Rameshwaram Cafe Blast: ಮಂಗಳೂರು ಹಾಗೂ ಬೆಂಗಳೂರಿನಲ್ಲಿ ಆದ ಬ್ಲಾಸ್ಟ್‌ಗೆ ಸಾಮ್ಯತೆ ಇದೆ: ಡಿಕೆ ಶಿವಕುಮಾರ್‌

ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಪ್ರಕರಣ
ಜನ ಗಾಬರಿ ಮಾಡಿಕೊಳ್ಳುವಂಥ ಪರಿಸ್ಥಿತಿ ಇಲ್ಲ
ಇದು ಕಡಿಮೆ ತೀವ್ರತೆಯ ಬ್ಲಾಸ್ಟ್ ಆಗಿದೆ- ಡಿಕೆಶಿ

First Published Mar 2, 2024, 2:29 PM IST | Last Updated Mar 2, 2024, 2:29 PM IST

ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್(Dk SHivakumar) ಮಾತನಾಡಿದ್ದು, ಯಾರನ್ನು ರಕ್ಷಣೆ ಮಾಡುವ ಉದ್ದೇಶ ಇಲ್ಲ. ನಾನು, ಹೋಂ ಮಿನಿಸ್ಟರ್, ಸರ್ಕಾರ ಮುಖ್ಯಮಂತ್ರಿಗಳು ಎಲ್ಲಾ ಸ್ಥಳಕ್ಕೆ ಭೇಟಿ ಕೊಟ್ಟಿದ್ದೇವೆ. ಬಿಜೆಪಿ ಏನೇ ರಾಜಕೀಯ ಮಾಡಿಕೊಳ್ಳಲಿ, ಬಿಜೆಪಿಯವರ(BJP) ಸಹಕಾರ ನಮಗೆ ಬೇಡ. ಬೆಂಗಳೂರು(Bengaluru) ಹೆಸರು ಹಾಳು ಮಾಡಲು ಯತ್ನಿಸುತ್ತಿದ್ದಾರೆ. ರಾಜಕೀಯ ಮಾಡುತ್ತಾರೆ ಅಂದ್ರೆ ರಾಜಕಾರಣ ಮಾಡಿಕೊಳ್ಳಲಿ . ನಾವು ಮಾತ್ರ ಎಲ್ಲಾ ರೀತಿಯಿಂದಲೂ ನೋಡಬೇಕು ಅಂತ ಸೂಚನೆ ಕೊಟ್ಟಿದ್ದೇವೆ. ಪೊಲೀಸರು(Police) ಏಳು ಎಂಟು ತಂಡಗಳನ್ನು ರಚನೆ ಮಾಡಿದ್ದಾರೆ. ಇಡೀ ಬೆಂಗಳೂರು ಸಿಟಿಯಲ್ಲಿ ಕ್ಯಾಮೆರಾಗಳಿದ್ದಾವೆ. ಬಸ್ ಹತ್ತಿದ್ದಾನೆ ಬಸ್ ಇಳಿದಿದ್ದಾನೆ ವಾಪಸ್ ಹೋಗುವಾಗ ಹೇಗೆ ಹೋದ ಅನ್ನೋದನ್ನ ಟ್ರೇಸ್ ಮಾಡುತ್ತಿದ್ದಾರೆ. ನಿಮಗೂ ಕೂಡ ಬೇಕಾದಷ್ಟು ಕ್ಲಿಪ್ಪಿಂಗ್ ಸಿಕ್ಕಿದೆ ತೋರಿಸಿದ್ದೀರಾ ಎಂದು ಡಿಕೆಶಿ ಹೇಳಿದರು. ಪೊಲೀಸರಿಗೆ ನಾವು ತನಿಖೆಗೆ ಫ್ರೀ ಹ್ಯಾಂಡ್ ಬಿಟ್ಟಿದ್ದೇವೆ. ಇದು ಏಕವ್ಯಕ್ತಿ ಮಾಡಿರೋದು ಅಥವಾ ಸಂಘಟನೆ ಮಾಡಿರೋದು ನೋಡಬೇಕಿದೆ. ಮಂಗಳೂರು ಬ್ಲಾಸ್ಟ್ ಗೂ ಇದಕ್ಕೂ ಸಾಮ್ಯತೆ ಕಾಣಿಸುತ್ತಿದೆ. ನಮ್ಮ ಪೊಲೀಸ್ ಆಫೀಸರ್ ಹೇಳುವ ಪ್ರಕಾರ ಬ್ಲಾಸ್ಟ್ ಗೆ ಬಳಸಿರುವ ಮೆಟೀರಿಯಲ್ ನೋಡಿದಾಗ, ಮಂಗಳೂರು ಮತ್ತು ಬೆಂಗಳೂರಿನಲ್ಲಿ ಆದ ಬ್ಲಾಸ್ಟ್ ನಲ್ಲಿ ಸಾಮ್ಯತೆ ಇದೆ. ಟೈಮರ್‌ಗೆ ಬಳಸಿರುವ ವಸ್ತು, ಬ್ಲಾಸ್ಟ್‌ಗೆ ಬಳಸಿರುವ ವಸ್ತುಗಳಲ್ಲಿ ಸಾಮ್ಯತೆ ಇದೆ. ಮಂಗಳೂರಿನ ಪೊಲೀಸ್ ಆಫೀಸರು ಶಿವಮೊಗ್ಗ ಪೊಲೀಸ್ ಆಫೀಸರ್ ಕೂಡ ಬೆಂಗಳೂರಿಗೆ ಬಂದಿದ್ದಾರೆ ಎಂದು ಹೇಳಿದರು. 

ಇದನ್ನೂ ವೀಕ್ಷಿಸಿ:  ಎಫ್‌ಎಸ್‌ಎಲ್‌ ವರದಿ ಮುಚ್ಚಿ ಮತ್ತೊಂದು ಬೋಗಸ್ ವರದಿ ತಯಾರಿಸಲು ಸರ್ಕಾರ ಮುಂದಾಗಿದೆ: ಬಿ.ವೈ. ವಿಜಯೇಂದ್ರ

Video Top Stories