Asianet Suvarna News Asianet Suvarna News

ಮಂತ್ರಾಲಯ ಪಾದಯಾತ್ರಿಗಳ ಮತಾಂತರ ಯತ್ನ? ಠಾಣೆಯಲ್ಲಿ ಪ್ರಕರಣ ದಾಖಲು, ಓರ್ವನ ಬಂಧನ..ಮತ್ತೊಬ್ಬ ನಾಪತ್ತೆ

ಬಳ್ಳಾರಿಯ ಸಿರುಗುಪ್ಪ ತಾಲೂಕಿನ ತೆಕ್ಕಲಕೋಟೆ ಪಟ್ಟಣದಲ್ಲಿ ಮಂತ್ರಾಲಯಕ್ಕೆ  ಪಾದಯಾತ್ರೆ ಹೊರಟಿದ್ದ ಭಕ್ತರ ಮೇಲೆ ಮತಾಂತರಕ್ಕೆ ಯತ್ನಿಸಿರುವ ಆರೋಪ ಕೇಳಿಬಂದಿದೆ.

First Published Jul 22, 2024, 4:37 PM IST | Last Updated Jul 22, 2024, 4:37 PM IST

ಬಳ್ಳಾರಿ: ಮಂತ್ರಾಲಯಕ್ಕೆ  ಪಾದಯಾತ್ರೆ(Mantralaya  padayatra) ತೆರಳುತ್ತಿದ್ದ ಭಕ್ತರ ಮೇಲೆ ಮತಾಂತರಕ್ಕೆ(Religious Conversion) ಯತ್ನಿಸಿರುವ ಆರೋಪ ಕೇಳಿಬಂದಿದೆ. ಮತಾಂತರ ಯತ್ನಕ್ಕೆ ಪ್ರಯತ್ನ ಮಾಡಿರೋದಕ್ಕೆ ಸಾಕ್ಷಿ ಎನ್ನುವಂತಿದೆ ಈ ದೃಶ್ಯ. ಸಿರುಗುಪ್ಪ ತಾಲೂಕಿನ ತೆಕ್ಕಲಕೋಟೆ ಪಟ್ಟಣದಲ್ಲಿ ಜುಲೈ 18 ರಂದು ಈ ಘಟನೆ ನಡೆದಿದೆ. ಯಾತ್ರಾತ್ರಿಗಳಿಬ್ಬರು ಸಿರುಗುಪ್ಪ ರಾಷ್ಟ್ರೀಯ ಹೆದ್ದಾರಿ ಮೂಲಕ ಮಂತ್ರಾಲಯಕ್ಕೆ ತೆರಳುತ್ತಿದ್ರು. ತೆಕ್ಕಲಕೋಟೆ ಪಟ್ಟಣದ ಹುಸೇನ್ ಭಾಷಾ (44), ಸಾಯಿ ಬಾಬಾ (24) ಮತಾಂತರಕ್ಕೆ ಯತ್ನ ಮಾಡಿದ್ದಾರೆ ಎನ್ನಲಾಗ್ತಿದೆ. ಕೇಸರಿ ಧ್ವಜ ಹಿಡಿದುಕೊಂಡು ಮಂತ್ರಾಲಯಕ್ಕೆ ಪಾದಯಾತ್ರೆ ಮಾಡ್ತಿದ್ರು. ಈ ವೇಳೆ ಮುಸ್ಲಿಂ (Muslim)ಧರ್ಮವನ್ನು ಬೋಧನೆ ಮಾಡಲಾಗಿದೆ ಎಂದು ಗಾದಿಲಿಂಗಪ್ಪ ಎನ್ನುವವರು ದೂರು ನೀಡಿದ್ದಾರೆ. ಅನ್ಯ ಧರ್ಮದವರು ತಮ್ಮ ಗುರು ಗಳ ಬಗ್ಗೆ ಭೋದನೆ ಮಾಡ್ತಿರೋ ದೃಶ್ಯ ಸೆರೆಹಿಡಿದ ಗಾದಿಲಿಂಗಪ್ಪ. ಅನ್ಯ ಧರ್ಮದವರು ಮಾತನಾಡಿದ ಬಳಿಕ ಯಾತ್ರಾತ್ರಿಗಳಿಗೆ ಅವರ ಮಾತು ನಂಬಬೇಡಿ ಅವರೆಲ್ಲ ಮತಾಂತರ ಮಾಡ್ತಾರೆ ಎಂದು ಗಾದಿಲಿಂಗಪ್ಪ ಬುದ್ಧಿ‌ ಹೇಳಿದ್ದಾರೆ. ಮತಾಂತರ ಮಾಡಲು ಪ್ರಯತ್ನ ಮಾಡಿದ ಹಿನ್ನಲೆ ತೆಕ್ಕಲಕೋಟೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗಮನಕ್ಕೆ ಯಾತ್ರಾತ್ರಿಗಳು ಯಾರೆಂದು ಗೊತ್ತಾಗಿಲ್ಲ ವಿಡಿಯೋ ತೆಗೆದಿರೋ ಗಾದಿಲಿಂಗಪ್ಪ ಅವರು ದೂರು ನೀಡಿದ್ದಾರೆ. ಮತಾಂತರಕ್ಕೆ ಯತ್ನಿಸಿದ ಓರ್ವನನ್ನು ಪೊಲೀಸರು ಬಂಧಿಸಿದ್ದು, ಪೊಲೀಸರು ಮತ್ತೋರ್ವ ನಾಪತ್ತೆಯಾಗಿದ್ದಾನೆ. ತೆಕ್ಕಲಕೋಟೆ ಪಟ್ಟಣದ ಹುಸೇನ್ ಭಾಷ ಬಂಧನವಾದ್ರೇ, ಸಾಯಿಬಾಬಾ ಎನ್ನುವವರು ನಾಪತ್ತೆಯಾಗಿದ್ದಾರೆ.ವಿಡಿಯೋ ದಾಖಲೆ ಆಧಾರದ ಮೇಲೆ ಮತಾಂತರ ಯತ್ನ ದೂರು ದಾಖಲಿಸಿಕೊಂಡು ಪೊಲೀಸರು ಬಂಧಿಸಿದ್ದಾರೆ. 

ಇದನ್ನೂ ವೀಕ್ಷಿಸಿ:  ರೇಣುಕಾಸ್ವಾಮಿ ಕೊಲೆ ಕೇಸ್‌ನ ಮತ್ತೊಂದು ರಹಸ್ಯ ಬಯಲು..ಹಲ್ಲೆ ಬಳಿಕ ಕ್ಷಮಾಪಣೆ ವಿಡಿಯೋ ಮಾಡಲು ಪ್ಲ್ಯಾನ್‌ !