Crime News: ಅವಳನ್ನ ಕೊಂದವನು ಅವಳ ಮನೆಯಲ್ಲೇ ಇದ್ದ..! ಅನ್ನ ಹಾಕಿದವಳನ್ನೇ ಕೊಂದು ಮುಗಿಸಿದ..!

ಅವಳ ಹೆಣ ಹಾಕಿ ಸೀದಾ ಮಂಗಳೂರಿಗೆ ಹೋದ..!
ಆತನ ಕಥೆ ಕೇಳೋದಕ್ಕೆ ಪೊಲೀಸರು ರೆಡಿ ಇರಲಿಲ್ಲ!
ಒಂದೇ ಏಟಿಗೆ ಅವಳು ಪ್ರಾಣ ಬಿಟ್ಟದ್ದು ಯಾಕೆ..!

Share this Video
  • FB
  • Linkdin
  • Whatsapp

ಅವಳು ಒಂಟಿ ಮಹಿಳೆ. ಗಂಡ 14 ವರ್ಷಗಳ ಹಿಂದೆ ಮೃತಪಟ್ಟರೆ. ಇದೊಬ್ಬ ಮಗ ಆ್ಯಕ್ಸಿಡೆಂಟ್ನಿಂದ ತೀರಿ ಹೋಗಿದ್ದ. ಇದೊಬ್ಬಳು ತಾಯಿ ಬೆಂಗಳೂರಿನಲ್ಲಿದ್ದ(Bengaluru) ಕೋಟಿ ಕೋಟಿ ಆಸ್ತಿ ಬಿಟ್ಟು ದೂರದ ತೋಟದ ಮನೆಗೆ ಹೋಗಿ ಸೆಟೆಲ್ ಆಗಿದ್ಲು. ತನ್ನವರು ಯಾರೂ ಇಲ್ಲ ಅನ್ನೋದನ್ನ ಬಿಟ್ರೆ ಇನ್ಯಾವ ಯೋಚನೆಯೂ ಆಕೆಗೆ ಇರಲಿಲ್ಲ. ಒಂಟಿಯಾಗಿ ತನ್ನ ಫಾರ್ಮ್‌ಹೌಸ್‌ನಲ್ಲಿ(Farm House) ವಾಸವಿದ್ಲು. ಹೀಗಿರುವಾಗ್ಲೇ ಆವತ್ತೊಂದು ದಿನ ತನ್ನದೇ ತೋಟದ ಮನೆಯಲ್ಲಿ ಆ ಮಹಿಳೆ(woman) ಬರ್ಬರವಾಗಿ ಕೊಲೆಯಾಗಿ(Murder)ಹೋಗಿದ್ಲು. ಯಾರೋ ಆಕೆಯ ತಲೆಗೆ ಬಡಿದು ಕೊಂದು ಮುಗಿಸಿ ಮನೆಯಲ್ಲಿದ್ದ ಲಕ್ಷಗಟ್ಟಲೆ ಹಣವನ್ನ ಕದ್ದೊಯ್ದಿದ್ರು. ಇನ್ನೂ ಇದೇ ಪ್ರಕರಣದ ಬೆನ್ನು ಬಿದ್ದ ಪೊಲೀಸರು ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಹಂತಕರ ಹೆಡೆಮುರಿ ಕಟ್ಟಿದ್ರು. ಒಂಟಿಯಾಗಿದ್ದ ಶಾಂತಾಳನ್ನ ಧರೋಡೆಕೋರರೇ ಕೊಲೆ ಮಾಡಿದ್ದಾರೆ ಅಂತ ಆಕೆಯ ಡ್ರೈವರ್ ಪೊಲೀಸರಿಗೆ ಹೇಳಿದ್ದ. ಸೀನ್ ಆಫ್ ಕ್ರೈಂ ಕೂಡ ಅದು ನಿಜ ಅನ್ನುವಂತಿತ್ತು. ಶಾಂತಾ ಡ್ರೈವರ್ ಧರೋಡೆಕೋರರೇ ಆಕೆಯನ್ನ ಕೊಂದ್ರು ಅಂತ ಪೊಲೀಸರೆದುರು ಹೇಳಿದ್ದ. ಆದ್ರೆ ಪೊಲೀಸರು ಅವನ ಕಥೆ ಕೇಳೋದಕ್ಕೆ ರೆಡಿ ಇರಲಿಲ್ಲ. ಅವನನ್ನೇ ವಷಕ್ಕೆ ಪಡೆದು ವರ್ಕ್ ಮಾಡ್ತಾರೆ. ಆಗಲೇ ನೋಡಿ ಆತ ತಂದ ಮನೆಗೆ ಕನ್ನ ಹಾಕಿದ ಕಥೆಯನ್ನ ಹೇಳಿದ್ದು. ಕೋಟ್ಯಾಂತರ ಆಸ್ತಿಯ ಒಡತಿಯಾಗಿದ್ದ ಶಾಂತಾಳನ್ನ ಡ್ರೈವರ್ ಕೊಲ್ಲೋ ನಿರ್ಧಾರ ಮಾಡಿದ್ದ. ಅವಳು ಸತ್ತರೆ ಆಸ್ತಿ ನನಗೂ ಸಿಗುತ್ತೆ ಅಂತ ಕನಸು ಕಂಡಿದ್ದ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನೂ ವೀಕ್ಷಿಸಿ: ಮಂಡ್ಯದಲ್ಲಿ ಹೆಚ್‌ಡಿಕೆ ಗೆಲ್ಲೋದಿಲ್ಲವೆಂದ ಡಿಕೆಶಿ..! ಒಕ್ಕಲಿಗ ಸಮುದಾಯಕ್ಕೆ ಅವಮಾನ ಮಾಡಿದ್ರಾ ಕುಮಾರಸ್ವಾಮಿ..?

Related Video