
ಪ್ರಜ್ವಲ್ ರಾಸಲೀಲೆಯ 2800 ವಿಡಿಯೋಗಳ ಗುಟ್ಟು ರಟ್ಟಾಗಿದ್ದೇಗೆ?
ಪ್ರಜ್ವಲ್ ರೇವಣ್ಣರದ್ದು ಅಂತ ಹೇಳಲಾಗುತ್ತಿರುವ ರಾಸಲೀಲೆ ವಿಡಿಯೋಗಳ ಪ್ರಕರಣ ದಿಕ್ಕೊಂದು ಟ್ವಿಸ್ಟ್ ಪಡೆದುಕೊಳ್ತಿದೆ. ಮೊಬೈಲ್ನಲ್ಲಿದ್ದ ವಿಡಿಯೋಗಳು ವೈರಲ್ ಆಗಿದ್ದೇಗೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
ಪ್ರಜ್ವಲ್ ರೇವಣ್ಣರದ್ದು ಅಂತ ಹೇಳಲಾಗುತ್ತಿರುವ ರಾಸಲೀಲೆ ವಿಡಿಯೋಗಳ ಪ್ರಕರಣ ದಿಕ್ಕೊಂದು ಟ್ವಿಸ್ಟ್ ಪಡೆದುಕೊಳ್ತಿದೆ. ಈಗಾಗಲೇ ಸರ್ಕಾರ ಎಸ್.ಐ.ಟಿಗೆ ತನಿಖೆಯನ್ನ ವಹಿಸಿದೆ. ಪ್ರಜ್ವಲ್ ರೇವಣ್ಣ ಈಗಾಗಲೇ ದೇಶ ಬಿಟ್ಟಿದ್ದಾರೆ. ರಾಜಕೀಯ ಕೆಸರೆರಚಾಟವು ನಡೆಯುತ್ತಿದೆ. ಹೀಗಿರುವಾಗ್ಲೇ ಈ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ.. ಈ ಕರ್ಮಕಾಂಡವನ್ನ ವೈರಲ್ ಮಾಡಿದ್ಯಾರು ಅನ್ನೋದು ಈಗ ಎಲ್ಲರ ತಲೆ ಕೆಡಸುತ್ತಿದೆ. ಕಾಂಗ್ರೆಸ್ನ ಮಹಾನಾಯಕನೇ ಈ ವೈರಲ್ ವಿಡಿಯೋಗಳ ಸೂತ್ರಧಾರಿ ಅನ್ನೋ ಆರೋಪಗಳು ಕೇಳಿ ಬರ್ತಿವೆ. ಕಾರ್ ಡ್ರೈವರ್ ಕಾರ್ತಿಕ್ ಪೆನ್ ಡ್ರೈವ್ ಅನ್ನ ದೇವರಾಜೇ ಗೌಡರಿಗೆ ಬಿಟ್ರೆ ಯಾರಿಗೂ ಕೊಟ್ಟಿಲ್ಲ ಅಂತ ಹೇಳುತ್ತಿದ್ದಾರೆ.
Add Asianetnews Kannada as a Preferred Source
