Kalaburagi: PSI ನೇಮಕಾತಿ ಅಕ್ರಮಕ್ಕೆ ಬಿಗ್ ಟ್ವಿಸ್ಟ್, ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಪತಿ ಅರೆಸ್ಟ್
PSI ನೇಮಕಾತಿ ಅಕ್ರಮ ಪ್ರಕರಣದಲ್ಲಿ (PSI Exam Fraud Case) ಬಿಗ್ ಟ್ವಿಸ್ಟ್ ಸಿಕ್ಕಿದೆ. ಬಿಜೆಪಿ (BJP) ನಾಯಕಿ ದಿವ್ಯಾ ಹಾಗರಗಿ (Divya Hagaragi) ಪತಿ ರಾಜೇಶ್‌ರನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಕಲಬುರಗಿ (ಏ. 18): PSI ನೇಮಕಾತಿ ಅಕ್ರಮ ಪ್ರಕರಣದಲ್ಲಿ (PSI Exam Fraud Case) ಬಿಗ್ ಟ್ವಿಸ್ಟ್ ಸಿಕ್ಕಿದೆ. ಬಿಜೆಪಿ (BJP) ನಾಯಕಿ ದಿವ್ಯಾ ಹಾಗರಗಿ (Divya Hagaragi) ಪತಿ ರಾಜೇಶ್‌ರನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇದು ಕೇಸರಿ ಪಾಳಯದಲ್ಲಿ ಸಂಚಲನ ಮೂಡಿಸಿದೆ. ಈಶ್ವರಪ್ಪ ಪ್ರಕರಣದ ಬಳಿಕ, ಬಿಜೆಪಿ ಮುಜುಗರ ತಂದ ಇನ್ನೊಂದು ಪ್ರಕರಣ ಇದು.
PSI ನೇಮಕಾತಿ ಅಕ್ರಮ ಪ್ರಕರಣದಲ್ಲಿ (PSI Exam Fraud Case) ಕಲಬುರಗಿಯ ಬಿಜೆಪಿ (BJP) ನಾಯಕಿ ದಿವ್ಯಾ ಹಾಗರಗಿ (Divya Hagaragi) ಶಾಮೀಲಾಗಿದ್ದಾರೆ ಎನ್ನಲಾಗಿದೆ. ಇದೇ ಕಾರಣಕ್ಕಾಗಿ ಸಿಐಡಿ ತಂಡ ಇಂದು ಕಲಬುರಗಿಯ (Kalaburagi) ದಿವ್ಯಾ ಹಾಗರಗಿ ಮನೆ ಮೇಲೆ ದಾಳಿ ನಡೆಸಿ ಶೋಧ ನಡೆಸಿದೆ. ದಿವ್ಯಾ ಹಾಗರಗಿ ಪರಾರಿಯಾಗಿದ್ದಾರೆ. ಪಿಎಸ್‌ಐ ನೇಮಕಾತಿ ಅಕ್ರಮ ಬಗೆದಷ್ಟು ಬಯಲಾಗುತ್ತಿದೆ. ಕಲಬುರಗಿಯಲ್ಲಿಯೇ ಬೀಡು ಬಿಟ್ಟು ಪ್ರಕರಣ ಜಾಲಾಡುತ್ತಿರುವ ಸಿಐಡಿ (CID) ಎಸ್‌ಪಿ ರಾಘವೇಂದ್ರ ಹೆಗಡೆ ,ಡಿವೈಎಸ್‌ಪಿ ಶಂಕರಗೌಡ ಪಾಟೀಲ್, ಪ್ರಕಾಶ ರಾಠೋಡ್ ಮತ್ತು ಟೀಂ ನವರು ತನಿಖೆ ತೀವ್ರಗೊಳಿಸಿದ್ದಾರೆ.