Asianet Suvarna News Asianet Suvarna News

ವಿಜಯನಗರದಲ್ಲಿ ಎಂಥಾ ಮಾಸ್ಟರ್ ಪ್ಲಾನ್... ಕಬೋರ್ಡ್ ಮಧ್ಯೆ ಸುರಂಗದಲ್ಲಿ ವೇಶ್ಯಾವಾಟಿಕೆ!

Oct 12, 2021, 9:35 PM IST

ವಿಜಯನಗರ(ಅ. 12) ಕಬೋರ್ಡ್ ಮಧ್ಯೆ ಸುರಂಗದಲ್ಲಿ ವೇಶ್ಯಾವಾಟಿಕೆ (Prostitution) ಪ್ರಕರಣ ಬೆಳಕಿಗೆ ಬಂದಿದೆ. ತುಮಕೂರಿನ (Tumkur) ಲಾಡ್ಜ್ ಒಂದರಲ್ಲಿ ಸುರಂಗ  ಕೊರೆದು ವೇಶ್ಯಾವಾಟಿಕೆ ನಡೆಸುತ್ತಿದ್ದ ಮಾದರಿಯದ್ದೇ ಪ್ರಕರಣ. 

ವಿಜಯನಗರ (Vijayanagr )ಹೈಟೆಕ್ ವೆಶ್ಯಾವಾಟಿಕೆ ಅಡ್ಡೆ ಮೇಲೆ ಪೊಲೀಸರ ದಾಳಿ  ನಡೆಸಿದ್ದಾರೆ. ಲಾಡ್ಜ್ ಅಡಗುತಾಣದಲ್ಲಿ ವೇಶ್ಯಾವಾಟಿಕೆಯ ಅಡ್ಡೆ ಮೇಲೆ ಪೊಲೀಸರ ದಾಳಿ. ಓರ್ವ ಮಹಿಳೆ ರಕ್ಷಣೆ ಮಾಡಲಾಗಿದೆ. ದಂಧೆಯಲ್ಲಿ ಭಾಗಿಯಾಗಿದ್ದ 6 ಜನ ಸೇರಿದಂತೆ ಒಟ್ಟು 9 ಆರೋಪಿಗಳ ಬಂಧಿಸಲಾಗಿದೆ. ಹಗರಿಬೊಮ್ಮನಹಳ್ಳಿ ಪಟ್ಟಣದ ಮಲ್ಲಿಗೆ ಲಾಡ್ಜ್ ಮೇಲೆ ದಾಳಿಯಾದೆ.

ಬಾಂಗ್ಲಾದಿಂದ ಮದುವೆಯಾಗಿ ಯುವತಿಯರನ್ನು ಕರೆದು ತರುತ್ತಿದ್ದ

ಬಟ್ಟೆ ಇಡುವ ಕಬೋರ್ಡ್ ಮಧ್ಯೆ ಸುರಂಗ ಕೊರೆದು ವೇಶ್ಯಾವಾಟಿಕೆ ದಂಧೆ ನಡೆಸಲಾಗುತ್ತಿತ್ತು. ಮೈಸೂರಿನ ಒಡನಾಡಿ ಸಂಸ್ಥೆ ಹಾಗೂ ವಿಜಯನಗರ ಎಸ್ಪಿ ಡಾ. ಅರುಣ್ ಕೆ ನೇತೃತ್ವದಲ್ಲಿ ದಾಳಿ ನಡೆಸಲಾಯಿತು. ವೇಶ್ಯಾವಾಟಿಕೆ ದಂಧೆಯಲ್ಲಿ ಭಾಗಿಯಾಗಿದ್ದ ಒಟ್ಟು 9 ಜನರನ್ನು ಬಂಧಿಸಲಾಗಿದೆ.