ಸ್ಪಾ ಹೆಸರಲ್ಲಿ ವೇಶ್ಯಾವಾಟಿಕೆ ದಂಧೆ ಆರೋಪ: 4 ಲಾಡ್ಜ್‌ಗಳ ಮೇಲೆ ದಾಳಿ, 11 ಯುವತಿಯರ ರಕ್ಷಣೆ

ಬಾಗಲಕೋಟೆಯ ಮುಧೋಳ ನಗರದಲ್ಲಿ ನಾಲ್ಕು ಲಾಡ್ಜ್‌ಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದು, ನಾಲ್ಕು ತಂಡದಿಂದ‌ ನಾಲ್ಕು  ಲಾಡ್ಜ್‌ಗಳ‌‌ ಮೇಲೆ‌ ಏಕಕಾಲಕ್ಕೆ ದಾಳಿ ನಡೆಸಲಾಗಿದೆ. 

Share this Video
  • FB
  • Linkdin
  • Whatsapp

ಬಾಗಲಕೋಟೆ : ಸ್ಪಾ(Spa) ಹೆಸರಲ್ಲಿ ವೇಶ್ಯಾವಾಟಿಕೆ ದಂಧೆ(Prostitution ring) ನಡೆಸುತ್ತಿರುವ ಆರೋಪ ಕೇಳಿಬಂದಿದ್ದು, ಬಾಗಲಕೋಟೆಯ(Bagalkot) ಮುಧೋಳ ನಗರದಲ್ಲಿ ನಾಲ್ಕು ಲಾಡ್ಜ್‌ಗಳ ಮೇಲೆ ದಾಳಿ(Attack on lodge) ನಡೆಸಲಾಗಿದೆ. ಜಮಖಂಡಿ ಡಿವೈಎಸ್‌ಪಿ ಶಾಂತವೀರ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಮುಧೋಳ ಸಿಪಿಐ, ಇಬ್ಬರು ಪಿಎಸ್‌ಐ,ಲೋಕಾಪುರ ಪಿಎಸ್‌ಐ ಸೇರಿ ನಾಲ್ಕು ತಂಡ ರಚನೆ ಮಾಡಲಾಗಿತ್ತು. ನಾಲ್ಕು ತಂಡದಿಂದ‌ ನಾಲ್ಕು ಲಾಡ್ಜ್‌ಗಳ‌‌ ಮೇಲೆ‌ ಏಕಕಾಲಕ್ಕೆ ದಾಳಿ ನಡೆಸಲಾಗಿದೆ. ಮುಧೋಳ‌ ನಗರದ ಓಂಕಾರ, ಶಿವದುರ್ಗಾ,ಸಪ್ತಗಿರಿ, ಸುರಭಿ ಲಾಡ್ಜ್ ಮೇಲೆ ದಾಳಿ ಮಾಡಲಾಗಿದೆ. 11 ಯುವತಿಯರ ರಕ್ಷಣೆ ಮಾಡಲಾಗಿದ್ದು, ಲಾಡ್ಜ್ ಮ್ಯಾನೇಜರ್ ,ಮಾಲೀಕರು ಸೇರಿ ಒಂಬತ್ತು ಜನರ ಮೇಲೆ ಎಫ್‌ಐ ಆರ್ ಹಾಕಲು‌‌ ಪೊಲೀಸರು ಮುಂದಾಗಿದ್ದಾರೆ. ಆಸ್ಸಾಂ,ಕಲ್ಕತ್ತಾ,ಮುಂಬೈ ಮೂಲದ ಯುವತಿಯರು ಇದ್ದು, ಎಲ್ಲ 26, 27, 30 ವರ್ಷದವರಾಗಿದ್ದಾರೆ. ಸ್ಪಾ ಹೆಸರಲ್ಲಿ ವೇಶ್ಯಾವಾಟಿಕೆ ಆರೋಪದ‌ ಮೇರೆಗೆ ದಾಳಿ ಮಾಡಿ, ಪರಿಶೀಲನೆ ನಡೆಸಲಾಗಿದೆ.

ಇದನ್ನೂ ವೀಕ್ಷಿಸಿ: ಬಾರದ ಲೋಕಕ್ಕೆ ಪಯಣ ಬೆಳೆಸಿದ ಅಪರ್ಣಾ..ಬಾಳ ನಿರೂಪಣೆ ಮುಗಿಸಿ ಚಿರ ನಿದ್ರೆಗೆ ಜಾರಿದ ನಟಿ

Related Video