ಬಗೆದಷ್ಟು ಬಯಲಾಗ್ತಿದೆ ನಿಶಾ ನರಸಪ್ಪ ವಂಚನೆ: ವಂಶಿಕಾ ಹೆಸರಲ್ಲಿ ಲಕ್ಷಾಂತರ ಹಣ ಪಂಗನಾಮ


ನಿಶಾ ವಂಚನೆ ಪುರಾಣಗಳು ಬಗೆದಷ್ಟು ಬಯಲಾಗ್ತಿದೆ. ಇದೀಗ ಫ್ಯಾಷನ್ ಶೋ ಹೆಸರಲ್ಲಿ ವಂಚನೆ ಮಾಡಿರೋದು ಬೆಳಕಿಗೆ ಬಂದಿದೆ. ಆಕೆಯ ವಿರುದ್ಧ ಬೆಂಗಳೂರಿನ ವಿವಿಧ ಠಾಣೆಗಳಲ್ಲಿ ವಂಚನೆ ಕೇಸ್ ದಾಖಲಾಗುತ್ತಿವೆ.
 

Share this Video
  • FB
  • Linkdin
  • Whatsapp

ಬಾಲ ನಟಿ ವನ್ಷಿಕಾ(Vanshika) ಹೆಸರು ದುರ್ಬಳಕೆ ಕೇಸ್ ಮೊದ ಮೊದಲು ಸಣ್ಣ ಮಟ್ಟದಲ್ಲಿ ಮೋಸ ಆಗಿದೆ ಎನ್ನಲಾಗುತ್ತಿತ್ತು. ಆದರೆ ತನಿಖೆ ಕೈಗೊಂಡ ಪೊಲೀಸರೇ ಶಾಕ್ ಆಗಿದ್ದಾರೆ. ನಿಶಾ ನರಸಪ್ಪ(Nisha Narasappa) ಪುರಾಣ ಬಗೆದಷ್ಟು ಬಯಲಾಗುತ್ತಿದೆ. ಸಿನಿಮಾ , ಸಿರಿಯಲ್ ಗಳಲ್ಲಿ ನಿಮ್ಮ ಮಕ್ಕಳಿಗೆ ಚಾನ್ಸ್ ಕೊಡಿಸ್ತೀನಿ ಅಂತ ಒಂದಾ ಎರಡಾ ಅದೆಷ್ಟೋ ಮಂದಿ ಪೋಷಕರಿಗೆ ಆರೋಪಿತೆ ನಿಶಾ ನರಸಪ್ಪಾ ಪಂಗನಾಮ ಹಾಕಿದ್ದಾಳೆ. ಇಷ್ಟಕ್ಕೆ ಇವಳ ಕತೆ ಮುಗಿತು ಅಂತ ಸಮನ್ನೆ ಆಗೋ ಹಾಗೇ ಇಲ್ಲ. ಹನುಮಂತನಾ ಬಾಲದ ತರ ಈಕೆಯ ಪುರಾಣಗಳು ಬೆಳೆಯುತ್ತಲೇ ಇದೆ. ಒಂದು ಕಡೆ ಚಿಕ್ಕ ಮಕ್ಕಳಿಗೆ ಒಂದು ತರ ಮೋಸ ಮಾಡಿದ್ರೇ, ಮತ್ತೊಂದು ಕಡೆ ಮೀಸ್ ಕರ್ನಾಟಕ ,ಮಿಸ್ಟರ್ ಕರ್ನಾಟಕ ಅಂತೆಲ್ಲಾ ಯುವಕ,ಯುವತಿಯರಿಗೆ ತಲೆ ತಿಂದು ಲಕ್ಷ ಲಕ್ಷ ವಸೂಲಿ ಮಾಡಿದ್ದಾಳೆ.

ಇದನ್ನೂ ವೀಕ್ಷಿಸಿ:  ಮನೆ ಯಜಮಾನಿಗೆ ಗೃಹಲಕ್ಷ್ಮಿ ಅನುಗ್ರಹ: 2000 ರೂಪಾಯಿ ಬೇಕು ಅಂದ್ರೆ ಏನು ಮಾಡಬೇಕು..?

Related Video