Prajwal Revanna : ಪ್ರಜ್ವಲ್ ರೇವಣ್ಣ ವಿರುದ್ಧ ಪ್ರತಿಭಟನೆಯ ಜ್ವಾಲಾಗ್ನಿ: SIT ಎದುರು ಸಂತ್ರಸ್ತೆಯರು ಹೇಳಿದ್ದೇನು ?

ಪ್ರಜ್ವಲ್ ರೇವಣ್ಣ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ ಪ್ರಿಯಾಂಕಾ ವಾದ್ರಾ! 
ರಾಜ್ಯದೆಲ್ಲೆಡೆ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ..ರೋಷಾವೇಶ
ಇದೇನ್ ಮಾಡ್ಕೊಂಡ್ರು ಮಾಜಿ ಪ್ರಧಾನಿ ದೇವೇಗೌಡರ ಮೊಮ್ಮಗ?

Share this Video
  • FB
  • Linkdin
  • Whatsapp

ಹಾಸನದ ಸಂಸದರೂ ಆಗಿರೋ.. ದೇವೇಗೌಡರ ಮೊಮ್ಮಗ, ಹೆಚ್.ಡಿ.ರೇವಣ್ಣ ಭವಾನಿ ದಂಪತಿಯವರ ಹಿರಿಯ ಮಗ ಪ್ರಜ್ವಲ್(Prajwal Revanna) ಅವರದ್ದು ಎನ್ನಲಾದ ವಿಡಿಯೋಗಳ ರಾಶಿಯೇ ರಾಜ್ಯಾದ್ಯಂತ ಹರಿದಾಡ್ತಾ ಇದೆ. ಆ ವಿಡಿಯೋಗಳ ಬಗ್ಗೆ ಸ್ವಯಂ ಪ್ರೇರಿತವಾಗಿ ಮಹಿಳಾ ಆಯೋಗ ಕೇಸ್ ಕೂಡ ದಾಖಲು ಮಾಡಿದೆ. ರಾಜ್ಯ ಸರ್ಕಾರ ಎಸ್ಐಟಿ(SIT) ಕೂಡ ರಚನೆ ಮಾಡಿದೆ. ಕಾಂಗ್ರೆಸ್(Congress) ಕೆರಳಿದೆ. ಎಲ್ಲೆಲ್ಲೂ ಪ್ರತಿಭಟನೆ, ಆಕ್ರೋಶಗಳ ಧಗಧಗ ಜ್ವಾಲಾಗ್ನಿ ರಾಜ್ಯ ರಾಜಕಾರಣದ ದೊಡ್ಡ ಮನೆಯನ್ನು ಸುಡುತ್ತಿದೆ. ಅಶ್ಲೀಲ ವಿಡಿಯೋ (Obscene Video)ಕೇಸಿನಲ್ಲಿ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಅವರೇ ಆರೋಪಿ ನಂ.1. ಮಗ ಪ್ರಜ್ವಲ್ ರೇವಣ್ಣಅವರೇ ಆರೋಪಿ ನಂ.2. ರೇವಣ್ಣ ಮುಟ್ಟಿ ಮುಟ್ಟಿ ಕಿರುಕುಳ ಕೊಡ್ತಿದ್ರು, ಅವರ ಮಗ ಪ್ರಜ್ವಲ್ ಸೊಂಟ ಚಿವುಟಿ ಕಿರುಕುಳ ಕೊಡ್ತಿದ್ರು ಅಂತಿದ್ದಾರೆ ದೂರು ಕೊಟ್ಟಿರೋ ಸಂತ್ರಸ್ತೆ. ಆ ಹೆಣ್ಣು ಮಗಳು ಹೇಳೋ ಪ್ರಕಾರ ಪ್ರಜ್ವಲ್ ಅವರ ಮಗಳ ಮೇಲೆ ಕಣ್ಣು ಹಾಕಿದಾಗ, ಕೆಲಸ ಬಿಟ್ಟರಂತೆ. ಮೂರ್ನಾಲ್ಕು ವರ್ಷಗಳ ಹಿಂದೆಯೇ ಕೆಲಸ ಬಿಟ್ಟಿರುವ ಹೆಣ್ಣು ಮಗಳು, ವಿಡಿಯೋಗಳು ವೈರಲ್ ಆಗುತ್ತಿದ್ದಂತೆಯೇ ಮರ್ಯಾದೆಗೆ ಅಂಜಿ ಬಂದು ದೂರು ಕೊಟ್ಟರಂತೆ. ಈ ಘಟನೆ ರಾಜ್ಯಾದ್ಯಂತ ಧಗಧಗ ಹೊತ್ತಿ ಉರಿಯುತ್ತಿರುವಾಗಲೇ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹೋಗಿದ್ದಾರೆ. ಪ್ರಜ್ವಲ್ ಅವರನ್ನ ರಕ್ಷಣೆ ಮಾಡೋದಕ್ಕಾಗಿಯೇ ಅವರನ್ನ ಜರ್ಮನಿಗೆ ಕಳಿಸಿದ್ದಾರೆ ಅಂತಾ ಆರೋಪಗಳಿವೆ. ಇದಕ್ಕೆಲ್ಲ ರೇವಣ್ಣ ಕೊಟ್ಟಿರೋ ಉತ್ತರ ಇಷ್ಟು.

ಇದನ್ನೂ ವೀಕ್ಷಿಸಿ: Narendra Modi: ರಾಜ್ಯದಲ್ಲಿ ಮುಂದುವರೆದ ಮೋದಿ ರೌಂಡ್ಸ್: ಪ್ರಧಾನಿಗಾಗಿ ಅಭಿಮಾನಿಗಳಿಂದ ವಿಶೇಷ ಉಡುಗೊರೆ!

Related Video