Asianet Suvarna News Asianet Suvarna News

'ಆಪರೇಷನ್ ಬಾಡಿಗೆ ತಾಯಿ' ಕರಾಳ ದಂಧೆ ಬಯಲಿಗೆಳದ ಪೊಲೀಸರ ಸಾಹಸ

* ಬೆಂಗಳೂರಿನಲ್ಲಿ ಮಕ್ಕಳ ಮಾರಾಟ ಜಾಲ
* ಬಾಡಿಗೆ ತಾಯಿ ಹೆಸರಿನಲ್ಲಿ ಮಗು ಪಡೆಯುವ ಮುನ್ನ ಎಚ್ಚರ
* ಎಲ್ಲಿಂದಲೋ ಮಕ್ಕಳನ್ನು ಕರೆತಂದು ನಿಮ್ಮದೆ ಮಕ್ಕಳು ಎಂದು ಮಾರ್ತಾರೆ
* ಬೆಂಗಳೂರು ದಕ್ಷಿಣ ಪೊಲೀಸರ ಬೃಹತ್ ಕಾರ್ಯಾಚರಣೆ

ಬೆಂಗಳೂರು(ಅ. 08) ಬಾಡಿಗೆ ತಾಯಿ (surrogacy mother) ಮೂಲಕ ಮಕ್ಕಳ (Children) ಪಡೆಯುವ ಆಲೋಚನೆ ಇದ್ದವರೇ ಎಚ್ಚರ.  ಮಕ್ಕಳಿಲ್ಲ ಎಂಬ ಆತಂಕವನ್ನೇ ಇವರು ಬಂಡವಾಳ ಮಾಡಿಕೊಳ್ಳುತ್ತಿದ್ದರು. ಮಕ್ಕಳಿಗಾಗಿ ಬಾಡಿಗೆ ತಾಯಿ ಮೊರೆ ಹೋಗುವ ಮುನ್ನ ಎಚ್ಚರವಿರಲಿ. ಪೊಲೀಸರು ಈ ಕರಾಳ ದಂಧೆಯನ್ನು ಬಯಲು ಮಾಡಿದ್ದೇ ರೋಚಕ.

ಮಗು ಕದ್ದು ಮಾರಿದ್ದ ವೈದ್ಯೆ ಸಿಕ್ಕಿ ಬಿದ್ದ ಕತೆಯೇ ರೋಚಕ

ಬೆಂಗಳೂರು ದಕ್ಷಿಣ ಪೊಲೀಸರು ಕಾರ್ಯಾಚರಣೆ ನಡೆಸಿ ಹದಿಮೂರು ಮಕ್ಕಳ(Child trafficking)  ರಕ್ಷಣೆ ಮಾಡಲಾಗಿದೆ. ಬಡ ಮಕ್ಕಳನ್ನು ಲಕ್ಷ ಲಕ್ಷಕ್ಕೆ ಮಾರಾಟ ಮಾಡುವ ದಂಧೆ ಬಯಲಿಗೆ ಬಂದಿದೆ. ಬಾಡಿಗೆ ತಾಯಿ ಮೂಲಕ ಮಗು ಆಗಿದೆ ಎಂದು ನಂಬಿಸುತ್ತಿದ್ದ ಜಾಲ ಪತ್ತೆಯಾಗಿದೆ. ತಮ್ಮದೇ ಮಗು ಎಂದು ಇಂಥವರಿಂದ ಮಕ್ಕಳನ್ನು ಪಡೆದುಕೊಂಡವರಿಗೂ ಶಾಕ್ ಕಾದಿದೆ. ಮುಂಬೈಯಿಂದ ಮಕ್ಕಳನ್ನು ಕದ್ದು ಬೆಂಗಳೂರಿನಲ್ಲಿ ಲಕ್ಷಾಂತರ ರೂಪಾಯಿ ಹಣಕ್ಕೆ ಮಾರಾಟ ಮಾಡುವ ಜಾಲವನ್ನು ದಕ್ಷಿಣ ವಿಭಾಗದ ಪೊಲೀಸರು ಪತ್ತೆ ಮಾಡಿದ್ದಾರೆ.