Asianet Suvarna News Asianet Suvarna News

ಹಿಂದೂ ವ್ಯಕ್ತಿ ಜೊತೆ ಮುಸ್ಲಿಂ ಸಹೋದ್ಯೋಗಿ: ಮುಸ್ಲಿಂ ಗುಂಪಿನಿಂದ ನೈತಿಕ ಪೊಲೀಸ್‌ಗಿರಿ!

Sep 19, 2021, 10:28 AM IST

ಬೆಂಗಳೂರು (ಸೆ. 19): ಇವರಿಬ್ಬರೂ ಬಿಟಿಎಂ ಲೇಔಟ್‌ನ ಬ್ಯಾಂಕೊಂದರಲ್ಲಿ ಉದ್ಯೋಗಿಗಳು. ಬ್ಯಾಂಕ್ ಕೆಲಸ ತಡವಾಗಿ ಮುಗಿಯಿತು ಎಂದು ಯುವತಿಯನ್ನು ಡ್ರಾಪ್ ಮಾಡಲು ಹಿರಿಯ ಅಧಿಕಾರಿಗಳು ಹೇಳುತ್ತಾರೆ. ಅದರಂತೆ ಯುವಕ ಮಹೇಶ್, ಮುಸ್ಲಿಂ ಯುವತಿಯನ್ನು ಡ್ರಾಪ್ ಮಾಡಲು ಹೋಗಿದ್ಧಾರೆ. ಆಗ ಮುಸ್ಲಿಂ ಯುವಕರ ಗುಂಪು ಇವರ ಮೇಲೆ ಹಲ್ಲೆ ನಡೆಸಿದೆ. ಮಹಿಳೆಯ ಮನೆಯವರ ಫೋನ್ ನಂಬರ್ ಪಡೆದು, ಅವರಿಗೂ ನಿಂದಿಸಿದ್ದಾರೆ. ಬೈಕ್ ಬಿಟ್ಟು ಆಟೋದಲ್ಲಿ ಮನೆಗೆ ಹೋಗುವಂತೆ ತಾಕೀತು ಕೂಡಾ ಮಾಡಿದ್ದಾರೆ. ಇದೆಂಥಾ ನೈತಿಕ ಪೋಲಿಸ್‌ಗಿರಿ..?

ಅನ್ಯ ಕೋಮಿನ ಯುವಕನ ಜೊತೆ ಯುವತಿಯರ ಪ್ರಯಾಣ ಆರೋಪ: ಬಸ್ ತಡೆದ ಭಜರಂಗದಳ ಯುವಕರು