್ ಮಾಜಿ ಅಧಿಕಾರಿಯನ್ನು ಇಂಟಲಿಜೆಂಟ್ ಆಗಿ ಸಾಯಿಸಿದ್ವಿ ಎಂದುಕೊಂಡ ಕೊಲೆಗಡುಕರಿಗೆ ಮೈಸೂರು ಪೊಲೀಸರು ಎಷ್ಟು ಇಂಟಲಿಜೆಂಟ್ ಅನ್ನೋದು ತಿಳಿಯದೇ ಹೋಗಿತ್ತು.
ಮೈಸೂರು (ನ.9): ಅವರು ಕೇಂದ್ರ ಗುಪ್ತಚರ ಇಲಾಖೆಯ ನಿವೃತ್ತ ಅಧಿಕಾರಿ. ವೃತ್ತಿಜೀವನ ಮುಗಿಸಿ 23 ವರ್ಷ ಕಳೆದಿತ್ತು. ಮೈಸೂರಿನಲ್ಲಿ ನಿವೃತ್ತ ಜೀವನ ಎಂಜಾಯ್ ಮಾಡುತ್ತಿದ್ದರು. ಬೆಳಿಗ್ಗೆ ವಾಕಿಂಗ್, ಸಂಜೆ ವಾಕಿಂಗ್ ಹಾಗೂ ಮನೆಯಲ್ಲಿ ಹೆಂಡತಿ ಜೊತೆ ಟೈಂ ಪಾಸ್ ಹೀಗೆ ಜಾಲಿಯಾಗಿ ಜೀವನ ನಡೆಯುತ್ತಿತ್ತು. ಮಗ ಹಾಗೂ ಮಗಳು ದೂರದ ಅಮೇರಿಕಾದಲ್ಲಿ ವಾಸವಿದ್ದ ಕಾರಣ, ಮನೆಯಲ್ಲಿ ಇಬ್ಬರೇ ಇರುತ್ತಿದ್ದರು. ಆದರೆ, ಅವತ್ತು ವಾಕಿಂಗ್‌ಗೆ ಹೋಗಿದ್ದವರಿಗೆ ಕಾರು ಡಿಕ್ಕಿ ಹೊಡೆದಿತ್ತು. ಆಸ್ಪತ್ರೆಗೆ ಸಾಗಿಸಿದ್ರೂ ಪ್ರಯೋಜನವಾಗಲಿಲ್ಲ.
ಮೊದಲಿಗೆ ಇದೊಂದು ಹಿಟ್ ಆ್ಯಂಡ್ ರನ್ ಕೇಸ್ ಅಂತಲೇ ಎಲ್ಲರೂ ಭಾವಿಸಿದ್ದರು. ಆದರೆ, ದೂರು ದಾಖಲಿಸಿಕೊಂಡು ತನಿಖೆಗೆ ಇಳಿದ ಪೊಲೀಸರಿಗೆ ಶಾಕ್ ಮೇಲೆ ಶಾಕ್. ಯಾಕೆಂದರೆ ಅದು ಜಸ್ಟ್ ಆ್ಯಕ್ಸಿಡೆಂಟ್ ಆಗಿರಲಿಲ್ಲ. ಅದೊಂದು ಉದ್ದೇಶಪೂರಿತ ಕೊಲೆ ಆಗಿತ್ತು.
ಕುಲಕರ್ಣಿಯವರ ಅಳಿಯ ಪೊಲೀಸರಿಗೆ ಮೇಜರ್ ಸುಳಿವು ಕೊಟ್ಟಿದ್ದರು. ಅಂದು ಆ್ಯಕ್ಸಿಡೆಂಟ್ ಮಾಡಿದ್ದ ಕಾರಿನ ಯಾವುದೇ ಸುಳಿವು ಸಿಗದಿದ್ದಾಗ ಕುಲಕರ್ಣಿಯವರ ಅಳಿಯ ಅದೊಂದು ಫ್ಯಾಮಿಲಿ ಬಗ್ಗೆ ಹೇಳಿದ್ದ. ಆ ಫ್ಯಾಮಿಲಿಗೂ ಕುಲಕರ್ಣಿಯವರಿಗೂ ಇದ್ದ ಕಿತ್ತಾಟದ ಬಗ್ಗೆ ಹೇಳಿದ್ದ. ಅಳಿಯನ ಇದೊಂದು ಮಾಹಿತಿಯಿಂದ ಕೇಸ್‌ಗೆ ಮೇಜರ್ ಟ್ವಿಸ್ಟ್ ಸಿಕ್ಕಿಬಿಡುತ್ತೆ.