ಬಾಂಬ್‌ ಸ್ಫೋಟ ಪ್ರಕರಣ ಭೇದಿಸುತ್ತೇವೆ, ಆರೋಪಿಯನ್ನು ಅರೆಸ್ಟ್‌ ಮಾಡ್ತೇವೆ: ಗೃಹ ಸಚಿವ ಪರಮೇಶ್ವರ್‌

ಬಾಂಬ್‌ ಸ್ಫೋಟ ಪ್ರಕರಣವನ್ನು ಭೇದಿಸುತ್ತೇವೆ. ಆರೋಪಿಯನ್ನು ಅರೆಸ್ಟ್‌ ಮಾಡುತ್ತೇವೆ ಎಂದು ಗೃಹ ಸಚಿವ ಪರಮೇಶ್ವರ್‌ ಹೇಳಿದ್ದಾರೆ.
 

Share this Video
  • FB
  • Linkdin
  • Whatsapp

ಬೆಂಗಳೂರು: ಬೆಂಗಳೂರು ಬಾಂಬ್ ಸ್ಫೋಟ(Bomb Blast) ಪ್ರಕರಣದ ತನಿಖೆ ತೀವ್ರಗೊಂಡಿದ್ದು, ತನಿಖೆ ವೇಳೆ ಬಹಳ ಮುಖ್ಯ ಕುರುಹು ಸಿಕ್ಕಿವೆ ಎಂದು ಅಧಿಕಾರಿಗಳ ಸಭೆ ಬಳಿಕ ಗೃಹ ಸಚಿವ ಡಾ.ಜಿ.ಪರಮೇಶ್ವರ್(Home Minister Parameshwar) ಹೇಳಿದ್ದಾರೆ. ವ್ಯಕ್ತಿ ‌ಬಂದಿದ್ದ ಬಗ್ಗೆ ಸಿಸಿಟಿವಿ ಪಡೆದು ತನಿಖೆ ನಡೆಯುತ್ತಿದೆ. ಎನ್ಐಎ, ಎನ್ಎಸ್ಜಿ ಸಹಕಾರದಲ್ಲಿ ತನಿಖೆ ನಡೆಯುತ್ತಿದೆ. ಪ್ರಕರಣ ಭೇದಿಸುತ್ತೇವೆ, ಅರೆಸ್ಟ್ ಮಾಡುತ್ತೇವೆ. ಬೆಂಗಳೂರಿನ(Bengaluru) ಜನ ಆತಂಕ ಪಡುವ ಅಗತ್ಯ ಇಲ್ಲ. ಬೆಂಗಳೂರನ್ನ ಸೇಫ್ ಸಿಟಿ ಮಾಡುವ ಕೆಲಸ ಮಾಡುತ್ತೇವೆ. ಹೆಚ್ಚು ಪ್ಯಾಟ್ರೋಲಿಂಗ್‌ಗೆ ಕ್ರಮ ಕೈಗೊಳ್ಳುತ್ತೇವೆ ಎಂದ ಡಾ. ಜಿ. ಪರಮೇಶ್ವರ್‌ ಹೇಳಿದ್ದಾರೆ. 

ಇದನ್ನೂ ವೀಕ್ಷಿಸಿ:  ಬಾಂಬ್ ಇಟ್ಟ ನಂತರ ಶಂಕಿತ ಕಾಲ್ ಮಾಡಿದ್ಯಾರಿಗೆ..? ಎಲ್ಲಿಗೆ ಬಂತು ಬಾಂಬ್ ಬ್ಲಾಸ್ಟ್ ತನಿಖೆ..? ಆರೋಪಿ ಎಲ್ಲಿ..?

Related Video