Asianet Suvarna News Asianet Suvarna News

Lok sabha elections 2024: ಏನ್ ಹೇಳ್ತಿದೆ ಎರಡೂ ಪಕ್ಷಗಳ ಆಂತರಿಕ ಸಮೀಕ್ಷೆ..? ಯಾರ ಲೆಕ್ಕ ಪಕ್ಕಾ..?

ಒಬ್ಬರದ್ದು 28/28 ಲೆಕ್ಕ.. ಇನ್ನಿಬ್ಬರದ್ದು ಮಿಷನ್ 20 ಟಾರ್ಗೆಟ್..!
2019ರಲ್ಲಿ ಇಪ್ಪತ್ತೈದು.. ಈ ಬಾರಿ ರಾಜ್ಯದಲ್ಲಿ  ಬಿಜೆಪಿಗೆ ಎಷ್ಟು ಸ್ಥಾನ..?
ಪ್ಲಸ್, ಮೈನಸ್ ಆಟದಲ್ಲಿ ಯಾರಿಗೆ ಇಪ್ಪತ್ತು..? ಯಾರಿಗೆ ಆಪತ್ತು..? 
ಇನ್ನು ಹತ್ತೇ ದಿನ ಬಾಕಿ.. ಹತ್ತಿರ ಬರುತ್ತಿದೆ ಜೂನ್ 4ರ ಡಿಸೈಡಿಂಗ್ ಡೇ..!

ಲೋಕಸಭಾ ಚುನಾವಣೆ ಕ್ಲೈಮ್ಯಾಕ್ಸ್ ಹಂತದಲ್ಲಿದೆ. ರಾಜ್ಯದಲ್ಲಂತೂ ಚುನಾವಣೆ ಮುಗಿದು 18 ದಿನಗಳೇ ಕಳೆದು ಹೋಗಿವೆ. ಈಗ ಎಲ್ಲರೂ ಕಾಯ್ತಾ ಇರೋದು ಜೂನ್ 4ರ ಆ ನಿರ್ಣಾಯಕ ದಿನವನ್ನ. ದೇಶದಲ್ಲಿ ಒಟ್ಟು ಏಳು ಹಂತಗಳಲ್ಲಿ ಲೋಕಸಭಾ ಚುನಾವಣೆ( Lok sabha elections 2024 ) ನಡೀತಾ ಇದೆ. ಶನಿವಾರಕ್ಕೆ ಆರು ಹಂತಗಳು ಕಂಪ್ಲೀಟ್ ಆಗಿದ್ದು, ಇನ್ನುಳಿದಿರೋದು ಒಂದೇ ಒಂದು ಹಂತ. ಅದು ಜೂನ್ 1ನೇ ತಾರೀಕು. ಆ ನಂತ್ರ ಇಡೀ ದೇಶವೇ ಕುತೂಹಲದಿಂದ ಕಾಯ್ತಾ ಇರೋ ಜೂನ್ 4ರ ಡಿಸೈಡಿಂಗ್ Dayಗೆ ಕೌಂಟ್ ಡೌನ್ ಶುರು(Siddaramaiah). ಈ ಬಾರಿ ದೆಹಲಿ ಗದ್ದುಗೆ ಯಾರಿಗೆ..? ನರೇಂದ್ರ ಮೋದಿಯವರು(Narendra modi) ಸತತ 3ನೇ ಬಾರಿ ಪ್ರಧಾನಿ ಪಟ್ಟವೇರ್ತಾರಾ..? ಎನ್.ಡಿ.ಎ ಮೈತ್ರಿಕೂಟ ಮತ್ತೆ ಅಧಿಕಾರಕ್ಕೆ ಬರುತ್ತಾ..? ಅಥವಾ ಎನ್.ಡಿ.ಎಗೆ ಇಂಡಿಯಾ ಮೈತ್ರಿಕೂಟ ಟಕ್ಕರ್ ಕೊಡುತ್ತಾ..? ಈ ಪ್ರಶ್ನೆಗಳಿಗೆ ಒಬ್ಬೊಬ್ಬರದ್ದು ಒಂದೊಂದು ರೀತಿಯ ಉತ್ತರ. ಬಿಜೆಪಿಯವ್ರ(BJP) ಹೇಳ್ತಾರೆ, ದೆಹಲಿಗೆ ಗದ್ದುಗೆ ಈ ಬಾರಿಯೂ ನಮ್ದೇ, ಮೋದಿ ಹ್ಯಾಟ್ರಿಕ್ ಬಾರಿಸೋದು ಗ್ಯಾರಂಟಿ ಅಂತ. ಇಂಡಿಯಾ ಮೈತ್ರಿಕೂಟದವ್ರು ಹೇಳ್ತಾರೆ, ನೋಡ್ತಾ ಇರಿ.. ಈ ಬಾರಿ ದೊಡ್ಡ ಶಾಕ್ ಕಾದಿದೆ ಅಂತ. ತಮ್ಮ ವಾದಗಳಿಗೆ ಇಬ್ಬರೂ ತಮ್ಮದೇ ಲಾಜಿಕ್'ಗಳನ್ನು ಮುಂದಿಡ್ತಾ ಇದ್ದಾರೆ. ಇತ್ತ ಕರ್ನಾಟಕದಲ್ಲೂ ಸೀಟು ಲೆಕ್ಕಾಚಾರ ಶುರುವಾಗಿದೆ.

ಇದನ್ನೂ ವೀಕ್ಷಿಸಿ:  Narendra Modi: ರಾಷ್ಟ್ರ ರಾಜಕಾರಣದಲ್ಲಿ ಮರುಕಳಿಸುತ್ತಾ ಸುನಾಮಿ..? ಮೋದಿ ಪಡೆಗೆ ಯಾಕೆ ಬೇಕಂತೆ ಗೊತ್ತಾ 400 ಸ್ಥಾನ..?