Asianet Suvarna News Asianet Suvarna News

ನಟ ಚೇತನ್ ಚಂದ್ರ ಮೇಲೆ 20ಕ್ಕೂ ಹೆಚ್ಚು ಪುಂಡರಿಂದ ದಾಳಿ: ಓರ್ವ ಆರೋಪಿ ಬಂಧನ

ಮದರ್ಸ್ ಡೇ ಪ್ರಯುಕ್ತ ತಮ್ಮ ತಾಯಿಯನ್ನು ಚೇತನ್ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ ವಾಪಸ್ ಬರುತ್ತಿದ್ರು. ಆಗ  ಘಟನೆ ನಡೆದಿದೆ. ಸುಮಾರು ಒಂದು ಕಿಮೀನಿಂದ ಫಾಲೋ ಮಾಡ್ಕೊಂಡು ಬಂದಿದ್ದ ಕಿಡಿಗೇಡಿಯೊಬ್ಬ ಚೇತನ್ ಚಂದ್ರ ಕಾರನ್ನ ಅಡ್ಡಗಟ್ಟಿದ್ದಾನೆ. 
 

ಕನ್ನಡ ಸಿನಿಮಾ ಹಾಗೂ ಕಿರುತೆರೆಯ ಯುವ ನಟ ಚೇತನ್ ಚಂದ್ರ ಮೇಲೆ ಗುಂಡಾಗಿರಿ ನಡೆದಿದೆ. ನಟ ಚೇತನ್ ಚಂದ್ರ ಮೇಲೆ ಕಿಡಿಗೇಡಿಗಳಿಂದ ಏಕಾಏಕಿ ದಾಳಿ ಆಗಿದೆ. ರಕ್ತಬರುವಂತೆ ನಟ ಚೇತನ್ ಚಂದ್ರನನ್ನ ತಳಿಸಿದ್ದಾರೆ. ಈ ಹಲ್ಲೆ ಘಟೆನೆ ನಡೆದಿದ್ದು ಬೆಂಗಳೂರಿನ ಕಗ್ಗಲಿಪುರದಲ್ಲಿ. ಕನಕಪುರ ರಸ್ತೆಯ ಕಗ್ಗಲಿಪುರದಲ್ಲಿ ಚೇತನ್ ಚಂದ್ರ ಮೇಲೆ ಸುಮಾರು 20 ಮಂದಿ ಅಟ್ಯಾಕ್ ಮಾಡಿದ್ದಾರೆ. ಮದರ್ಸ್ ಡೇ ಪ್ರಯುಕ್ತ ತಮ್ಮ ತಾಯಿಯನ್ನು ಚೇತನ್ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ ವಾಪಸ್ ಬರುತ್ತಿದ್ರು. ಆಗ  ಘಟನೆ ನಡೆದಿದೆ. ಸುಮಾರು ಒಂದು ಕಿಮೀನಿಂದ ಫಾಲೋ ಮಾಡ್ಕೊಂಡು ಬಂದಿದ್ದ ಕಿಡಿಗೇಡಿಯೊಬ್ಬ ಚೇತನ್ ಚಂದ್ರ ಕಾರನ್ನ ಅಡ್ಡಗಟ್ಟಿದ್ದಾನೆ. ಕಾರಿನಿಂದ ಇಳಿದ ಚೇತನ್​​ ಯಾಕೆ ಅಡ್ಡ ಹಾಕಿದ್ರಿ ಅಂತ ಕೇಳಿದ್ದಾರೆ ಅಷ್ಟೆ, 

ಕೂಡಲೇ ಆ ವ್ಯಕ್ತಿ ಚೇತನ್ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ. ಇದನ್ನ ನೋಡಿದ ಆತನ ಪತ್ನಿ ಮತ್ತು ಇನ್ನಿತರರು ಗುಂಪುಗಟ್ಟಿದ್ದಾರೆ. ಪತ್ನಿಯ ಊರು ಕೂಡ ಅದೇ ಆಗಿದ್ದರಿಂದ ಹೆಚ್ಚು ಜನಸೇರಿದ್ದಾರೆ. ನಂತರ ಚೇತನ್ಮೇಲೆ ಸುಮಾರು 15-20 ಜನರಿಂದ ಮುಖ ಕಿತ್ತು ಹೋಗುವ ಹಾಗೆ ದಾಳಿ ಮಾಡಿದ್ದಾರೆ. ಈ ಘಟನೆ ಬಗ್ಗೆ ನಟ ಚೇತನ್ ಚಂದ್ರ ತನ್ನ ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಚೇತನ್​ ಚಂದ್ರ ಅವರ ಮುಖವೆಲ್ಲಾ ರಕ್ತವಾಗಿದ್ದು, ಧರಿಸಿದ್ದ ಬಟ್ಟೆ ಕೂಡ ರಕ್ತಸಿಕ್ತವಾಗಿದೆ. ನಟ ಚೇತನ್ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಾಗಿದೆ. 

ವಿಚಾರಣೆ ಕೈಗೆತ್ತಿಕೊಂಡ ಪೊಲೀಸರು ಹಲ್ಲೆ ಮಾಡಿದ್ದ ಓರ್ವನನ್ನು ವಶಕ್ಕೆ ಪಡೆದಿದ್ದಾರೆ. ಕಗ್ಗಲೀಪುರ ಪೊಲೀಸರಿಂದ ತಡರಾತ್ರಿ ಓರ್ವ ಬಂಧಿಸಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ ಚೇತನ್ ಚಂದ್ರಗೆ ಚಿಕಿತ್ಸೆ ನೀಡಲಾಗಿದೆ. ನಟ ಚೇತನ್ ಚಂದ್ರ ಕನ್ನಡ ಸಿನಿ ಪ್ರೇಮಿಗಳಿಗೆ ಚಿರಪರಿಚಿತ. ಕನ್ನಡದಲ್ಲಿ ಜಾತ್ರೆ, ರಾಜಧಾನಿ, ಪ್ರೇಮಿಸಂ, ಪ್ಲಸ್​ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕಗ್ಗಲಿಪುರದಿಂದ ಬೆಂಗಳೂರಿಗೆ ಬರೋ ರಸ್ತೆಯಲ್ಲಿ ಇತ್ತೀಚೆಗೆ ಕಿಡಿಗೇಡಿಗಳ ಅಟ್ಟಹಾಸ ಹೆಚ್ಚಾಗಿದೆ. ಕಾರಿನಲ್ಲಿ ಬರೋ ಪ್ರಯಾಣಿಕರನ್ನ ಬೇಕಂತಲೇ ಅಡ್ಡಗಟ್ಟಿ ಕಿರಿಕ್ ಮಾಡಿ ಹಣ ವಸೂಲಿ ಮಾಡೋ ಕೃತ್ಯಗಳು ಖಗ್ಗಲಿಪುರದಲ್ಲಿ ಹೆಚ್ಚಾಗಿವೆ. ನಟ ಚೇತನ್ ಚಂದ್ರ ಕೂಡ ಇದೇ ಬಲೆಗೆ ಸಿಲುಕಿ ಪೆಟ್ಟು ತಿಂದಿದ್ದಾರೆ ಅಂತ ಹೇಳಲಾಗ್ತಿದೆ.

Video Top Stories