Asianet Suvarna News Asianet Suvarna News

ಅಂಡರ್‌ವರ್ಲ್ಡ್‌ಗೆ ಗುಡ್ ಬೈ ಹೇಳಿ ರಾಜಕೀಯಕ್ಕೆ ಬಂದ ಚಕ್ರೆ, ಹೆಲಿಕಾಪ್ಟರ್‌ನಲ್ಲಿ ಬಂದು ಪಾಂಪ್ಲೆಟ್ ಹಂಚಿದ್ದ!

ಡಾನ್‌ ಮುಗಿಸೋಕೆ ಹೋಗಿ ಬರಿಗೈಲಿ ವಾಪಾಸ್‌ ಬಂದ ಚಕ್ರೆಗೆ ಏನ್‌ ಅನಿಸಿತೋ ಗೊತ್ತಿಲ್ಲ. ಅಂಡರ್‌ವರ್ಲ್ಡ್‌ನಿಂದ ದೂರ ಉಳಿಯೋಕೆ ತೀರ್ಮಾನಿಸಿದ್ದ. ಜನರ ಕೊಲ್ಲೋ ಬದಲು ಕಾಯೋ ಕೆಲಸ ಮಾಡೋಕೆ ಯೋಚನೆ ಮಾಡಿ 1996ರಲ್ಲಿ ಚುನಾವಣೆಗೆ ಗೆದ್ದು ಗೆಲುವು ಕೂಡ ಸಾಧಿಸಿದ. ಬಳಿಕ ತನ್ನ ಪತ್ನಿಯನ್ನೂ ಗೆಲ್ಲಿಸಿದ.

ಬೆಂಗಳೂರು (ಸೆ. 30): ಕ್ರಿಸ್ಟೋಫರ್ ಚಕ್ರವರ್ತಿ ಅಲಿಯಾಸ್ ಚಕ್ರೆಯ ಅಂಡರ್ವರ್ಲ್ಡ್ ಜರ್ನಿ ಬಗ್ಗೆ ನಾವು ಕಳೆದ 3 ದಿನಗಳಿಂದ ಹೇಳುತ್ತಲೇ ಬಂದಿದ್ದೇವೆ. ನಿನ್ನೆ ನಾವು ಚಕ್ರೆ, ಮುತ್ತಪ್ಪ ರೈ ಹಾಕಿಕೊಟ್ಟ ಸ್ಕೆಚ್ನಂತೆ ಸೆಂಟ್ರಲ್ ಜೈಲ್ ಎದುರಿಗೇ ಅಂದಿನ ಭೂಗತ ದೊರೆ ಜೈರಾಜ್‌ ಮೇಲೆ ಅಟ್ಯಾಕ್ ಮಾಡ್ತಾರೆ. ಆದ್ರೆ ಅವತ್ತು ಜೈರಾಜ್‌ನ ಟೈಂ ಚೆನ್ನಾಗಿತ್ತು. ಚಕ್ರೆ ಸೇರಿ ಏಳೆಂಟು ಮಂದಿ ಡಾನ್ ಮೇಲೆ ಅಟ್ಯಾಕ್ ಮಾಡಿದ್ರೂ ಅವರಿಗೆಲ್ಲಾ ಟಫ್ ಫೈಟ್ ಕೊಟ್ಟು ಜೀವ ಉಳಿಸಿಕೊಂಡು ಜೈಲಿನೊಳಗೆ ನುಗ್ಗಿಬಿಟ್ಟ. ಯಾವಾಗ ಜೈರಾಜ್ ತನ್ನನ್ನ ಕೊಲ್ಲೋದಕ್ಕೆ ಒಂದು ಗ್ಯಾಂಗ್ ರೆಡಿಯಾಗಿಬಿಟ್ಟಿದೆ ಅಂತ ಗೊತ್ತಾಯ್ತೋ ಆತ ಎದುರಾಳಿಗಳನ್ನ ಮುಗಿಸೋದಕ್ಕೆ ಸಜ್ಜಾಗಿಬಿಟ್ಟಿದ್ದ. 

ಆದರೆ, ಕೊನೆಗೆ ತಾನು ರಿವೆಂಜ್ ತೆಗೆದುಕೊಳ್ಳೋದಕ್ಕೂ ಮೊದಲೇ ಕೊಲೆಯಾಗಿಬಿಟ್ಟ. ಇತ್ತ ಡಾನ್‌ಅನ್ನು ಮುಗಿಸಲು ಹೋದ ಚಕ್ರೆ ಬರಿಗೈಯಲ್ಲಿ ವಾಪಸ್ ಬಂದ ನಂತರ ಅದೇನು ಬುದ್ಧಿ ಬಂತೋ ಏನೋ ಅಂಡರ್ ವರ್ಲ್ಡ್‌ನಿಂದ ದೂರ ಉಳಿಯಲು ನಿರ್ಧರಿಸಿಬಿಟ್ಟ. ಜನರ ಮಧ್ಯೆ ಬದುಕೋ ಮನಸು ಮಾಡಿದ. 

ಡಾನ್‌ ಆಗಿ ಮೆರೆದ್ರೂ, ವಿಧಿಯಾಟಕ್ಕೆ ಶರಣಾದ ಬೆಂಗಳೂರು ಭೂಗತ ಲೋಕದ ಚಕ್ರೆ!

ಯಾವಾಗ ಚಕ್ರೆಗೆ ಅಂಡರ್ವರ್ಲ್ಡ್ ಸಾಕು ಅಂತೆನ್ನಿಸಿಬಿಡ್ತೋ ಸೀದಾ ಆತ ಹೋಗಿದ್ದು ತಾನು ಹುಟ್ಟಿ ಬೆಳದ ರಾಮಚಂದ್ರಪುರಕ್ಕೆ. ಅಲ್ಲಿನ ಜನರ ಪ್ರೀತಿ ಸಂಪಾದಿಸಲು ಶುರು ಮಾಡಿದ. ತಾನು ಭೂಗತಲೋಕದಲ್ಲಿ ಸಂಪಾದಿಸಿದ ಹಣವನ್ನೆಲ್ಲಾ ತನ್ನ ಜನರ ಸಹಾಯಕ್ಕೆ ಬಳಸಿಕೊಂಡ. ನೋಡ ನೋಡ್ತಿದ್ದಂತೆ ರಾಮಚಂದ್ರಪುರದ ನೆಚ್ಚಿನ ಚಕ್ರೆಯಾದ. ಇನ್ನೂ ಜನರ ಪ್ರೀತಿಯನ್ನೇ ಬಂಡವಾಳವಾಗಿಟ್ಟುಕೊಂಡು ಚಕ್ರೆ 1996ರಲ್ಲಿ ಕಾರ್ಪೊರೇಷನ್ ಎಲೆಕ್ಷನ್‌ಗೆ ಕಂಟೆಸ್ಟ್ ಮಾಡ್ತಾನೆ. ಭರ್ಜರಿ ಗೆಲವೂ ಕೂಡ ದಾಖಲಿಸುತ್ತಾನೆ. 

Video Top Stories