ಅಮ್ಮ-ಮಗಳು ಇಬ್ಬರಿಗೂ ಅವನೇ ಬೇಕು! ಅಡ್ಡಿಯಾಗಿದ್ದ ಯಜಮಾನನಿಗೆ ಮುಹೂರ್ತ ಇಟ್ಟರು!

ಅದೊಂದು ಬಡ ಕುಟುಂಬ, ಕುಟುಂಬದಲ್ಲಿ ಮೂವರು. ಆದ್ರೆ ಮೂವರದ್ದೂ ಒಂದೊಂದು ದಿಕ್ಕು. ಮನೆಯ ಯಜಮಾನ ಒಂದು ಕಡೆ ಜೀವನ ಮಾಡ್ತಿದ್ರೆ ಮತ್ತೊಂದು ಕಡೆ ಅಮ್ಮ ಮಗಳು. ಗಂಡ ಗಾರೆ ಕೆಲಸ ಮಾಡ್ತಿದ್ರೆ ಹೆಂಡತಿ ಮಗಳು ಕೂಲಿ ಮಾಡಿಕೊಂಡಿದ್ರು. ಆದ್ರೆ ಆವತ್ತೊಂದು ದಿನ ಗಂಡ ಮಿಸ್ಸಿಂಗ್​​​. ಎಲ್ಲಿ ಹೋದ ಏನಾದ ಒಂದೂ ಗೊತ್ತಿಲ್ಲ ಆದ್ರೆ ಆತ ಕಾಣೆಯಾಗಿ ಒಂದು ವಾರದ ನಂತರ ಆತ ಹೆಣವಾಗಿ ಸಿಕ್ಕಿದ್ದ.

Share this Video
  • FB
  • Linkdin
  • Whatsapp

ಅಮ್ಮ ಮತ್ತು ಮಗಳಿಗೆ ಇಬ್ಬರಿಗೂ ಅವನೊಬ್ಬನೇ ಬೇಕಿತ್ತು. ಇದಕ್ಕಾಗಿ ಮನೆಯ ಯಜಮಾನನ್ನೇ ಹೊರಗೆ ಹಾಕಿದ್ರು. ಇನ್ನೂ ಮದುವೆಯಾಗಿ ಗಂಡನ ಮನೆಗೆ ಹೋಗಿದ್ದ ಮಗಳೂ ಕೂಡ ಅವನೊಬ್ಬನಿಗಾಗಿ ತವರು ಮನೆ ಸೇರಿದ್ಲು. ಆದ್ರೆ ದೂರ ಇದ್ದ ಗಂಡ ಹೆಂಡತಿ ಮಗಳ ಕಥೆಯನ್ನ ಎಲ್ಲರಿಗೂ ಹೇಳಿಕೊಂಡು ಬರ್ತಿದ್ದ. ಇದ್ರಿಂದ ಕೆರಳಿದ ಅಮ್ಮ ಮಗಳು ತಮ್ಮ ಪ್ರೀಯಕರನೊಂದಿಗೆ ಸೇರಿಕೊಂಢು ಸ್ಕೆಚ್​​ ರೆಡಿ ಮಾಡಿಯೇಬಿಟ್ಟರು.

Related Video