35 ದಿನಗಳ ಬಳಿಕ ಬೆಂಗಳೂರಿನತ್ತ ಪ್ರಜ್ವಲ್ ರೇವಣ್ಣ..ಏರ್‌ಪೋರ್ಟ್‌ನಲ್ಲೇ ವಶಕ್ಕೆ ಪಡೆದ ಎಸ್‌ಐಟಿ!
ಜರ್ಮನಿಯಿಂದ ಬೆಂಗಳೂರಿಗೆ ಫ್ಲೈಟ್ ಹತ್ತಿದ ಹಾಸನ ಸಂಸದ
ರಾತ್ರಿ 1:30ಕ್ಕೆ ಪ್ರಜ್ವಲ್ ರೇವಣ್ಣ ಬೆಂಗಳೂರಿಗೆ ಬರೋ ಸಾಧ್ಯತೆ
ಪ್ರಜ್ವಲ್ ಬರ್ತಿದ್ದಂತೆ ಅರೆಸ್ಟ್ ಮಾಡಲು ಸಜ್ಜಾದ SIT ಟೀಮ್
ಬರೊಬ್ಬರಿ 35 ದಿನಗಳ ಬಳಿಕ 4 ಬಾರಿ ಫ್ಲೈಟ್ ಕ್ಯಾನ್ಸಲ್ ಮಾಡಿದ ನಂತರ. ಅಟ್ಲಾಸ್ಟ್ ಪ್ರಜ್ವಲ್ ರೇವಣ್ಣ(Prajwal Revanna) ಬೆಂಗಳೂರಿಗೆ(Bengaluru) ವಾಪಸ್ ಆಗ್ತಿದ್ದಾರೆ. ಇನ್ನೂ 150 ನಿಮಿಷಗಳಲ್ಲಿ ಪ್ರಜ್ವಲ್ ಪ್ರಯಾಣಿಸುತ್ತಿರುವ ವಿಮಾನ ಬೆಂಗಳೂರಿನ ಏರ್ಪೋರ್ಟ್‌ನಲ್ಲಿ ಲ್ಯಾಂಡ್ ಆಗಿದೆ. 8 ಗಂಟೆಗಳ ಜರ್ನಿ ಮಾಡಿ ಬರುವ ಪ್ರಜ್ವಲ್‌ರನ್ನ ಸ್ವಾಗತಿಸಲು SIT ಟೀಂ ಕೂಡ ರೆಡಿಯಾಗಿದೆ. ದೊಡ್ಡಗೌಡರ ಮಾತಿಗೆ ಕಟ್ಟುಬಿದ್ದೋ ಅಥವಾ ಪಾಪಪ್ರಜ್ಞೆ ಕಾಡಿತ್ತೋ ಏನೋ ಇವತ್ತು ಪ್ರಜ್ವಲ್ ವಾಪಸ್ ಬರ್ತಿದ್ದಾನೆ. ಆದ್ರೆ ಬೆಂಗಳೂರಲ್ಲಿ ಲ್ಯಾಂಡ್ ಆಗ್ತಿದ್ದಂತೆ ಆತನನ್ನ ವೆಲ್‌ಕಮ್ ಮಾಡೋದಕ್ಕೆ ಈಗಾಗಲೇ SIT ರೆಡಿಯಾಗಿ ನಿಂತಿದೆ. ಗೌಡರ ಖಡಕ್ ಪತ್ರದ ನಂತರ ಪ್ರಜ್ವಲ್ ಭಾರತಕ್ಕೆ ಬಂದಿದೆ. ಈಗಾಗಲೇ 7 ಗಂಟೆಗಳ ವಿಮಾನ ಪಯಣ ಮುಗಿಸಿ. ಭಾರತದ ಏರ್ ಜೋನ್ಗೂ ಎಂಟ್ರಿಯಾಗಿದ್ದಾರೆ. ಇನ್ನೂ ಕೆಲವೇ ನಿಮಿಷಗಳಲ್ಲಿ ಪ್ರಜ್ವಲ್ ಪ್ರಯಾಣಿಸುತ್ತಿರುವ ವಿಮಾನ ಬೆಂಗಳೂರು ಏರ್ಪೋರ್ಟ್ನಲ್ಲಿ ಬಂದಿಳಿಯಲಿದೆ. ಆದ್ರೆ ಪ್ರಜ್ವಲ್ ಬರ್ತಿದಂತೆ SIT ಅವರನ್ನ ಬಂಧಿಸಲಿದೆ. ನೇರ ವೈದ್ಯಕೀಯ ಪರಿಕ್ಷೆಗೆ ಕರೆದೊಯ್ದು ನಂತರ ಅವರ ಕಛೇರಿಗೆ ಕರೆದುಕೊಂಡು ಹೋಗಲಿದೆ. ಪ್ರಜ್ವಲ್ ಮನಸ್ಸು ಮಾಡಿ ಭಾರತಕ್ಕೆ ಎಂಟ್ರಿ ಕೊಡ್ತಿದ್ದಾರೆ. ಇಷ್ಟು ದಿನ ವಿದೇಶದಲ್ಲಿ ಕಾಲ ಕಳೆದಿದ್ದ ಆತ ಇನ್ಮುಂದೆ ಅಧಿಕಾರಿಗಳ ಮಧ್ಯೆಯೇ ಇರಬೇಕಾಗುತ್ತೆ.
ಇದನ್ನೂ ವೀಕ್ಷಿಸಿ: Narendra Modi: ಹೇಗೆ ಶುರುವಾಯ್ತು..ಎಲ್ಲಿಗೆ ಬಂತು ಮೋದಿ ದಂಡಯಾತ್ರೆ..? ವಿಪಕ್ಷಗಳ ಒಗ್ಗಟ್ಟು ಫಲ ಕೊಡುತ್ತಾ..?