Asianet Suvarna News Asianet Suvarna News

ಉಪ್ಪು ತಿಂದವರು ನೀರು ಕುಡಿಯಲೇಕು, ಇದು ಇಷ್ಟಕ್ಕೆ ಮುಗಿಯಲ್ಲ: ಸಂಜನಾಗೆ ಸಂಬರಗಿ ವಾರ್ನಿಂಗ್!

Sep 8, 2020, 12:04 PM IST

ಬೆಂಗಳೂರು (ಸೆ. 08): ಇಂದು ಬೆಳಿಗ್ಗೆ ಸಿಸಿಬಿ ಅಧಿಕಾರಿಗಳು ಸಂಜನಾಗೆ ಶಾಕ್ ನೀಡಿದ್ದಾರೆ.  ಮನೆ ಮೇಲೆ ಸಿಸಿಬಿ ದಾಳಿ ಮಾಡಿ, ಸಂಜನಾರನ್ನು ವಶಕ್ಕೆ ಪಡದಿದ್ದಾರೆ. 

ಸಂಜನಾಗೆ 'ಡ್ರಗ್ಸ್‌' ಸಂಕಷ್ಟ, ಮನೆ ಮೇಲೆ ದಾಳಿ, ನಟಿ ಸಿಸಿಬಿ ವಶಕ್ಕೆ..!

ಈ ಬಗ್ಗೆ ಪ್ರಶಾಂತ್ ಸಂಬರಗಿ ಪ್ರತಿಕ್ರಿಯಿಸಿ,  'ಉಪ್ಪು ತಿಂದವರು ನೀರು ಕುಡಿಯಲೇಬೇಕು. ಯಾವತ್ತು ಯಾವತ್ತು ಕರ್ಮ ಆಗುತ್ತೋ ಅದನ್ನು ಸ್ವಚ್ಚಗೊಳಿಸಲು ಸಿಸಿಬಿಯವರು ಬರುತ್ತಾರೆ. ಕಾನೂನು ಬಾಹಿರ ಚಟುವಟಿಕೆ ಮಾಡುವವರು, ಒಂದು ದಿನ ಕಾನೂನಿಗೆ ತಲೆಬಾಗಲೇಬೇಕು. ಸಂಜನಾ ನನ್ನ ವಿರುದ್ಧ ಅಸಭ್ಯ ಪದಗಳನ್ನು ಬಳಕೆ ಮಾಡಿದ್ಧಾರೆ. ತೇಜೋವಧೆ ಮಾಡಿದ್ದಾರೆ. ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಕೇಸ್ ದಾಖಲಿಸಲಿದ್ಧೇನೆ. ನಾನು ಪ್ರೆಸ್ ಕಾನ್ಫರೆನ್ಸ್‌ನಲ್ಲಿ ಎಲ್ಲಿಯೂ ಅವರ ಹೆಸರನ್ನು ಹೇಳಿರಲಿಲ್ಲ. ಅವರಾಗಿಯೇ ಮಾಧ್ಯಮದ ಮುಂದೆ ಬಂದು ಮಾತನಾಡತೊಡಗಿದರು' ಎಂದು ಸಂಬರಗಿ ಹೇಳಿದ್ಧಾರೆ. 

 

 

Video Top Stories