Asianet Suvarna News Asianet Suvarna News

ಆದಿಲ್‌ ಸಾವು ಪ್ರಕರಣ: ನನ್ನ ಗಂಡ ಲೋಕಲ್ ಪೊಲೀಸರಿಗೆ ಪ್ರತಿ ತಿಂಗಳು ಮಾಮೂಲು ನೀಡ್ತಿದ್ದ ಎಂದ ಪತ್ನಿ!

ಚನ್ನಗಿರಿಯಲ್ಲಿ ಲಾಕಪ್ ಡೆತ್ ಆರೋಪ ಸಂಬಂಧ ಹೊಸ ವಿಷಯ ಬೆಳಕಿಗೆ ಬಂದಿದೆ. ಈ ಮೂಲಕ ಚನ್ನಗಿರಿಯಲ್ಲಿ ಬೇರು ಬಿಟ್ಟಿದಿಯಾ ಮಟ್ಕಾ ದಂಧೆ ಎನ್ನುವ ಪ್ರಶ್ನೆ ಕಾಡತೊಡಗಿದೆ. ಯಾಕೆಂದರೆ ಆದಿಲ್ ಸಾವಿನ ಸುತ್ತಾ ಮಟ್ಕಾ ದಂಧೆಯ ಜಾಡು ಕಂಡುಬರುತ್ತಿದೆ. ಆದಿಲ್ ಮಟ್ಕಾ ದಂಧೆ ಬಗ್ಗೆ ಪತ್ನಿ ಹೀನಾಬಾನು ಒಪ್ಪಿಕೊಂಡಿದ್ದಾರೆ.  

ಚನ್ನಗಿರಿಯಲ್ಲಿ(Channagiri) ಲಾಕಪ್ ಡೆತ್ (Lockup Death) ಆರೋಪ ಸಂಬಂಧ ಇದೀಗ ಚನ್ನಗಿರಿ ಧಗಧಗ ಉರಿಯುತ್ತಿದೆ. ಅಲ್ಲದೆ ಈ ವೇಳೆ ಚನ್ನಗಿರಿಯಲ್ಲಿ ಬೇರು ಬಿಟ್ಟಿದಿಯಾ ಮಟ್ಕಾ ದಂಧೆ ಎನ್ನುವ ಪ್ರಶ್ನೆ ಕಾಡತೊಡಗಿದೆ. ಯಾಕೆಂದರೆ ಆದಿಲ್ (Adil) ಸಾವಿನ ಸುತ್ತಾ ಮಟ್ಕಾ ದಂಧೆಯ ಜಾಡು ಕಂಡುಬರುತ್ತಿದೆ. ಆತನ ಸಾವಿಗೆ ಮಟ್ಕಾ ದಂಧೆಯೆ ಕಾರಣವಾಯ್ತಾ ಅನ್ನೋ ಪ್ರಶ್ನೆ ಮೂಡಿದ್ದು, ಆದಿಲ್ ಮಟ್ಕಾ ದಂಧೆ ಬಗ್ಗೆ ಪತ್ನಿ ಹೀನಾಬಾನು ಒಪ್ಪಿಕೊಂಡಿದ್ದಾರೆ. ಅಲ್ಲದೆ  ಚನ್ನಗಿರಿ ಪೊಲೀಸರಿಗೆ ಮಟ್ಕಾ ಕಮಿಷನ್‌ನಲ್ಲಿ ಪಾಲನ್ನೂ ಸಹ ನೀಡಲಾಗುತ್ತಿತ್ತಂತೆ. ನನ್ನ ಗಂಡ ಲೋಕಲ್ ಪೊಲೀಸರಿಗೆ ಪ್ರತಿ ತಿಂಗಳು ಮಾಮೂಲು ನೀಡ್ತಿದ್ದ, ಈ ತಿಂಗಳು ಮಾಮೂಲು ನೀಡಿಲ್ಲ ಎಂದು ಕರೆದುಕೊಂಡು ಹೋಗಿದ್ರು, ಆದ್ರೆ ನನ್ನ ಗಂಡನನ್ನೇ ಕೊಂದು ಬಿಟ್ಟಿದ್ದಾರೆ ಎಂದು ಹೀನಾಬಾನು ಅಳಲು ತೋಡಿಕೊಂಡಿದ್ದಾರೆ. 

ಇನ್ನುಯ ಚನ್ನಗಿರಿಯಲ್ಲಿ ಯಾವುದೇ ಮಟ್ಕಾ ದಂಧೆ (Matka Gang) ಇಲ್ಲ ಎಂದು ‘ಕೈ’ ಶಾಸಕ ಹೇಳಿಕೆ ನೀಡಿದ್ದಾರೆ. ಆದರೆ ಈ ಹಿಂದೆ ಆದಿಲ್ ಮೇಲೆಯೇ 3 ಬಾರಿ ಮಟ್ಕಾ ಕೇಸ್ ದಾಖಲಾಗಿದೆ. ಆದಿಲ್ ಸಾವಿನ ಬಳಿಕ ಚನ್ನಗಿರಿಯಲ್ಲಿ ಮಟ್ಕಾ ದಂಧೆ ಗುಟ್ಟು ರಟ್ಟಾಗಿದ್ದು,  ಮಟ್ಕಾ ದಂಧೆಗೆ ಡಿವೈಎಸ್‌ಪಿ, ಸರ್ಕಲ್ ಇನ್‌ಸ್ಪೆಕ್ಟರ್‌ ತಲೆದಂಡವಾಗಿದ್ದು, ಮಟ್ಕಾ ವಿರುದ್ಧ ಚನ್ನಗಿರಿ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.

ಇದನ್ನೂ ವೀಕ್ಷಿಸಿ:  ಕರ್ನಾಟಕ ಬಿಹಾರ ಆಗುತ್ತಿದೆ ಎಂದ ವಿಜಯೇಂದ್ರ: 27 ಜನರ ಸಾವಿಗೆ ಹೊಣೆ ಯಾರು ಎಂದ ಪರಮೇಶ್ವರ್‌?