
ಐಷಾರಾಮಿ ಹಡಗಿನಲ್ಲಿ ನಶೆ ಪಾರ್ಟಿ: NCB ಬಲೆಗೆ ಬಿದ್ದ ಬಾಲಿವುಡ್ ನಟನ ಪುತ್ರ ಯಾರು?
ದೇಶದ ವಾಣಿಜ್ಯ ನಗರಿ ಮುಂಬೈ ಕರಾವಳಿಯಲ್ಲಿ ಕ್ರೂಸ್ ಹಡಗಿನಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿಯನ್ನು ಮಾದಕ ವಸ್ತು ನಿಯಂತ್ರಣ ದಳ ಬಯಲು ಮಾಡಿದೆ.
ಮುಂಬೈ(ಅ.03) ದೇಶದ ವಾಣಿಜ್ಯ ನಗರಿ ಮುಂಬೈ(Mumbai) ಕರಾವಳಿಯಲ್ಲಿ ಕ್ರೂಸ್ ಹಡಗಿನಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿಯನ್ನು(rave party) ಮಾದಕ ವಸ್ತು ನಿಯಂತ್ರಣ ದಳ(NCB) ಬಯಲು ಮಾಡಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಈ ವೇಳೆ ಹಡಗಿನಲ್ಲಿದ್ದ ಕೊಕೇನ್, ಹಶೀಶ್ ಮತ್ತು ಎಂಡಿಎಂಎ ಸೇರಿದಂತೆ ಇನ್ನಿತರ ಅಕ್ರಮ ಮಾದಕ ವಸ್ತುಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಅಲ್ಲದೆ ಈ ಪಾರ್ಟಿಯಲ್ಲಿ ತೊಡಗಿದ್ದ 10 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ಈ 10 ಮಂದಿ ಪೈಕಿ ಬಾಲಿವುಡ್ ಸೂಪರ್‌ಸ್ಟಾರ್(Bollywood Superstar) ಒಬ್ಬರ ಪುತ್ರನೂ ಇದ್ದಾನೆ ಎಂದು ಮೂಲಗಳು ತಿಳಿಸಿವೆ.