ಆಂಟಿಗೆ ಮೆಸೇಜ್ ಮಾಡಿದವನು ಹೆಣವಾದ..! ಸಂಜೆ ರಾಜಿ ಪಂಚಾಯ್ತಿ.. ರಾತ್ರಿ ಮರ್ಡರ್..!

ಅವನ ಸೇಡಿಗಾಗಿ ಗೆಳೆಯನನ್ನೇ ಕೊಂದುಬಿಟ್ಟ..!
ರಾತ್ರಿ ಮನೆ ಬಿಟ್ಟವನು ಬೆಳಗ್ಗೆ ಸಿಕ್ಕಿದ್ದು ಹೆಣವಾಗಿ..!
ಕತ್ತು ಕೊಯ್ದು ಯುವಕನ ಕೊಲೆ ಮಾಡಿದ ಹಂತಕರು 

Share this Video
  • FB
  • Linkdin
  • Whatsapp

ಅವನು ಇನ್ನೂ 23 ವರ್ಷದ ಯುವಕ. ಓದನ್ನ ಅರ್ಧಕ್ಕೆ ನಿಲ್ಲಿಸಿ ಹೆತ್ತವರಿಗೆ ಸಹಾಯವಾಗ್ಲಿ ಅಂತ ಟ್ರ್ಯಾಕ್ಟರ್ ಡ್ರೈವಿಂಗ್ ಮಾಡಿಕೊಂಡು ಚೂರು ಪಾರು ಹಣ ಸಂಪಾದಿಸುತ್ತಿದ್ದ. ಆದರೆ ಹೀಗೆ ತನ್ನ ಪಾಡಿಗೆ ತಾನಿದ್ದವನು ಆವತ್ತು ಇದ್ದಕಿದ್ದಂತೆ ಹೆಣವಾಗಿದ್ದ. ಅವನ ಶವ ಕಾವೇರಿ ನಾಲೆಯಲ್ಲಿ ಸಿಕ್ಕಿತ್ತು. ಅವನನ್ನ ಹಂತಕರು ಕತ್ತು ಕೊಯ್ದು ಕೊಲೆ(Murder) ಮಾಡಿದ್ರು. ಆದ್ರೆ ಇದೇ ಕೇಸ್‌ನ ತನಿಖೆಗಿಳಿದ ಪೊಲೀಸರಿಗೆ ಕ್ಷಣ ಕ್ಷಣಕ್ಕೂ ಟ್ವಿಸ್ಟ್ ಆ್ಯಂಡ್ ಟರ್ನ್. ಯಾವಾಗ ಭಾನುಪ್ರಕಾಶನ ಹೆಣ ಸಿಗ್ತೋ ಕೆಲವೇ ನಿಮಷಗಳಲ್ಲಿ ಗ್ರಾಮ ಪಂಚಾಯ್ತಿ ಅಧ್ಯಕ್ಷನ್ನಾಗಿದ್ದ ಎನ್.ಸಿ ಪ್ರಕಾಶ ಮತ್ತು ಆತನ ಹುಡುಗರನ್ನ ಪೊಲೀಸರು (police) ಲಾಕ್ ಮಾಡಿದ್ರು. ವಿಚಾರಣೆ ಆರಂಭಿಸಿದ್ರು. ಆದರೆ ಅವರನ್ನ ಎತ್ತಾಕೊಂಡು ಬರಲು ಕಾರಣವೂ ಇತ್ತು. ಅದೇನಂದ್ರೆ ಭಾನುಪ್ರಕಾಶನ ಶವ ಸಿಕ್ಕ ಹಿಂದಿನ ರಾತ್ರಿಯಷ್ಟೇ ಎನ್.ಸಿ ಪ್ರಕಾಶ ಮತ್ತು ಭಾನುಪ್ರಕಾಶನ ನಡುವೆ ಮಾರಾಮಾರಿ ನಡೆದಿತ್ತು. ಅಷ್ಟೇ ಅಲ್ಲ ರಾಜಿ ಪಂಚಾಯ್ತಿ ನಡೆದು ಪೊಲೀಸ್ ಠಾಣೆ ಮೆಟ್ಟಿಲು ಕೂಡ ಏರಿತ್ತು. ಸಂಜೆ ಗಲಾಟೆ ಮತ್ತು ರಾಜಿ ಪಂಚಾಯ್ತಿ.. ಬೆಳಗ್ಗೆ ಮರ್ಡರ್ ಅಂದರೆ ಕೊಲೆ ಮಾಡಿದವರು ಹಿಂದಿನ ರಾತ್ರಿ ಗಲಾಟೆ ಮಾಡಿದವರೇ ಅಂತನ್ನಿಸಿಬಿಡುತ್ತೆ. ಅದು ಪೊಲೀಸರಿಗೂ ಅನಿಸಿತ್ತು. ಇದೇ ಕಾರಣಕ್ಕೆ ಅವರನ್ನೆಲ್ಲಾ ಎತ್ತಾಕೊಂಡು ಬಂದಿದ್ರು. ಆದ್ರೆ ವಿಚಾರಣೆ ಮಾಡಿದಾಗ ಗೊತ್ತಾಗಿದ್ದು ಅವರು ಕೊಲೆಗಾರರು ಅಲ್ಲ ಅಂತ. ಸ್ನೇಹ, ಗೆಳತನ ಅನ್ನೋದು ಪವಿತ್ರವಾದ ಸಂಬಂಧ ಅಂತಾರೆ. ಕಷ್ಟದಲ್ಲಿದ್ದಾಗ ಬಂಧು ಬಳಗ ಕೈ ಬಿಟ್ಟರೂ ಗೆಳೆತನ ಕೈ ಹಿಡಿಯುತ್ತೆ ಅನ್ನುವ ವಿಶ್ವಾಸದಲ್ಲಿ ಜನರು ಇರುತ್ತಾರೆ. ಆದ್ರೆ ಇಲ್ಲೊಬ್ಬ ಪಾಪಿ ಬೇರೋಬ್ಬನ ಮೇಲೆ ದ್ವೇಷ ತೀರಿಸಿಕೊಳ್ಳಲು ಒಂದೇ ತಟ್ಟೆಯಲ್ಲಿ ಅನ್ನ ತಿಂದ ಸ್ನೇಹಿತನನ್ನೇ ಕೊಲೆ ಮಾಡಿದ್ದಾನೆ. ಹೌದು, ಭಾನುಪ್ರಕಾಶ ಕೊಲೆಯಾಗಿದ್ದು ಎನ್. ಸಿ ಪ್ಕಾಶನಿಂದ ಅಲ್ಲ ಬದಲಿಗೆ ತನ್ನ ಪ್ರಾಣ ಸ್ನೇಹಿತನಿಂದಲೇ. ಆದ್ರೆ ಗೆಳೆಯನ ಹೆಣ ಹಾಕಿ ಇನ್ನಿಲ್ಲದಂತೆ ನಾಟಕವಾಡಿದ್ದ ಆ ಕಿರಾತಕ ಫ್ರೆಂಡ್ ಕೊನೆಗೂ ಪೊಲೀಸರ ಕೈಗೆ ತಗ್ಲಾಕಿಕೊಂಡಿದ್ದಾನೆ.

ಇದನ್ನೂ ವೀಕ್ಷಿಸಿ: ಧರ್ಮ ವಿರೋಧಿ ನೀತಿಯ ಬಗ್ಗೆ I.N.D.I.A ಮೈತ್ರಿಕೂಟದ ನಿಲುವೇನು..?

Related Video