ಸ್ವಿಗ್ಗಿ ಬಾಯ್ಸ್ ಮೂಲಕ ಡ್ರಗ್ಸ್ ಸಪ್ಲೈ, ಎನ್‌ಸಿಬಿಯಿಂದ ಸಿನಿಮೀಯ ಕಾರ್ಯಾಚರಣೆ

 ಸ್ವಿಗ್ಗಿ  ಬಾಯ್ಸ್ ಬಳಕೆ ಮಾಡಿಕೊಂಡು ಮನೆ ಮನೆಗೆ ಡ್ರಗ್ಸ್ ಸಪ್ಲೈ ಮಾಡುತ್ತಿದ್ದ ಗ್ಯಾಂಗನ್ನು ಎನ್‌ಸಿಬಿ ತಂಡ ಬಂಧಿಸಿದೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಅ. 03): ಸ್ವಿಗ್ಗಿ ಬಾಯ್ಸ್ ಬಳಕೆ ಮಾಡಿಕೊಂಡು ಮನೆ ಮನೆಗೆ ಡ್ರಗ್ಸ್ ಸಪ್ಲೈ ಮಾಡುತ್ತಿದ್ದ ಗ್ಯಾಂಗನ್ನು ಎನ್‌ಸಿಬಿ ತಂಡ ಬಂಧಿಸಿದೆ. ಆರೋಪಿಗಳಿಂದ 5.20 ಲಕ್ಷ ಮೌಲ್ಯದ 140 ಕೆಜಿ ಹೈ ಗ್ರೇಡ್ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳಿಂದ .5.20 ಲಕ್ಷ ನಗದು, 140 ಕೆ.ಜಿ. ಹೈಗ್ರೇಡ್‌ ಗಾಂಜಾ ಹಾಗೂ ಎರಡು ಕಾರುಗಳನ್ನು ಜಪ್ತಿ ಮಾಡಲಾಗಿದೆ. 

ಐಷಾರಾಮಿ ಹಡಗಿನಲ್ಲಿ ನಶೆ ಪಾರ್ಟಿ: NCB ಬಲೆಗೆ ಬಿದ್ದ ಬಾಲಿವುಡ್ ನಟನ ಪುತ್ರ ಯಾರು?

ಸೆ.30 ರಂದು ನಗರದಲ್ಲಿ 8 ಬಾಕ್ಸ್‌ಗಳಲ್ಲಿ ಗಾಂಜಾ ತುಂಬಿ ಕೊರಿಯರ್‌ ವಾಹನದಲ್ಲಿ ಬೇರೆಡೆ ಸಾಗಿಸಲು ಆರೋಪಿಗಳು ಸಂಚು ರೂಪಿಸಿದ್ದರು. ಈ ಬಗ್ಗೆ ಎನ್‌ಸಿಬಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದಾಗ ಇಬ್ಬರು ಸಿಕ್ಕಿಬಿದ್ದರು. ಆಗ 137 ಕೆಜಿ ಗಾಂಜಾ ಜಪ್ತಿ ಮಾಡಿದ ಅಧಿಕಾರಿಗಳು, ಬಂಧಿತರನ್ನು ವಿಚಾರಿಸಿದಾಗ ಇನ್ನುಳಿದವರ ಬಗ್ಗೆ ಬಾಯ್ಬಿಟ್ಟಿದ್ದಾರೆ.

Related Video