
Sexual Harassment : 'ನನ್ನ ಮೊದಲ ಮಗು ಶಾಸಕರಿಂದಲೇ ಜನಿಸಿದ್ದು'
* ಬಿಜೆಪಿ ಶಾಸಕರ ಮೇಲೆ ಮಹಿಳೆ ಆರೋಪ ಪ್ರಕರಣ
* ಸೇಡಂ ಬಿಜೆಪಿ ಶಾಸಕ ರಾಜಕುಮಾರ್ ಪಾಟೀಲ್ ಮೇಲೆ ಮಹಿಳೆ ಆರೋಪ
* ಮಹಿಳೆ ನೆರವಿಗೆ ನಿಂತ ವಕೀಲ ಜಗದೀಶ್
ಬೆಂಗಳೂರು (ಫೆ. 07): ಸೇಡಂ ಬಿಜೆಪಿ ಶಾಸಕ ರಾಜಕುಮಾರ್ ಪಾಟೀಲ್ (Rajkumar Patil) ಮೇಲೆ ಮಹಿಳೆಯೊಬ್ಬರು (Woman) ಗಂಭೀರ ಆರೋಪ ಮಾಡಿದ್ದಾರೆ. ತನ್ನ ಮೊದಲನೆ ಮಗುವಿನ ಜನನಕ್ಕೆ ಶಾಸಕರೇ ಕಾರಣ ಎಂದು ಪೊಲೀಸ್ (Karnataka Police) ವಿಚಾರಣೆಯಲ್ಲಿ ಹೇಳಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಮಹಿಳೆ ಆರೋಪಕ್ಕೆ ಕಣ್ಣೀರು ಹಾಕಿದ ಬಿಜೆಪಿ ಶಾಸಕ
ಶಾಸಕ ರಾಜ್‌ಕುಮಾರ್ ಪಾಟೀಲ್ ದೊಡ್ಡ ಫ್ರಾಡ್. ನನ್ನ ಮಗನಿಗೂ, ಆತನಿಗೂ ಸಂಬಂಧವಿದೆ. ಅದನ್ನು ಒಪ್ಪಿಕೊಳ್ಳಲಿ ಎಂದು ಒತ್ತಾಯಿಸಿದ್ದಾಳೆ. ಪೊಲೀಸರು ನನ್ನನ್ನು ಠಾಣೆಯಲ್ಲಿ ಕೂಡಿ ಹಾಕಿದ್ದರು. ಬ್ಯೂಟಿ ಪಾರ್ಲರ್ ನಡೆಸಿಕೊಂಡು ಜೀವನ ಮಾಡುತ್ತಿದ್ದೇನೆ. ನನ್ನ ಮಗುವಿಗೆ ಜೀವನಾಂಶ ಕೊಡಿ ಎಂದು ಪೊಲೀಸ್ ವಿಚಾರಣೆ ಸಂದರ್ಭ ಹೇಳಿದ್ದಾರೆ.