
Violence against woman: ಗ್ರಾಮ ಪಂಚಾಯಿತಿ ಸದಸ್ಯನಿಂದ ಮಹಿಳೆಗೆ ಕಪಾಳಮೋಕ್ಷ!
ಗ್ರಾಮ ಪಂಚಾಯಿತಿ ಸದಸ್ಯ ಸಿದ್ದರಾಜು ಎಂಬಾತ ಮಹಿಳೆಗೆ ಕಪಾಳ ಮೋಕ್ಷ ಮಾಡಿದ್ದಾನೆ. ಚನ್ನಪಟ್ಟಣ ತಾಲೂಕಿನ ಮೆಣಸಿನ ಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಸದ್ಯ ಈ ಹಲ್ಲೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮಳೆ ನೀರು ಕೊಚ್ಚಿ ಜಮೀನಿಗೆ ಮಣ್ಣು ಹೋಗಿದ್ದಕ್ಕೆ ಮಹಿಳೆ ಮೇಲೆ ಹಲ್ಲೆ ನಡೆಸಿದ್ದಾರೆನ್ನಲಾಗಿದೆ.
ರಾಮನಗರ(ನ. 25) ಗ್ರಾಮ ಪಂಚಾಯಿತಿ ಸದಸ್ಯ (Gram Panchayat Member) ಸಿದ್ದರಾಜು ಎಂಬಾತ ಮಹಿಳೆಗೆ ಕಪಾಳ ಮೋಕ್ಷ ಮಾಡಿದ್ದಾನೆ. ರಾಮನಗರ ಜಿಲ್ಲೆಯ (Ramanagar District) ಚನ್ನಪಟ್ಟಣ ತಾಲೂಕಿನ ಮೆಣಸಿನ ಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಸದ್ಯ ಈ ಹಲ್ಲೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ (Social Media) ವೈರಲ್ ಆಗಿದೆ. ಮಳೆ ನೀರು ಕೊಚ್ಚಿ ಜಮೀನಿಗೆ ಮಣ್ಣು ಹೋಗಿದ್ದಕ್ಕೆ ಮಹಿಳೆ ಮೇಲೆ ಹಲ್ಲೆ ನಡೆಸಿದ್ದಾರೆನ್ನಲಾಗಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಹಲ್ಲೆ ನಡೆಸಿದ ಸಿದ್ದರಾಜು ಮಹಿಳೆಗೆ ಈ ಸಂದರ್ಭದಲ್ಲಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆ. ಘಟನೆ ಬಳಿಕ ಗ್ರಾಮಸ್ಥರು ಸಿದ್ದರಾಜು ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಇನ್ನು ಈ ಮಹಿಳೆ ಸಿದ್ದರಾಜು ಅಣ್ಣನ ಮಗಳಾಗಿದ್ದು, ಸಂಬಂಧಗಳಿಗೂ ಈ ವ್ಯಕ್ತಿ ಬೆಲೆ ನೀಡದೇ ಹೀನಾಯವಾಗಿ ನಡೆದುಕೊಂಡಿರುವುದು ಜನರನ್ನು ಕೆರಳಿಸಿದೆ.