ಬೆಂಗಳೂರು (ಸೆ. 08): ನಟಿ ರಾಗಿಣಿ ದ್ವಿವೇದಿ ಆಯ್ತು, ಈಗ ಸಂಜನಾ ಗರ್ಲಾನಿ ಸರದಿ. ಸಿಸಿಬಿ ಅಧಿಕಾರಿಗಳು ನಟಿ ಸಂಜನಾ ಮನೆ ಮೇಲೆ ದಾಳಿ, ನಟಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. 

"

ದಾಳಿ ಮಾಡಲು ಬಂದ ಸಿಸಿಬಿ ಅಧಿಕಾರಿಗಳ ಮೇಲೆ ಸಂಜನಾ ರೇಗಾಡಿದ್ದಾರೆ. ನೊಟೀಸ್ ಇಲ್ಲದೇ ಹೇಗೆ ದಾಳಿ ಮಾಡುತ್ತಿದ್ದೀರಿ? ನೊಟೀಸ್ ನೀಡಿದ್ದರೆ ನಾನೇ ವಿಚಾರಣೆಗೆ ಹಾಜರಾಗುತ್ತಿದ್ದೆ? ನನ್ನ ತಾಯಿಗೆ ಹುಶಾರಿಲ್ಲ. ಅವರು ಈಗ ಗಾಬರಿಯಾಗುತ್ತಾರೆ. ಅವರ ಆರೋಗ್ಯಕ್ಕೆ ಹೆಚ್ಚು ಕಡಿಮೆಯಾದರೆ ಯಾರು ಹೊಣೆ? ಎಂದು ಅಧಿಕಾರಿಗಳ ಮೇಲೆ ರೇಗಾಡಿದ್ದಾರೆ. ಆದರೆ ಅದಕ್ಕೆಲ್ಲಾ ಅಧಿಕಾರಿಗಳು ಬಗ್ಗದೇ, ಅವರನ್ನು ವಶಕ್ಕೆ ಪಡೆದಿದ್ದಾರೆ. ಎರಡು ಮೊಬೈಲ್, ಒಂದು ಲ್ಯಾಪ್‌ಟ್ಯಾಪ್, ಹಾರ್ಡ್‌ಡಿಸ್ಕ್, ಪೆನ್‌ಡ್ರೈವನ್ನು ಸಿಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. 

"

'ನಾನು ಸಂಜನಾ ಹೆಸರನ್ನು ಎಲ್ಲಿಯೂ ಉಲ್ಲೇಖಿಸಿಲ್ಲ, ಅವರಾಗಿಯೇ ಮಾಧ್ಯಮದ ಮುಂದೆ ಮಾತಾಡ್ತಿದ್ದಾರೆ'

ರಾಗಿಣಿ ಇದ್ದ ರಾಗಿಣಿ ಇದ್ದ ಸಾಂತ್ವನ ಕೇಂದ್ರಕ್ಕೆ ಸಂಜನಾ ಗಲ್ರಾನಿ ಶಿಫ್ಟ್ ಸಾಧ್ಯತೆ ಇದೆ. ವಿಚಾರಣೆಯ ಬಳಿಕ ಮಹಿಳಾ ಸಾಂತ್ವನ ಕೇಂದ್ರಕ್ಕೆ ಸಂಜನಾ ಗಲ್ರಾನಿ ಶಿಫ್ಟ್ ಆಗುವ ಸಾಧ್ಯತೆ ಇದೆ. 

ಸಂಜನಾ ಮೊಬೈಲ್‌ನಲ್ಲಿ ಡ್ರಗ್ಸ್‌ ಪೆಡ್ಲರ್,  ಡ್ರಗ್ಸ್‌ ಸ್ಟಾರ್‌ಗಳ ಹೆಸರು ಇದೆ ಎಂಬ ಶಂಕೆ ವ್ಯಕ್ತವಾಗುತ್ತಿದೆ. ಹಾಗಾಗಿಯೇ ಮೊಬೈಲ್‌ ಕೊಡಿ, ಮೊಬೈಲ್ ಕೊಡಿ ಎಂದು ಒಂದೇ ಸಮನೇ ಕಿರಿಕ್ ಮಾಡುತ್ತಿದ್ದಾರೆ. 

ಈವೆಂಟ್ ಮ್ಯಾನೇಜರ್ ಪೃಥ್ವಿ ಶೆಟ್ಟಿಯನ್ನು ಸಿಸಿಬಿ ಎರಡು ಬಾರಿ ವಿಚಾರಣೆ ಮಾಡಿದೆ. ಆಗ ಪೃಥ್ವಿ ಹೇಳಿದ ಮಾಹಿತಿ ಆಧಾರದ ಮೇಲೆ ಸಂಜನಾರನ್ನು ಸಿಸಿಬಿ ದಾಳಿ ಮಾಡಿರುವ ಸಾಧ್ಯತೆ ಇದೆ. 

ಸಂಬರಗಿ ಸುಖಾಸುಮ್ಮನೆ ಆರೋಪ ಮಾಡುತ್ತಿದ್ದಾರೆ, ಅವರನ್ನು ಸುಮ್ಮನೆ ಬಿಡಲ್ಲ: ಸಂಜನಾ

ಡ್ರಗ್‌ ಡೀಲ್‌ನಲ್ಲಿ ಪ್ರಮುಖ ಆರೋಪಿಯಾಗಿರುವ ವಿರೇನ್ ಖನ್ನಾ ಬಾಲಿವುಡ್‌ನಲ್ಲಿ ದೊಡ್ಡ ದೊಡ್ಡ ಪಾರ್ಟಿಗಳನ್ನು ಅರೇಂಜ್ ಮಾಡುತ್ತಿದ್ದರು. ಆ ಪಾರ್ಟಿಗಳಲ್ಲಿ ಸಂಜನಾ ಭಾಗಿಯಾಗುತ್ತಿದ್ದರು.  ಬೇರೆ ಬೇರೆ ದೇಶಗಳಿಗೂ ಸಂಜನಾ ಪಾರ್ಟಿಗೆ ಹೋಗುತ್ತಿದ್ದರು. ಶ್ರೀಲಿಂಕಾದ ಕ್ಯಾಸಿನೋಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು.

ಸಂಜನಾ ಮನೆ ಮೇಲೆ ಸಿಸಿಬಿ ದಾಳಿಗೆ ಕಾರಣಗಳೇನು?
- ಪೃಥ್ವಿ ಶೆಟ್ಟಿ ಜೊತೆ ಇವೆಂಟ್ ಮ್ಯಾನೇಜ್ ಮೆಂಟ್ ನಲ್ಲಿದ್ರು ಸಂಜನಾ..
- ಪೃಥ್ವಿ ಶೆಟ್ಟಿಯನ್ನ ಸಿಸಿಬಿ ಎರಡು ಭಾರಿ ವಿಚಾರಣೆ ಮಾಡಿದ್ದಾರೆ..
- ವಿಚಾರಣೆ ವೇಳೆ ಪೃಥ್ವಿ ಶೆಟ್ಟಿ ಕೆಲ ಮಾಹಿತಿಗಳನ್ನ ನೀಡಿರೋ ಸಾಧ್ಯತೆ..
- ಮತ್ತೊಂದ್ ಕಡೆ ವೀರೇನ್ ಖನ್ನಾ ಅರೆಸ್ಟ್ ಆಗಿದ್ದಾನೆ..
- ವೀರೇನ್ ಖನ್ನ ಬಾಲಿವುಡ್ ನಲ್ಲಿ ದೊಡ್ಡ ದೊಡ್ಡ ಪಾರ್ಟಿಗಳನ್ನ ಆರೇಂಜ್ ಮಾಡುತ್ತಿದ್ದ..
-ಅಂತರಾಷ್ಟ್ರೀಯ ಮಟ್ಟದ ಪಾರ್ಟಿಗಳನ್ನೂ ಮಾಡುತ್ತಿದ್ದ ವೀರೇನ್ ಖನ್ನಾ..! 
- ಬಾಲಿವುಡ್ ಕೆಲವು ಪಾರ್ಟಿಗಳಲ್ಲೂ ಸಂಜನಾ ಕಾಣಿಸಿಕೊಳ್ಳುತ್ತಿದ್ರು..
-ಬೇರೆ ಬೇರೆ ದೇಶಗಳಿಗೂ ಸಂಜನಾ ಪಾರ್ಟಿಗೆ ಹೋಗ್ತಾ ಇದ್ರು..
-ಶ್ರೀಲಿಂಕಾದ ಕ್ಯಾಸಿನೋಗಳಲ್ಲಿ ಸಂಜನಾ ಕಾಣಿಸಿಕೊಳ್ತಿದ್ರು...
-ವೀರೇನ್ ಖನ್ನಾ ಕೂಡ ಸಂಜನಾ ಬಗ್ಗೆ ಕೆಲವು ಮಾಹಿತಿಗಳನ್ನ ಕೊಟ್ಟಿರಬಹುದು..?
- ಮತ್ತೊಂದು ಕಡೆ ರಾಹುಲ್ ಕೂಡ ಸಿಸಿಬಿ ಅವಶದಲ್ಲಿದ್ದಾರೆ..
-ರಾಹುಲ್‌ ನನ್ನ ರಾಕಿ ಬ್ರದರ್ ಅಂತ ಸಂಜನಾ ಹೇಳಿಕೊಳ್ತಾರೆ..
-ರಾಹುಲ್ ಕೂಡ ಸಂಜನಾ ಬಗ್ಗೆ ಒಂದಿಷ್ಟು ಮಾಹಿತಿಗಳನ್ನ ಕೊಟ್ಟಿರಬಹುದು..
-ರಾಹುಲ್ ಸಂಜಾನ ಜೊತೆ ಎಲ್ಲಾ ಪಾರ್ಟಿಗಳಲ್ಲೂ ಕಾಣಿಸಿಕೊಳ್ತಿದ್ದ..
-ಸಂಜನಾ‌ ಜೊತೆ ಯಾವಾಗ್ಲು ಇರ್ತಿದ್ದ ರಾಹುಲ್..

ಒಟ್ಟಿನಲ್ಲಿ ಅತ್ತ ರಾಗಿಣಿ ಡ್ರಗ್ ಮಾಫಿಯಾಗೆ ಸಂಬಂಧಿಸಿದಂತೆ ಅರೆಸ್ಟ್ ಆಗುತ್ತಿದ್ದಂತೆ, ಇತ್ತ ಸಂಜನಾಗೂ ಆತಂಕ ಶುರವಾಗಿತ್ತು. ಇಬ್ಬರಿಗೂ ಕಾಮನ್ ಸ್ನೇಹಿತರಿದ್ದು, ಹಲವರು ಈ ನಟಿಯರ ಬಗ್ಗೆ ಬಾಯಿ ಬಿಟ್ಟಿರುವ ಸಾಧ್ಯತೆ ಇದೆ.