'ನಾನು ಸಂಜನಾ ಹೆಸರನ್ನು ಎಲ್ಲಿಯೂ ಉಲ್ಲೇಖಿಸಿಲ್ಲ, ಅವರಾಗಿಯೇ ಮಾಧ್ಯಮದ ಮುಂದೆ ಮಾತಾಡ್ತಿದ್ದಾರೆ'

ನಟಿ ಸಂಜನಾ ಮೇಲೆ ಪ್ರಶಾಂತ್ ಸಂಬರಗಿ ಆರೋಪ ಮುಂದುವರೆದಿದೆ. ಇದಕ್ಕೆ ಸಂಜನಾ ಪ್ರತಿಕ್ರಿಯಿಸಿದ್ದಾರೆ. ' ಸಂಬರಗಿಯವರು ಯಾಕೆ ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ ಗೊತ್ತಿಲ್ಲ. ಈ ಆರೋಪದಿಂದ ಆಘಾತಗೊಂಡಿರುವ ನನ್ನ ತಾಯಿ ಹುಶಾರು ತಪ್ಪಿದ್ದಾರೆ. ಎದೆನೋವು ಕಾಣಿಸಿಕೊಂಡಿದೆ. ನಮ್ಮಮ್ಮನಿಗೆ ಏನಾದ್ರೂ ಆದ್ರೆ ಸುಮ್ಮನೆ ಬಿಡಲ್ಲ' ಎಂದು ವಾಕ್ಸಮರ ನಡೆಸಿದ್ದಾರೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಸೆ. 09): ನಟಿ ಸಂಜನಾ ಮೇಲೆ ಪ್ರಶಾಂತ್ ಸಂಬರಗಿ ಆರೋಪ ಮುಂದುವರೆದಿದೆ. ಇದಕ್ಕೆ ಸಂಜನಾ ಪ್ರತಿಕ್ರಿಯಿಸಿದ್ದಾರೆ. ' ಸಂಬರಗಿಯವರು ಯಾಕೆ ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ ಗೊತ್ತಿಲ್ಲ. ಈ ಆರೋಪದಿಂದ ಆಘಾತಗೊಂಡಿರುವ ನನ್ನ ತಾಯಿ ಹುಶಾರು ತಪ್ಪಿದ್ದಾರೆ. ಎದೆನೋವು ಕಾಣಿಸಿಕೊಂಡಿದೆ. ನಮ್ಮಮ್ಮನಿಗೆ ಏನಾದ್ರೂ ಆದ್ರೆ ಸುಮ್ಮನೆ ಬಿಡಲ್ಲ' ಎಂದು ವಾಕ್ಸಮರ ನಡೆಸಿದ್ದಾರೆ. 

ಸಂಜನಾ ಮಾತಿಗೆ ಪ್ರತಿಕ್ರಿಯಿಸಿರುವ ಸಂಬರಗಿ, 'ನಾನು ಸಂಜನಾ ಹೆಸರನ್ನು ಎಲ್ಲಿಯೂ ಉಲ್ಲೇಖ ಮಾಡಿಲ್ಲ.ಅವರ ಬಗ್ಗೆ ವೈಯಕ್ತಿಕವಾಗಿ ನನಗೆ ಯಾವ ದ್ವೇಷವೂ ಇಲ್ಲ. ನನಗೆ ದೇಶಭಕ್ತಿಯ ಕಿಚ್ಚಿದೆ ಅಷ್ಟೇ. ಸಮಾಜ ಹಾಳು ಮಾಡುವ ಡ್ರಗ್ಸ್ ಬಗ್ಗೆ ಧ್ವನಿ ಎತ್ತಿದ್ದೇನೆ. ನನ್ನ ಬಳಿ ಕೆಲವೊಂದಿಷ್ಟು ದಾಖಲೆಗಳಿವೆ. ಅದನ್ನು ಬಿಡುಗಡೆ ಮಾಡಿದ್ದೇನೆ' ಎಂದಿದ್ದಾರೆ. 

ಸಂಬರಗಿ ಸುಖಾಸುಮ್ಮನೆ ಆರೋಪ ಮಾಡುತ್ತಿದ್ದಾರೆ, ಅವರನ್ನು ಸುಮ್ಮನೆ ಬಿಡಲ್ಲ: ಸಂಜನಾ

Related Video