Asianet Suvarna News Asianet Suvarna News

5 ವರ್ಷದಲ್ಲಿ 75 ಮದುವೆ,  ನಂಬಿಸಿ ಕರೆತಂದು ವೇಶ್ಯಾವಾಟಿಕೆಗೆ ದೂಡುತ್ತಿದ್ದ!

* ಇಂದೋರ್ ಪೊಲೀಸರಿಂದ ಭರ್ಜರಿ ಬೇಟೆ
* ಸೆಕ್ಸ್ ರಾಕೆಟ್ ಹಿಂದೆ ವ್ಯವಸ್ಥಿತ ಜಾಲ
* ಬಾಂಗ್ಲಾ ಯುವತಿಯರನ್ನು ಮದುವೆ ಮಾಡಿಕೊಂಡು ಕರೆತರುತ್ತಿದ್ದ
* ಐದು ವರ್ಷದಲ್ಲಿ 75 ಮದುವೆಯಾಗಿದ್ದ!

Sex racket Smuggler married 75 Bangladeshi girls forced them into Callgirls business Indore mah
Author
Bengaluru, First Published Oct 5, 2021, 12:13 AM IST
  • Facebook
  • Twitter
  • Whatsapp

ಭೋಪಾಲ್(ಅ. 05)  ಮಧ್ಯಪ್ರದೇಶದ ಇಂದೋರ್ ಪೊಲೀಸರು (Indore) ಪೊಲೀಸರು ಪತ್ತೆ ಮಾಡಿರುವ ಸೆಕ್ಸ್ ರಾಕೆಟ್(prostitution)  ಆಘಾತಕಾರಿ ಸತ್ಯಗಳನ್ನು ಬಯಲು ಮಾಡಿದೆ.  ಓರ್ವ ಸೆಕ್ಸ್ ರಾಕೆಟ್ ಕಿಂಗ್ ಪಿನ್ ಸೆರೆ ಸಿಕ್ಕಿದ್ದು ಆತ ನೀಡಿದ ಮಾಹಿತಿ ಕೇಳಿ ಪೊಲೀಸರೇ ಬೆಚ್ಚಿ ಬಿದ್ದಿದ್ದಾರೆ.

ಬಂಧಿತ ಆರೋಪಿ ತಾನು ಇದುವರೆಗೂ ಸುಮಾರು 200ಕ್ಕೂ ಹೆಚ್ಚು ಯುವತಿಯರನ್ನು ವೇಶ್ಯಾವಾಟಿಕೆ ಜಾಲಕ್ಕೆ ತಂದು ಬಿಟ್ಟಿರುವುದಾಗಿ ಒಪ್ಪಿಕೊಂಡಿದ್ದಾನೆ.  ಬಾಂಗ್ಲಾ ದೇಶದಿಂದ ಯುವತಿಯರನ್ನು ತಂದು ಬಿಡುತ್ತಿದ್ದ  ಮುನೀರ್ ನನ್ನು ಬಂಧಿಸಲಾಗಿದೆ.

ಮುನೀರ್ ಕಳೆದ ಐದು ವರ್ಷಗಳಿಂದ ವೇಶ್ಯಾವಾಟಿಕೆ ದಂಧೆಯಲ್ಲಿದ್ದಾನೆ. ಬಡ ಮತ್ತು ನಿರಾಶ್ರಿತ ಕುಟುಂಬದ ಯುವತಿಯರನ್ನು ಟಾರ್ಗೆಟ್ ಮಾಡುತ್ತಿದ್ದ ಮುನೀರ್ ಐದು ವರ್ಷಗಳಲ್ಲಿ 75 ಮದುವೆ (Marriage) ಆಗಿದ್ದೆ ಎಂದಿದ್ದಾನೆ!  ಬಾಂಗ್ಲಾದೇಶದಿಂದ 55 ಯುವತಿಯರನ್ನು ಭಾರತಕ್ಕೆ ಅಕ್ರಮವಾಗಿ ಪ್ರತಿ ತಿಂಗಳು ಕರೆತರುತ್ತಿದ್ದ.  ಭಾರತ ಮತ್ತು ಬಾಂಗ್ಲಾ ಗಡಿಯಲ್ಲಿ ಒಳನುಸುಳಿ ಕರೆತರುತ್ತಿದ್ದ. ನಂತರ ಹಳ್ಳಿಗಳಲ್ಲಿ ತಂಗಿ ಅಲ್ಲಿಂದ ಭಾರತ ಪ್ರವೇಶ ಮಾಡುತ್ತಿದ್ದ.

ವೇಶ್ಯಾ ವಾಟಿಕೆಗೆಂದು ಲಾಡ್ಜ್‌ ನಲ್ಲಿ ಸುರಂಗ.. ತುಮಕೂರಿನ ಕತೆ

ಇಂದೋರ್ ಪೊಲೀಸರು ಮುನೀರ್ ಕುರಿತು ಮಾಹಿತಿ ನೀಡಿದವರಿಗೆ  ಬಹುಮಾನ ಘೋಷಿಸಿದ್ದರು. ಮುನೀರ್ ಬಾಂಗ್ಲಾದೇಶದ ಜಾಸೋರ್ ಮೂಲದವನು ಎಂದು ತಿಳಿದು ಬಂದಿದೆ. ಮುಂಬೈ ಮತ್ತು ಕೋಲ್ಕತ್ತಾ ಮಹಾನಗರದಲ್ಲಿ  ಯುವತಿಯರಿಗೆ ಒಂದು ಬಗೆಯ ತರಬೇತಿಯನ್ನು ಕೊಡಿಸುತ್ತಿದ್ದ. ಮದುವೆ ಹೆಸರಿನಲ್ಲಿ ಕರೆದಿಕೊಂಡು  ಬಂದು ಕರಾಳ ದಂಧೆಗೆ ತಳ್ಳುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಇಂದೋರ್ ಪೊಲೀಸರು ಹಲವು ತಿಂಗಳುಗಳಿಂದ ಸೆಕ್ಸ್ ಅಡ್ಡೆಗಳ ಮೇಲೆ ದಾಳಿ ನಡೆಸುತ್ತಲೇ ಬಂದಿದ್ದರೂ ಮೂಲ ಪತ್ತೆ ಹಚ್ಚಲು ಸಾಧ್ಯವಾಗಿರಲಿಲ್ಲ. ಈಗ ಬಂಧಿತ ಆರೋಪಿ ಬಳಿ ಎಲ್ಲ ಮಾಹಿತಿ ಪಡೆದುಕೊಂಡಿದ್ದು ಈತನ ಹಿಂದೆ ವ್ಯವಸ್ಥಿತ ಜಾಲ ಇರುವುದು ಗೊತ್ತಾಗಿದೆ.  ಬಾಂಗ್ಲಾದೇಶದಲ್ಲಿ ಮದುವೆಯಾಗಿ ಅಲ್ಲಿಂದ ಕರೆದುಕೊಂಡು ಬಂದು ಇಲ್ಲಿ   ಹೆಣ್ಣು ಮಕ್ಕಳನ್ನೇ ಮಾರಾಟ ಮಾಡುತ್ತಿದ್ದವ ಈಗ ಬಂಧನದಲ್ಲಿದ್ದಾನೆ. 

 

Follow Us:
Download App:
  • android
  • ios