ಮಚ್ಚಿನಿಂದ ಪತ್ನಿ ಕೊಚ್ಚಿ ಕೊಂದ ಪತಿ: ಮಾವನ ಮೇಲೂ ಮಾರಣಾಂತಿಕ ಹಲ್ಲೆ

ಕೌಟುಂಬಿಕ ಕಲಹದಿಂದ ಗ್ರಾಮವೇ ಆತಂಕದಲ್ಲಿರುವಂತೆ ಮಾಡಿದೆ. ಡೈವರ್ಸ್ ಕೇಳಿದ್ದಕ್ಕೆ ಪತಿಯ ಹತ್ಯೆ ನಡೆದಿದೆ. ಅತ್ತೆ ನಾದನಿಯೂ ಮಚ್ಚಿನಿಂದ ಹಲ್ಲೆಗೊಳಾಗಿದ್ದಾರೆ,ಜೊತೆಗೆ ಕೊಲೆ ಮಾಡಿದ ಆರೋಪಿ ಕೂಡಾ ಪೊಲೀಸರ ಗುಂಡೇಟಿನಿಂದ ಆಸ್ಪತ್ರೆ ಸೇರಿದ್ದಾನೆ.
 

Share this Video
  • FB
  • Linkdin
  • Whatsapp

ಮಚ್ಚು ಹಿಡಿದು ಬಂದ ಕಿರಾತಕ ಕೊಚ್ಚುತ್ತಿರುವ ಈ ದೃಶ್ಯ ನೋಡಿ.. ಅಬ್ಬಬ್ಬಾ ಭಯಾನಕ. ಒಂದೇ ಸಮನೆ ಪತ್ನಿಯನ್ನು ಆತ ಕೊಚ್ಚುತ್ತಿದ್ದರೆ, ಮಗಳನ್ನ ಉಳಿಸಿಕೊಳ್ಳಲು ಬಂದ ಮಾವನಿಗೂ ಮಚ್ಚಿನೇಟು ಕೊಟ್ಟಿದ್ದಾನೆ. ಕೊನೆಗೂ ಕಿರಾತಕ ಆಕೆಯನ್ನು ಬದುಕಲು ಬಿಡಲೇ ಇಲ್ಲ. ಇದು ಕೋಲಾರ(Kolar) ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ನಂಬಿಹಳ್ಳಿ ಗ್ರಾಮದಲ್ಲಿ ನಡೆದ ಭಯಾನಕ ದೃಶ್ಯ. ಪತ್ನಿಯನ್ನು ಅಮಾನುಶವಾಗಿ ಕೊಂದ ಹಂತಕನ ಹೆಸರು ನಾಗೇಶ್. ಶ್ರೀನಿವಾಸಪುರ ಪಟ್ಟಣದಲ್ಲಿ ಮಟನ್ ಅಂಗಡಿ ಇಟ್ಟುಕೊಂಡಿದ್ದ ಈತ ಎರಡನೇ ಮದುವೆಯಾಗಿದ್ದಾನೆ. ಆದ್ರೆ ಮೊದಲ ಪತ್ನಿ ರಾಧಾ ಜೀವಂತವಿದ್ದಾಳೆ. ತನ್ನ ತವರು ಮನೆ ನಂಬಿಹಳ್ಳಿ ಗ್ರಾಮದಲ್ಲಿ ಚಿಲ್ಲರೆ ಅಂಗಡಿ ಹಾಕಿಕೊಂಡು, ಟೈಲರಿಂಗ್ (Tailoring) ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದಳು. ಎರಡನೇ ಮದುವೆಯಾದ ನಾಗೇಶ್ ಬಳಿ ಈಕೆ ವಿಚ್ಛೇದನ(Divorce) ಕೇಳಿದ್ದಾಳೆ. ಇದಕ್ಕೆ ಸಿಟ್ಟಿಗೆದ್ದ ನಾಗೇಶ್ ನಿನ್ನೆ ಸಂಜೆ ತನ್ನ ಮಟನ್ ಅಂಗಡಿಯಲ್ಲಿದ್ದ ಮಚ್ಚು ಹಿಡಿದು ಪತ್ನಿಯ ಮನೆಗೆ ಬಂದಿದ್ದಾನೆ.. ಏಕಾಏಕಿ ಮಚ್ಚಿನಿಂದ ಹಲ್ಲೆ ನಡೆಸಿ ಪತ್ನಿ ರಾಧಾಳನ್ನು ಕೊಲೈಗೈದಿದ್ದಾನೆ. ಮಗಳ ಹತ್ಯೆ ತಡೆಯಲು ಬಂದ ಮಾವ ಮುನಿರಾಜು ಮೇಲೂ ನಾಗೇಶ್ ಮಾರಾಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ. ರಾಧಾಳನ್ನು ಕೊಚ್ಚಿ ಕೊಲೆಗೈದ ನಾಗೇಸ್ ವಿರುದ್ಧ ಗ್ರಾಮಸ್ಥರು ತಿರುಗಿ ಬಿದ್ದಿದ್ದಾರೆ. ನಾಗೇಶ್ನನ್ನು ಸುತ್ತುವರಿದು ಆತನ ಕೊಲೆಗೆ(Murder) ಮುಂದಾಗಿದ್ದಾರೆ. ಆಗ ಮಚ್ಚು ಸಮೇತ ಮನೆಯೊಂದಕ್ಕೆ ನುಗ್ಗಿದ ನಾಗೇಶ್ನನ್ನು ಮನೆ ಸಮೇತ ಪೆಟ್ರೋಲ್ ಸುರಿದು ಬೆಂಕಿ ಇಡಲು ಮುಂದಾಗಿದ್ದಾರೆ. ಅಷ್ಟರಲ್ಲಿ ಸ್ಥಳಕ್ಕೆ ಬಂದ ಪೊಲೀಸರು ಗ್ರಾಮಸ್ಥರನ್ನು ತಡೆದು, ಆತನ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನೂ ವೀಕ್ಷಿಸಿ: ಗ್ರಾಮಸ್ಥರ ನೆಮ್ಮದಿ ಕೊಳ್ಳಿ ಇಟ್ಟ LLP ಕಾರ್ಖಾನೆ: ಕಾರ್ಖಾನೆ ದುರ್ವಾಸನೆಗೆ ಗ್ರಾಮಸ್ಥರ ಬದುಕೇ‌ ದುಸ್ಥರ !

Related Video