ಆತ JCB ಡ್ರೈವರ್..ಈಕೆ ಫ್ಯಾನ್ಸಿ ಸ್ಟೋರ್‌ನಲ್ಲಿ ಕೆಲಸದಾಕೆ: ಅವನನ್ನ ಪ್ರೀತಿಸಿದ್ದೇ, ಆಕೆ ಮಾಡಿದ ಮೊದಲ ತಪ್ಪು..!

ಅವಳು ಆವತ್ತು ಕ್ಷಮಿಸಿ ತಪ್ಪುಮಾಡಿಬಿಟ್ಟಳು..!
ಮೊಬೈಲ್ ಪಡೆದಾಗಲೇ ಬಂದಿತ್ತು ಫೋನ್ ಕಾಲ್..!
ಟೀನೇಜ್ನಲ್ಲಿ ಲವ್.. ಟೀನೇಜ್ನಲ್ಲೇ ಬ್ರೇಕ್ ಅಪ್..!
ಆತನನ್ನ ಕ್ಷಮಿಸಿದ್ದು ಆಕೆ ಮಾಡಿದ ಕೊನೆಯ ತಪ್ಪು..!

Share this Video
  • FB
  • Linkdin
  • Whatsapp

ಅದೊಂದು ಬಡ ಕುಟುಂಬ.. ಬೀಡಿ ಕಟ್ಟಿ ಜೀವನ ಮಾಡ್ತಿತ್ತು. ಇದ್ದ ಇಬ್ಬರು ಮಕ್ಕಳನ್ನ ಕಷ್ಟಪಟ್ಟು ಓದಿಸಿದ್ರು. ಇನ್ನೂ ಮೊದಲ ಮಗಳು ಪಿ.ಯು.ಸಿಗೆ ಓದು ಮುಗಿಸಿ ತಂದೆ ತಾಯಿಯ ಸಹಾಯಕ್ಕೆ ನಿಂತಿದ್ಲು. ಫ್ಯಾನ್ಸಿ ಸ್ಟೋರ್‌ನಲ್ಲಿ ಕೂಲಿಗೆ ಸೇರಿದ್ಲು. ಆಕೆಯ ತಂದೆ ತಾಯಿ ಕೂಡ ತಮ್ಮ ಕಷ್ಟದ ದಿನಗಳು ಮುಗೀತು ಅಂದುಕೊಂಡಿದ್ರು. ಆದ್ರೆ ಕೈಗೆ ಬಂದಿದ್ದ ಮಗಳು ಇವತ್ತು ಹೆಣವಾಗಿದ್ದಾಳೆ. ಕೆಲಸಕ್ಕೆ ಅಂತ ಹೋದ ಮಗಳು ಹೆಣವಾಗಿ ವಾಪಸ್ ಬಂದಿದ್ದಾಳೆ. ಆಕೆಯನ್ನ ಕಿರಾತಕನೊಬ್ಬ ಕೊಂದು ಮುಗಿಸಿದ್ದಾನೆ. ಮನೆಗೆ ದಿಕ್ಕಾಗಿದ್ದ ಹೆಣ್ಣುಮಗಳೇ ಅಲ್ಲಿ ಕೊಲೆಯಾಗಿ(Murder) ಹೋಗಿದ್ಲು. ಇನ್ನೂ ತನಿಖೆ ನಡೆಸಿದ ಪೊಲೀಸರು ಘಟನೆ ನಡೆದು ಕೆಲವೇ ಗಂಟೆಗಳಲ್ಲಿ ಆರೋಪಿ ಪದ್ಮರಾಜ್‌ನನ್ನ ಅರೆಸ್ಟ್ ಮಾಡಿದ್ರು. ಇಷ್ಟೆಲ್ಲಾ ಆಗಿ ಮೂರು ವರ್ಷಗಳಾಗಿದೆ. ಆದ್ರೆ ಇವತ್ತು ಅದೇನಾಯ್ತೋ ಏನೋ ಇದೇ ಪದ್ಮರಾಜ್ ತಾನು ಪ್ರೀತಿಸಿದ ಹುಡುಗಿಗೇ ಚಾಕು ಹಾಕಿಬಿಟ್ಟಿದ್ದಾನೆ. ಯಾವಾಗ ಗೌರಿ ಪೊಲೀಸ್(Police) ಮೆಟ್ಟಿಲ್ಲೇರಿದ್ಲೋ ಆಗಲೇ ಪದ್ಮರಾಜ್ ಬುದ್ಧಿ ಕಲಿಬೆಕಿತ್ತು. ಆದ್ರೆ ಆತ ಏನೇ ಆಗಲಿ ನನಗೆ ಅವಳೇ ಬೇಕು ಅಂತ ಹಠ ಹಿಡಿದುಬಿಟ್ಟಿದ್ದ. ಆಕೆ ಬೇಡ ಬೇಡ ಅಂದ್ರೂ ಆಕೆಯ ಹಿಂದೆ ಬಿದ್ದಿದ್ದ. ಇನ್ನೂ ಆವತ್ತೇ ಗೌರಿ ಕಂಪ್ಲೆಂಟ್ ದಾಖಲಾಗಲು ಒಪ್ಪಿದಿದ್ರೆ ಇವತ್ತು ಗೌರಿಗೆ ಮಸಣ ಸೇರುವ ಪರಿಸ್ಥಿತಿ ಬರುತ್ತಿರಲಿಲ್ಲ ಅನಿಸುತ್ತೆ. ಆವತ್ತು ಗೌರಿ ಪದ್ಮರಾಜ್ನನ್ನ ಕ್ಷಮಿಸಬಾರದಿತ್ತು. ಆದ್ರೆ ಆಕೆ ಆವತ್ತು ಮಾಡಿದ ತಪ್ಪಿಗೆ ಇವತ್ತು ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾಳೆ. 

ಇದನ್ನೂ ವೀಕ್ಷಿಸಿ:  ಸೂರ್ಯ ಶಿಕಾರಿ.. ಶುಕ್ರನ ಕಡೆ ಸಫಾರಿ.. ಮತ್ತೇನು ಮಾಡಲಿದೆ ಇಸ್ರೋ?

Related Video