ಮಟ ಮಟ ಮಧ್ಯಾಹ್ನ ಒಂಟಿ ಮಹಿಳೆ ಕೊಲೆ: ಅನ್ನ ಹಾಕಿದ ಮನೆಗೆ ಕನ್ನ ಹಾಕಿದ ಕೊಲೆಗಾರ..!

8 ತಿಂಗಳು ಆ ಮನೆಯನ್ನ ಚೆನ್ನಾಗಿ ವಾಚ್ ಮಾಡಿದ್ದ..!
ಮನೆಯಲ್ಲಿ ಯಾರೂ ಇಲ್ಲದ ಹೊತ್ತಿಗೆ ಕಾದ ಗ್ಯಾಂಗ್..!
35 ಲಕ್ಷವನ್ನ 7 ಜನರು ಸಮನಾಗಿ ಹಂಚಿಕೊಂಡಿದ್ರು..!

First Published Jul 2, 2023, 2:36 PM IST | Last Updated Jul 2, 2023, 2:36 PM IST

ಅವರು ಎಂಜಿನಿಯರ್, ನಿರಾವರಿ ಇಲಾಖೆಯಲ್ಲಿ AEE. ಇನ್ನೂ ಮಗ ಎಂ.ಬಿ.ಬಿಎಸ್ ಮುಗಿಸಿ ಎಂ.ಡಿ ಮಾಡುವ ತಯಾರಿಯಲ್ಲಿದ್ದ. ಹೆಂಡತಿ ಹೌಸ್ ವೈಫ್.. ದುಡ್ಡು ಕಾಸಿಗಾಗಲಿ, ನೆಮ್ಮದಿ, ಸುಖಕ್ಕಾಗಲಿ ಆ ಮನೆಯಲ್ಲಿ ಯಾವುದೇ ತೊಂದರೆ ಇರಲಿಲ್ಲ. ಆದ್ರೆ ಆವತ್ತು ಗಂಡ ಆಫೀಸ್‌ಗೆ ಹೋಗಿದ್ರೆ ಮಗ ಬೆಂಗಳೂರಿಗೆ ಹೋಗಿದ್ದ. ಹೆಂಡತಿ ಮನೆಯಲ್ಲಿ ಒಂಟಿಯಾಗಿದ್ರು. ಇದೇ ಟೈಂನಲ್ಲಿ ಮನೆಗೆ ಎಂಟ್ರಿ ಕೊಟ್ಟಿದ್ದರು ಹಂತಕರು. ಮನೆಯಲ್ಲಿ ಒಂಟಿಯಾಗಿದ್ದ ಮಹಿಳೆಯ ಕತ್ತು ಕೊಯ್ದು ಕನ್ನ ಹಾಕಿದ್ರು. ಇನ್ನೂ ವಿಷ್ಯ ತಿಳಿದ ಪೊಲೀಸರು ಅಖಾಡಕ್ಕೆ ಇಳಿದ್ರು. ಬಟ್ ಯಾವುದೇ ಕ್ಲೂ ಸಿಕ್ಕಿರಲಿಲ್ಲ. ಪೊಲೀಸರು ಮಾತ್ರ ಕೊಲೆಗಾರರ ಹೆಡೆಮುರಿ ಕಟ್ಟವವರೆಗೆ ನಿದ್ದೆ ಮಾಡಿರಲಿಲ್ಲ. ಕಮ್ಮಲಮ್ಮನನ್ನ ಕೊಲೆ ಮಾಡಿ 35 ಲಕ್ಷ ದೋಚಿದ್ದ ಕೇಸ್ನ ಕೈಗೆತ್ತಿಕೊಂಡ ಪೊಲೀಸರಿಗೆ ಒಂದೇ ಒಂದು ಕ್ಲೂ ಸಿಕ್ಕಿರಲಿಲ್ಲ. ಆದ್ರೆ ಕಮಲಮ್ಮನ ಗಂಡ ಮಲ್ಲಿಕಾರ್ಜುನಯ್ಯನೇ ಒಬ್ಬನ ಬಗ್ಗೆ ಮಾಹಿತಿ ಕೊಟ್ಟಿದ್ರು. ಅವರ ಬಳಿ ಡ್ರೈವರ್ ಕೆಲಸ ಮಾಡಿಕೊಂಡಿದ್ದ ಹನುಮಂತ ನಾಯ್ಕ ಕಮಲಮ್ಮ ಕೊಲೆಯಾದಾಗಿನಿಂದ ನಾಪತ್ತೆಯಾಗಿದ್ದಾನೆ ಅನ್ನೋ ಇನ್ಫಾರ್ಮೆಷನ್ ಪೊಲೀಸರಿಗೆ ಕೊಟ್ರು.. ಪೊಲೀಸರು ಹನುಮಂತನ ನಂಬರ್ಗೆ ಕಾಲ್ ಮಾಡಿದ್ರೆ, ಫೋನ್ ಸ್ವಿಚ್ ಆಫ್... ಪೊಲೀಸರು ಹಂತಕ ಇವನೇ ಅನ್ನೋ ನಿರ್ಧಾರಕ್ಕೆ ಬಂದು ಬಿಟ್ರು. ಕೊನೆಗೂ ಕಮಲಮ್ಮನ ಹಂತಕರು ತಗ್ಲಾಕಿಕೊಂಡ್ರು. ತಿಂದ ಮನೆಗೇ ಹನುಮಂತ ಕನ್ನ ಹಾಕಿದ. ಆದ್ರೆ ಹಂತಕರನ್ನ ಎತ್ತಾಕೊಂಡು ಬಂದ ಪೊಲೀಸರು ವಿಚಾರಣೆ ಆರಂಭಿಸಿದ್ರು. ಆಗ ಹನುಮಂತ ಆ್ಯಂಡ್ ಗ್ಯಾಂಗ್ ಕೊಟ್ಟ ಒಂದೊಂದು ಉತ್ತರಗಳು ಪೊಲೀಸರ ತಲೆ ತಿರುಗುವಂತೆ ಮಾಡಿತ್ತು.

ಇದನ್ನೂ ವೀಕ್ಷಿಸಿ: ಆ್ಯಕ್ಷನ್ ಪ್ರಿನ್ಸ್ ನಟಿಸಿರೋ ಮಾರ್ಟಿನ್ ಬರೋದ್ಯಾವಾಗ ?: ಶೂಟಿಂಗ್ ಭಾಕಿ ಉಳಿಸಿದ್ದೇಕೆ ನಿರ್ದೇಶಕ ಎ.ಪಿ. ಅರ್ಜುನ್?

Video Top Stories