ಪ್ರೀತಿ ನಿರಾಕರಿಸಿದ್ದಕ್ಕೆ ಮಗುವನ್ನೇ ಕೊಂದ ಅಪ್ರಾಪ್ತೆ..! ಪ್ರೀತಿ ಸಿಗಲಿಲ್ಲ ಎಂದು ಹೀಗೆ ಮಾಡೋದಾ ?

ಯಲ್ಲಪ್ಪ ಎಂಬಾತನನ್ನು 2 ವರ್ಷದಿಂದ ಪ್ರೀತಿಸುತ್ತಿದ್ದ  ಅಪ್ರಾಪ್ತೆ
ಮಗು ಕೊಲೆ ಮಾಡಿ ಯಲ್ಲಪ್ಪನ ಮೇಲೆ ಆರೋಪ ಹೊರಿಸಲು ಯತ್ನ
ಯಲ್ಲಪ್ಪ ಜೈಲಿಗೆ ಹೋಗ್ತಾನೆ ಅಂತ ಸಂಚು ಹಾಕಿದ್ದ ಅಪ್ರಾಪ್ತ ಪಾತಕಿ 

Share this Video
  • FB
  • Linkdin
  • Whatsapp

ಯಾದಗಿರಿಯಲ್ಲಿ 2 ತಿಂಗಳ ಹಸುಗೂಸು ಕೊಲೆ ಕೇಸ್‌ಗೆ(Child Murder case) ಟ್ವಿಸ್ಟ್ ಸಿಕ್ಕಿದ್ದು, ಪ್ರೀತಿ(Love) ನಿರಾಕರಿಸಿದ್ದಕ್ಕೆ ಮಗುವನ್ನೇ ಅಪ್ರಾಪ್ತೆ(Minor girl)ಕೊಂದಿರುವುದಾಗಿ ತಿಳಿದುಬಂದಿದೆ. ನಾಗೇಶ್ ಹಾಗೂ ಚಿಟ್ಟೆಮ್ಮ ಮಗವನ್ನು ಅಪ್ರಾಪ್ತೆ ಕೊಂದಿದ್ದಾಳೆ. ನಾಗೇಶ್‌ನ ತಮ್ಮ ಯಲ್ಲಪ್ಪನನ್ನ ಅಪ್ರಾಪ್ತೆ ಪ್ರೀತಿಸುತ್ತಿದ್ದಳಂತೆ. ಸಂಬಂಧದಿಂದ ತಂಗಿಯಾಗಬೇಕೆಂದು ಈ ಪ್ರೀತಿಯನ್ನು ಯಲ್ಲಪ್ಪ ನಿರಾಕರಿಸಿದ್ದನಂತೆ. ಯಲ್ಲಪ್ಪನ ಮೇಲೆ ಸೇಡು ತೀರಿಸಿಕೊಳ್ಳಲು ಅಪ್ರಾಪ್ತೆ ಈ ಪ್ಲ್ಯಾನ್‌ ಮಾಡಿದ್ದಾಳೆ. ಮಗುವನ್ನು ಕೊಲೆ ಮಾಡಿ ಯಲ್ಲಪ್ಪನ ಮೇಲೆ ಹಾಕಲು ಪ್ಲ್ಯಾನ್‌ ಮಾಡಿದ್ದು, ಜುಲೈ 6ರಂದು ಮಗುವನ್ನು ಬಾವಿಗೆ ಎಸೆದಿದ್ದಾಳೆ. ಬಳಿಕ ಪೋಷಕರ ಜತೆ ಮಗು ಹುಡುಕುವ ಡ್ರಾಮಾ ಮಾಡಿದ್ದಾಳೆ. ಮಗು ಹತ್ಯೆ ಬಳಿಕ ಕಣ್ಣೀರಾಕಿ ನಾಟಕ ಮಾಡಿದ್ದ ಹಂತಕಿ,ಅನುಮಾನ ಬಂದು ಪೊಲೀಸರ ವಿಚಾರಣೆ ನಡೆಸಿದಾಗ ಈ ಕೃತ್ಯ ಬಯಲಿದೆ ಬಂದಿದೆ. 

ಇದನ್ನೂ ವೀಕ್ಷಿಸಿ: Rain lashed Mumbai: ಮಹಾಮಳೆಗೆ ಮುಳುಗಿದ ವಾಣಿಜ್ಯ ನಗರಿ ಮುಂಬೈ..ಆರು ಗಂಟೆಗಳಲ್ಲಿ 300 ಮಿ.ಮೀಗಿಂತಲೂ ಅಧಿಕ ವರ್ಷಧಾರೆ!

Related Video