Raichur Murder: ಅವನನ್ನ ಮುಗಿಸಿದ್ದು ಅವನದ್ದೇ ಕುಟುಂಬಸ್ಥರು..! ಕೊಲೆಗೆ ಕಾರಣ 2 ದಶಕದ ಸೇಡು..!

ತೋಟಕ್ಕೆ ಹೋದವನನ್ನ ಕೊಚ್ಚಿ ಕೊಚ್ಚಿ ಕೊಂದರು..!
ಪರಿಹಾರದ ಹಣಕ್ಕಾಗಿ 2 ಕುಟುಂಬಗಳ ನಡುವೆ ಜಗಳ..!
ಅವನ ಹೆಣ ಹಾಕಲು ಆ ಕುಟುಂಬ ಕಾದಿದ್ದು 2 ದಶಕ..!

First Published Jan 7, 2024, 3:04 PM IST | Last Updated Jan 7, 2024, 3:04 PM IST

ಅವನು ಊರಿಗೆ ಉಪಕಾರಿಯಾಗಿದ್ದವನು. ಗ್ರಾಮದವರಿಗೆ ಏನೇ ಸರ್ಕಾರಿ ಸೌಲಭ್ಯಗಳು ಸಿಗಬೇಕಿದ್ರೂ ಈತನನ್ನೇ ಸಂಪರ್ಕಿಸುತ್ತಿದ್ರು. ಇಂಥವನನ್ನ ಆವತ್ತು ಹಂತಕರು ಬರ್ಬರವಾಗಿ ಕೊಂದು ಮುಗಿಸಿದ್ರು. ತನ್ನ ತೋಟಕ್ಕೆ ಹೋಗಿ ನೀರು ಬಿಟ್ಟು ವಾಪಸ್ ಆಗುತ್ತಿರುವಾಗ್ಲೇ ಆತನನ್ನ ಹಿಂಬಾಲಿಸಿ ಸಿನಿಮಾ ರೀತಿಯಲ್ಲಿ ಕೊಲೆ ಮಾಡಿದ್ರು. ಇನ್ನೂ ಈ ಕೊಲೆಗೆ ಸಾಕ್ಷಿಯಾಗಿದ್ದವನು ಕೊಲೆಯಾದವನ(Murder) ಸ್ನೇಹಿತನೇ. ಬೈಕ್ನಲ್ಲಿ ಹಿಂದೆ ಕೂತು ಬರ್ತಿದ್ದವನು ಆವತ್ತು ಹಂತಕರ ಎಂಟ್ರಿಯಾಗ್ತಿದ್ದಂತೆ ಎಸ್ಕೇಪ್ ಆಗಿದ್ದ. ಇನ್ನೂ ಇದೇ ಕೊಲೆ ಕೇಸ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರಿಗೆ (Police)ದಶಕಗಳ ಕಾಲದ ದ್ವೇಷದ ವಾಸನೆ ಬಡೆದಿತ್ತು. ಕೆಲವರು ಅಣ್ಣ ತಮ್ಮಂದಿರಾದ್ರೆ. ಕೆಲವ್ರು ಮಾವ ಅಳಿಯ ಆಗಬೇಕಿರೋರು.. ಇಂಥ ತೀರಾ ಹತ್ತಿರ ಸಂಬಂಧಿಗಳೇ ಮಾರ್ಕಂಡಯ್ಯನನ್ನ ಕೊಚ್ಚಿ ಕೊಂದಿದ್ರು. ಎರಡು ದಶಕಗಳ ಹಿಂದೆ ಆ ಕುಟುಂಬ ಜೇನುಗೂಡಿನಂತಿತ್ತು. ಆದ್ರೆ ಈ ಟೈಂನಲ್ಲಿ ಗ್ರಾಮಕ್ಕೆ ಬಂದ ನಾರಾಯಣಪುರ ಬಲದಂಡೆ ಕಾಲುವೆಯ ಯೋಜನೆ ಆ ಕುಟುಂಬವನ್ನ ಎರಡು ಭಾಗ ಮಾಡಿತ್ತು. ಕಾಲುವೆಯ ಪರಿಹಾರದ ಹಣಕ್ಕಾಗಿ ಆ ಎರಡು ಕುಟುಂಬಗಳ ನಡುವೆ ದ್ವೇಷ ಹುಟ್ಟಿತ್ತು. ಅದು ಒಂದು ಹೆಣ ಬೀಳುವವರೆಗೂ ಹೋಗಿತ್ತು. ಆದ್ರೆ ಇನ್ನೇನು ಎಲ್ಲಾ ಮುಗೀತು ಅಂದುಕೊಳ್ಳುತ್ತಿರುವಾಗ್ಲೆ ಕೊಲೆಯಾದ ಮಾರ್ಖಂಡಯ್ಯನ ಸಹೋದರ ಗ್ರಾಮ ಪಂಚಾಯ್ತಿ ಎಲೆಕ್ಷನ್‌ಗೆ ನಿಂತ.. ಅವನ ಆಪೋಸಿಟ್ಟಾಗಿ ನಿಂತವನು ಮತ್ತದೇ ಎದುರಾಳಿ ಕುಟುಂಬದ ಹುಡುಗ. ಮಾರ್ಖಂಡಯ್ಯನೇನೋ ಗೆದ್ದು ಬಿಟ್ಟ ಆದ್ರೆ ಎದುರಳಿಯ ಸೋಲು ಅವನ ಕಥೆಯನ್ನೇ ಮುಗಿಸುವಂತೆ ಮಾಡಿಬಿಟ್ಟಿತ್ತು. ಮನೆಗೆ ಬೆನ್ನೆಲುಬಾಗಿದ್ದ ಮಾರ್ಖಂಡಯ್ಯನನ್ನ ಇವತ್ತು ಹೊಡೆದುಹಾಕಿದ್ದಾರೆ. ಆದ್ರೆ ಮಾರ್ಖಂಡಯ್ಯನ ಕುಟುಂಬಸ್ಥರು ಮಾತ್ರ ಸೇಡು ತೀರಿಸಿಕೊಳ್ಳುವ ಮಾತನ್ನಾಡುತ್ತಿದ್ದಾರೆ.

ಇದನ್ನೂ ವೀಕ್ಷಿಸಿ:  ಪಾತ್ರಧಾರಿಗಳ ಹಿಂದಿದ್ದಾರಾ ಆ "ರಿಯಲ್" ಸೂತ್ರಧಾರ..? ಡಿಕೆಗೆ ದಿಗ್ಬಂಧನ ಹಾಕಲು ಮುಂದಾಯ್ತಾ ಸಿದ್ದರಾಮಯ್ಯ ಬಣ..?