'ಅಕುಲ್ , ಸಂತೋಷ್ ಹಿಂದಿದ್ದಾರೆ ಇನ್ನಿಬ್ಬರು ದೊಡ್ಡ ನಟರು; ಸದ್ಯದಲ್ಲೇ ಇವರೂ ಸಿಸಿಬಿ ಮುಂದೆ..'!

ಪ್ರಶಾಂತ್ ಸಂಬರಗಿ ಡ್ರಗ್ ಮಾಫಿಯಾವನ್ನು ಮಟ್ಟ ಹಾಕಲು ಪಣ ತೊಟ್ಟು ನಿಂತಿದ್ದಾರೆ. ಒಬ್ಬೊಬ್ಬರ ವಿಚಾರವನ್ನು ಹೊರ ತರುತ್ತಿದ್ದಾರೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಸೆ. 19): ಪ್ರಶಾಂತ್ ಸಂಬರಗಿ ಡ್ರಗ್ ಮಾಫಿಯಾವನ್ನು ಮಟ್ಟ ಹಾಕಲು ಪಣ ತೊಟ್ಟು ನಿಂತಿದ್ದಾರೆ. ಒಬ್ಬೊಬ್ಬರ ವಿಚಾರವನ್ನು ಹೊರ ತರುತ್ತಿದ್ದಾರೆ. 

ಸಂಜನಾ ಮುಸ್ಲಿಂಗೆ ಮತಾಂತರ, ಮದುವೆ ಬಳಿಕ ಹೆಸರೂ ಚೇಂಜ್, ಈಗ ಈಕೆ ಸಂಜನಾ ಅಲ್ಲ!

ಇಂದು ಟ್ವೀಟ್ ಮಾಡಿ, 'ಇಬ್ಬರು ದೊಡ್ಡ ನಟರ ಬಗ್ಗೆ ಸಾಕ್ಷಿ ಸಮೇತ ಮಾಹಿತಿ ನೀಡುತ್ತೇನೆ. ಈ ದಂಧೆಯಲ್ಲಿ ಎಂಎಲ್‌ಎ ಮಗನೊಬ್ಬ ಇದ್ದಾನೆ. ಆತನ ಹೆಸರನ್ನೂ ಬಹಿರಂಗಪಡಿಸುತ್ತೇನೆ ಎಂದಿದ್ದಾರೆ. ಇಂದು ಅಕುಲ್ ಬಾಲಾಜಿ, ಸಂತೋಷ್ ವಿಚಾರಣೆಗೆ ಸಿಸಿಬಿ ಮುಂದೆ ಹಾಜರಾಗಿದ್ದಾರೆ. ಇವರ ಹಿಂದೆ ದೊಡ್ಡ ದೊಡ್ಡ ನಟರಿದ್ದಾರೆ. ಅವರೆಲ್ಲರ ಹೆಸರು ಮುಂದಿನ ದಿನಗಳಲ್ಲಿ ಹೊರ ಬರಲಿದೆ ಎಂದಿದ್ದಾರೆ. ಈ ಬಗ್ಗೆ ಸ್ವತಃ ಸಂಬರಗಿ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. ಕೇಳೋಣ ಬನ್ನಿ..!

Related Video