Asianet Suvarna News Asianet Suvarna News

ಬಿಟೌನ್‌ನಲ್ಲಿ ಶ್ರೀಲೀಲಾಗೆ ಬಿಗ್ ಆಫರ್..! ಬಾಲಿವುಡ್ ಅಂಗಳಕ್ಕೆ ಹಾಯ್ ಎಂದ ಶ್ರೀಲೀಲಾ..!

ಬಿಟೌನ್‌ನಲ್ಲಿ ಶ್ರೀಲೀಲಾಗೆ ಬಿಗ್ ಆಫರ್..!
ವರುಣ್ ಧವನ್‌ಗೆ ನಾಯಕಿ ಭರಾಟೆ ಬ್ಯೂಟಿ!
ಶ್ರೀವಲ್ಲಿ ಹಾದಿಯಲ್ಲಿ ಕಿಸ್ ಚೆಲುವೆ ಶ್ರೀಲೀಲಾ!

ಕನ್ನಡತಿ ಹಾಟ್ ಸುಂದರಿ ಶ್ರೀಲೀಲಾ (Sreeleela) ಬಾಲಿವುಡ್‌ಗೆ ಹಾಯ್‌ ಹೇಳಿದ್ದಾರೆ. ರಶ್ಮಿಕಾ ಮಂದಣ್ಣ ಮಾಲಿವುಡ್ ಬಿಟ್ಟು ಮಿಕ್ಕೆಲ್ಲಾ ವುಡ್‌ಗಳಲ್ಲಿಯೂ ರೌಂಡ್ಸ್ ಹೊಡೆದಿದ್ದಾರೆ. ಬಿಟೌನ್ ಬ್ಯೂಟಿಗಳಿಗೆ ಟಕ್ಕರ್ ಕೊಡ್ತಿದ್ದಾರೆ. ಈಗ ಟ್ರೆಂಡ್ ಶುರುವಾಗುತ್ತಿರೋದು ಕನ್ನಡತಿ ಶ್ರೀಲೀಲಾರದ್ದು. ಯಾಕಂದ್ರೆ ಕಿಸ್ ಚೆಲುವೆ ಶ್ರೀಲೀಲಾ ಜರ್ನಿ ಶರುವಾಗಿದೆ. ರಶ್ಮಿಕಾ ಈಗ ಬಾಲಿವುಡ್‌ನ (Bollywood) ಟಾಪ್ ಹೀರೋಯಿನ್, ಹಿಂದಿಯಲ್ಲಿ ಒಟ್ಟೊಟ್ಟಿಗೆ ಮೂರು ಸಿನಿಮಾ ಮಾಡುತ್ತಿದ್ದಾರೆ. ರಶ್ಮಿಕಾಗೆ ಪೈಪೋಟಿ ಕೊಡೋದಿಕ್ಕೀಗ ಬಾಲಿವುಡ್‌ಗೆ ಭರಾಟೆ ಬ್ಯೂಟಿ ಎಂಟ್ರಿ ಕೊಡುತ್ತಿದ್ದಾರೆ. ತೆಲುಗು ಚಿತ್ರರಂಗದಲ್ಲಿ ಸಾಲು ಸಾಲು ಸೋಲು ಕಂಡಿರೋ ಶ್ರೀಲೀಲಾ ಮತ್ತೆ ಭರ್ಜರಿಯಾಗಿ ಕಮ್‌ಬ್ಯಾಕ್ ಮಾಡಿದ್ದಾರೆ. ಮಾಸ್ ಮಹಾರಾಜ ರವಿತೇಜ ಜೊತೆಗೂಡಿ ಧಮಾಕ ಎಬ್ಬಿಸಿದ್ದ ಕಿಸ್ ಕ್ಯೂಟಿ ಈಗ ಬಿಟೌನ್ ಚಿತ್ರರಂಗ ಪ್ರವೇಶಿಸ್ತಿದ್ದಾರೆ. ನಟನೆ, ನೃತ್ಯದಲ್ಲಿ ತೆಲುಗಿನಲ್ಲಿ ಸೆನ್ಸೇಷನ್ ಸೃಷ್ಟಿಸಿದ್ದ ಲೀಲಾ ಈಗ ಬಾಲಿವುಡ್ ಗೆ ಹಾರಿದ್ದು, ವರುಣ್ ಧವನ್ (Varun Dhawan) ನಟಿಸ್ತಿರುವ ಹೊಸ ಸಿನಿಮಾದಲ್ಲಿ ನಾಯಕಿಯಾಗಿ ಮಿಂಚಲಿದ್ದಾರೆ. ಶ್ರೀಲೀಲಾ ಪವನ್ ಕಲ್ಯಾಣ್, ಬಾಲಯ್ಯ, ಮಹೇಶ್ ಬಾಬು, ನಿತಿನ್ ಸೇರಿದಂತೆ ತೆಲುಗಿನ ಬಿಗ್ ಸ್ಟಾರ್ ಜೊತೆ ನಟಿಸಿದ ಅನುಭವ ಇದೆ. ಈಗ ಹಿಂದಿ ಚಿತ್ರರಂಗದಲ್ಲಿಯೂ ಧೂಳ್ ಎಬ್ಬಿಸಲು ರೆಡಿಯಾಗಿದ್ದಾರೆ. 

ಇದನ್ನೂ ವೀಕ್ಷಿಸಿ:  ಒಂದಾಗುತ್ತಿರುವ ‘ರಮೇಶ್- ಗಣೇಶ್’! ಇದು ಭಗ್ನ ಪ್ರೆಮಿಗಳ ಕಥೆಯಾ..?

Video Top Stories