Asianet Suvarna News Asianet Suvarna News

Rameshwaram Cafe Blast: ಹ್ಯಾಂಡ್ ವಾಶ್‌ನ ಸಿಂಕ್ ಬಳಿ ಸ್ಫೋಟಕ ಇದ್ದ ಕಪ್ಪು ಬ್ಯಾಗ್: ಅಲ್ಲಿ ಬಾಂಬ್ ಇಟ್ಟವರು ಯಾರು..?

ಹೇಗಿತ್ತು ಗೊತ್ತಾ ಸ್ಫೋಟದ ನಂತರದ ಭೀಕರತೆ..!
ಮಧ್ಯಾಹ್ನದ ವೇಳೆ ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ 
ಸ್ಫೋಟಗೊಳ್ಳುತ್ತಲೇ ಚೆಲ್ಲಾಪಿಲ್ಲಿಯಾಗಿ ಓಡಿದ ಜನ

ಅದು ಪ್ರತಿಷ್ಟಿತ ಹೋಟೆಲ್. ಪ್ರತಿ ನಿತ್ಯ ಸಾವಿರಾರು ಮಂದಿ ಬಂದು ರುಚಿ ರುಚಿಯಾದ ಊಟ ಸೇವನೆ ಮಾಡಿ ಹೋಗ್ತಿದ್ರು. ಆದ್ರೆ ಇವತ್ತು ಎಂದಿನಂತೆ ನೂರಾರು ಮಂದಿ ಆ ಹೋಟೆಲ್(Hotel) ಒಳಗೆ ಊಟ ಸವಿಯುತ್ತ ನಿಂತಿದ್ರು. ಇದೇ ಟೈಂನಲ್ಲಿ ಅಲ್ಲಿ ಒಂದು ಬಾಂಬ್ ಬ್ಲಾಸ್ಟ್(Bomb Blast) ಆಗಿತ್ತು. ಆ ಬಾಂಬ್ ತೀವ್ರತೆ ಎಷ್ಟಿತ್ತು ಅಂದ್ರೆ ಬರೊಬ್ಬರಿ 9 ಮಂದಿ ತೀವ್ರ ಗಾಯಗಳಾಗಿ ಆಸ್ಪತ್ರೆ ಸೇರಿದ್ರು. ಎರಡು ಸಿಸಿ ಟಿವಿ ದೃಶ್ಯಗಳು ಕೇವಲ ಬೆಂಗಳೂರನ್ನಷ್ಟೇ(Bengaluru) ಅಲ್ಲ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ವು. ಇನ್ನೂ ಯಾವಾಗ ಕೆಫೆಯಲ್ಲಿ ಇಂಥಹದೊಂದು ಬ್ಲಾಸ್ಟ್ ಆಗಿದೆ ಅನ್ನೋದು ಗೊತ್ತಾಯ್ತೋ ಅಧಿಕಾರಿಗಳು, ಎಫ್.ಎಸ್.ಎಲ್ ಟೀಂ ಎಲ್ಲವೂ ಆಗಮಿಸಿತ್ತು. ಶುಕ್ರವಾರ ರಾಜಧಾನಿ ಬೆಂಗಳೂರು ಪಾಲಿಗೆ ಕರಾಳ ಶುಕ್ರವಾರವಾಗಿ ಬದಲಾಗಿದೆ. ರಾಮೇಶ್ವರಂ ಕೆಫೆಯಲ್ಲಾದ ಸ್ಫೋಟ(rameshwaram cafe bomb blast) ಇಡೀ ಬೆಂಗಳೂರನ್ನ ಬೆಚ್ಚಿ ಬೀಳಿಸಿದೆ. ಇನ್ನೂ ಯಾವಾಗ ಬ್ಲಾಸ್ಟ್ ಆಯ್ತೋ ಅದು IED ಬಾಂಬ್, ಯಾರೋ ಬೆಕಂತಲೇ ಟಿಫನ್ ಬಾಕ್ಸ್ನಲ್ಲಿ ಇಟ್ಟು ಹೋಗಿದ್ದಾರೆ. ಟೈಂ ಕೂಡ ಫಿಕ್ಸ್ ಮಾಡಿದ್ದಾರೆ ಅಂತ ಅಧಿಕಾರಿಗಳು ತಿಳಿಸಿದ್ರು. ಇನ್ನೂ ಸ್ವತಃ ಸಿಎಂ ಸಿದ್ದರಾಮಯ್ಯಾರೆ ಇದು ಬಾಂಬ್ ಅಂತ ಕನ್ಫರ್ಮ್ ಮಾಡಿದ್ದು ತನಿಖೆ ಮುಂದುವರೆದಿದೆ.

ಇದನ್ನೂ ವೀಕ್ಷಿಸಿ:  Rameshwaram Cafe Blast: ಮಂಗಳೂರು ಹಾಗೂ ಬೆಂಗಳೂರಿನಲ್ಲಿ ಆದ ಬ್ಲಾಸ್ಟ್‌ಗೆ ಸಾಮ್ಯತೆ ಇದೆ: ಡಿಕೆ ಶಿವಕುಮಾರ್‌

Video Top Stories